ತುಮಕೂರು: ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಮಗಳು ಕೊಲೆಗೈದಿರುವ ಘಟನೆ (Tumkur Murder Case) ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡೇಪಾಳ್ಯದಲ್ಲಿ ನಡೆದಿದೆ. ನಗರದ ಬಂಡೇಪಾಳ್ಯದ ಶ್ರೀನಗರದಲ್ಲಿ ಮೃತ ಪುಷ್ಪಲತಾ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದರು. ಮದುವೆ ಬಳಿಕ ಮಗಳು ಸುಚಿತ್ರಾ ಹಾಗೂ ಆಳಿಯ ಕೂಡ ಅದೇ ಮನೆಯಲ್ಲಿ ವಾಸವಿದ್ದರು.
ಫೆ.11ರ ರಾತ್ರಿ ಪುಷ್ಪಲತಾ ನಿಗೂಢವಾಗಿ ಸಾವನಪ್ಪಿದ್ದು, ಅಂತ್ಯಕ್ರಿಯೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಮಗಳು ಸುಚಿತ್ರಾಳೇ ತಾಯಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ.
ತಾಯಿಯನ್ನೇ ಕೊಂದಿದ್ದೇಕೆ?
ಕಳೆದ ಕೆಲ ದಿನಗಳಿಂದ ಮಂಡಿನೋವು ಎಂದು ಹಾಸಿಗೆ ಹಿಡಿದಿದ್ದ ಪುಷ್ಪಲತಾ ಅವರನ್ನು ಮಗಳೇ ಕೊಂದು ಹೃದಯಘಾತದ ಕಥೆ ಕಟ್ಟಿದ್ದಳು. ಪುಷ್ಪಲತಾ ದಿಢೀರ್ ಸಾವಿನ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಅನುಮಾನ ಮೂಡಿತ್ತು. ತಕ್ಷಣ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗಳ ಬಣ್ಣ ಬಯಲು ಮಾಡಿದ್ದಾರೆ. ಜ್ಯೋತಿಷಿಯ ಮಾತು ಕೇಳಿ ಕೊಲೆ ಮಾಡಿದೆ ಎಂದು ಸುಚಿತ್ರಾ ಹೇಳಿಕೆ ನೀಡಿದ್ದು, ಇದರ ಹಿಂದೆ ಮತ್ತೊಂದು ಸತ್ಯ ಅಡಗಿದೆ ಎಂಬುದು ತನಿಖೆಯಿಂದ ಬಯಲಾಗಿದೆ.
ನಿಜಕ್ಕೂ ಜ್ಯೋತಿಷಿಯೊಬ್ಬರ ಮಾತು ಕೇಳಿಯೇ ಆರೋಪಿ ಸುಚಿತ್ರಾ ತಾಯಿಯ ಕೊಲೆ ಮಾಡಿದ್ರಾ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಇದರ ನಡುವೆ ಆಸ್ತಿ ಹಾಗೂ ಹಣಕ್ಕಾಗಿ ತಾಯಿಯನ್ನು ಕೊಂದು ಬಳಿಕ ಜ್ಯೋತಿಷಿ ಹೇಳಿದ ಎಂದು ಸುಚಿತ್ರಾಳೇ ಕಥೆ ಕಟ್ಟುತ್ತಿದ್ದಾಳಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.
ಮೃತ ಪುಷ್ಪವತಿ ಪತಿ ಆಟೋ ಚಾಲಕರಾಗಿದ್ದರು. ಹಿಂದೆ ಈ ದಂಪತಿ 2 ಸೈಟ್ ಖರೀದಿಸಿದ್ದು, ಒಂದರಲ್ಲಿ ಮನೆ ಕಟ್ಟಿ ಮತ್ತೊಂದು ಸೈಟನ್ನು ಮಾರಾಟ ಮಾಡಿದ್ದರು. ಸೈಟು ಮಾರಾಟ ಮಾಡಿದ್ದ 40 ಲಕ್ಷ ಹಣವನ್ನು ಪತಿಯೇ ತಾಯಿ ಪುಷ್ಪವತಿ ಹೆಸರಲ್ಲಿ ಇಟ್ಟಿದ್ದರು. ಈ ಹಣಕ್ಕಾಗಿಯೇ ಮಗಳು ಪ್ರತಿನಿತ್ಯ ಮನೆಯಲ್ಲಿ ಜಗಳವಾಡ್ತಾ ತಾಯಿಗೆ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಸುಚಿತ್ರಾ ಕಿರುಕುಳದ ಬಗ್ಗೆ ತನ್ನ ತಮ್ಮನ ಬಳಿ ಪುಷ್ಪವತಿ ಹೇಳಿಕೊಂಡಿರುವ ವಿಚಾರ ತಿಳಿದುಬಂದಿದೆ.
ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಸಿಕ್ಕಿ ಬಿದ್ದಿದ್ದು ಹೇಗೆ?
ಫೆ. 11ರಂದು ರಾತ್ರಿ ಅಮ್ಮನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ದೊಡ್ಡಪ್ಪನಿಗೆ ಸುಚಿತ್ರಾ ಕರೆ ಮಾಡಿದ್ದಾಳೆ. ಸಂಬಂಧಿಕರಿಗೂ ಅನುಮಾನ ಮೂಡಿದೆ. ತಕ್ಷಣ ಕ್ಯಾತ್ಸಂದ್ರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಮಹಿಳೆ ಪೊಲೀಸರ ಮುಂದೆ ಜ್ಯೋತಿಷಿ ಮಾತು ನಂಬಿ ಹತ್ಯೆ ಮಾಡಿರುವುದಾಗಿ ಹೇಳಿದ್ದಳು. ಆದರೆ ಕೊಲೆ ಹಿಂದೆ ಆಸ್ತಿ-ಹಣದ ರಹಸ್ಯವಿದೆ ಎನ್ನಲಾಗಿದೆ.. ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರವೆ ಮತ್ತಷ್ಟು ವಿಚಾರ ಬೆಳಕಿಗೆ ಬರಲಿದೆ.