ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಬಳಿ ಅಪಘಾತ, ಮೂವರು ಸಾವು, ಮೂವರು ಗಂಭೀರ

ಮೃತರನ್ನು ಬೆಂಗಳೂರಿನ ಶಿವಪ್ರಕಾಶ್ (37) ಪುಟ್ಟಗೌರಮ್ಮ (72) ಮತ್ತು ಚನ್ನಪಟ್ಟಣದ ಮಂಗದಹಳ್ಳಿಯ ಶಿವರತ್ನ (50) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ನಟರಾಜು (42) ಮತ್ತು ಸುಮಾ (36) ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಬೆಂಗಳೂರು- ಮೈಸೂರು ಹೈವೇ ಬಳಿ ಅಪಘಾತ, ಮೂವರು ಸಾವು, ಮೂವರು ಗಂಭೀರ

ಹರೀಶ್‌ ಕೇರ ಹರೀಶ್‌ ಕೇರ Mar 28, 2025 10:04 AM

ಬೆಂಗಳೂರು: ರಾಮನಗರ (Ramanagara news) ಜಿಲ್ಲೆಯ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ (Road Accident) ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಿಟ್ಟಮಾರನಹಳ್ಳಿ ಬೈ-ಪಾಸ್‌ನಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಂಗಳೂರು- ಮೈಸೂರು ಹೆದ್ದಾರಿ (Bengaluru- mysuru expressway) ಪಕ್ಕದಲ್ಲಿ ಮೈಸೂರು ಕಡೆಗೆ ತೆರಳುವ ಪ್ರವೇಶ ನಿಯಂತ್ರಿತ ಜಾಗದಲ್ಲಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ.

ಮೃತರನ್ನು ಬೆಂಗಳೂರಿನ ಶಿವಪ್ರಕಾಶ್ (37) ಪುಟ್ಟಗೌರಮ್ಮ (72) ಮತ್ತು ಚನ್ನಪಟ್ಟಣದ ಮಂಗದಹಳ್ಳಿಯ ಶಿವರತ್ನ (50) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ನಟರಾಜು (42) ಮತ್ತು ಸುಮಾ (36) ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ವ್ಯಾನ್ ಚಾಲಕ ನಾಗೇಶ್ ಕೂಡ ಗಾಯಗೊಂಡಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇತ್ತೀಚೆಗೆ ವೇಗದ ಪ್ರಮಾಣವನ್ನು ಇಳಿಕೆ ಮಾಡಿದ ಬಳಿಕ ಅಪಘಾತಗಳ ಸಂಖ್ಯೆ ತಗ್ಗಿತ್ತು ಹಾಗೂ ಸಾವುಗಳ ಸಂಖ್ಯೆ ಇಳಿಮುಖವಾಗಿತ್ತು. ಇತ್ತೀಚೆಗೆ ಕೆಲವು ಕಡೆ ಎಕ್ಸ್‌ಪ್ರೆಸ್‌ವೇಗೆ ಸರ್ವಿಸ್‌ ರಸ್ತೆಗಳಿಂದ ಆಗಮನ ಹಾಗೂ ನಿರ್ಗಮನಗಳನ್ನು ಕೂಡ ನಿರ್ಬಂಧಿಸಲಾಗಿದೆ.

ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಇಬ್ಬರು ಸಾವು

ಬೆಂಗಳೂರು: ಬೆಂಗಳೂರಿನಲ್ಲಿ (‌Bengaluru news) ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬಿಎಂಟಿಸಿ (BMTC Bus accident) ಬಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಹಳೆ ಏರ್ ಪೋರ್ಟ್ ರಸ್ತೆಯ ಮುರುಗೇಶ್ ಪಾಳ್ಯ ಸಿಗ್ನಲ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುರುಗೇಶ್ ಪಾಳ್ಯ ಸಿಗ್ನಲ್‌ನಲ್ಲಿ ಬೈಕ್ ಸವಾರ ಯೂಟರ್ನ್ ತೆಗೆದುಕೊಳ್ಳುವಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ನೆಲಕ್ಕಪ್ಪಳಿಸಿತು. ಸವಾರ ಹಾಗೂ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ವಿವರ ತಿಳಿದುಬರಬೇಕಿದೆ.

ಧಾರವಾಡದಲ್ಲಿ ಫ್ಯಾಕ್ಟರಿ ಗೋಡೆ ಕುಸಿದು ಇಬ್ಬರು ಸಾವು

ಧಾರವಾಡ : ಧಾರವಾಡ (Dharawada news) ಜಿಲ್ಲೆಯಲ್ಲಿ ಘೋರ ದುರಂತವೊಂದು (Tragedy) ಸಂಭವಿಸಿದೆ. ಕಾರ್ಖಾನೆಯ ನಿರ್ಮಾಣ ಹಂತದ ಗೋಡೆ ಗಾಳಿ ಮಳೆಗೆ ಕುಸಿದು (Building Collapse) ಇಬ್ಬರು ಕೂಲಿ (Coolie) ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಮೃತ ಕಾರ್ಮಿಕರನ್ನು ಹಳೇಹುಬ್ಬಳ್ಳಿಯ ಧಾರವಾಡ ಫ್ಲಾಟ್ ನ ನಿವಾಸಿ ದಾವೂದ್ ಸವಣೂರು (32) ಹಾಗೂ ಹಳೇಹುಬ್ಬಳ್ಳಿ ನೂರಾನಿ ಫ್ಲಾಟ್ ನಿವಾಸಿ ರಫಿಕ್ ಸಾಬ್ ಚನ್ನಾಪುರ (50) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಿರ್ಮಿಸಲಾಗುತ್ತಿರುವ ಫ್ಯಾಕ್ಟರಿಯ ದಾಖಲೆಗಳನ್ನು ಹಾಗೂ ಅನುಮತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮಾಲೀಕರನ್ನು ಹಾಗೂ ಸ್ಥಳದಲ್ಲಿದ್ದ ಇತರ ಕೂಲಿ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Drowned: ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಈಜುಕೊಳ ದುರಂತ, ಒಬ್ಬ ಸಾವು