Body Found: ಬೆಂಗಳೂರಿನ ಮನೆಯೊಳಗೆ ವ್ಯಕ್ತಿಯ ಕೊಳೆತ ಶವ ಪತ್ತೆ; ಹತ್ಯೆ ಎಸಗಿ ಮನೆಗೆ ಲಾಕ್ ಮಾಡಿದ ದುಷ್ಟರು
ನಾಗರಾಜ್ ಎಂಬವರಿಗೆ ಸೇರಿದ ಮನೆಯಲ್ಲಿ ಶವ ಪತ್ತೆಯಾಗಿದೆ. 4 ದಿನದ ಹಿಂದೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮನೆಗೆ ಬೀಗ ಹಾಕಲಾಗಿತ್ತು ಹಾಗೂ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಮನೆ ಮಾಲೀಕ ನಾಗರಾಜ್‌ಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಬಂದಿದ್ದು, ಈ ವೇಳೆ ಗುರುತು ಸಿಗದ ಬೆತ್ತಲೆ ಕೊಳೆತ ಮೃತದೇಹ ಕಂಡು ಶಾಕ್ ಆಗಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಫೆ.28 : ಬೆಂಗಳೂರಿನಲ್ಲಿ (Bengaluru crime news) ಮತ್ತೊಂದು ಭೀಕರ ಹತ್ಯೆ (murder case) ನಡೆದಿದ್ದು, ನೆಲಮಂಗಲದ (Nelamangala) ಮನೆಯೊಂದರಲ್ಲಿ ವ್ಯಕ್ತಿಯ ಗುರುತು ಸಿಗದಂತೆ ಪಾತಕಿಗಳು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ನೆಲಮಂಗಲದ ವಿಜಯಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ.
ನಾಗರಾಜ್ ಎಂಬವರಿಗೆ ಸೇರಿದ ಮನೆಯಲ್ಲಿ ಶವ ಪತ್ತೆಯಾಗಿದೆ. 4 ದಿನದ ಹಿಂದೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮನೆಗೆ ಬೀಗ ಹಾಕಲಾಗಿತ್ತು ಹಾಗೂ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಮನೆ ಮಾಲೀಕ ನಾಗರಾಜ್‌ಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಬಂದಿದ್ದು, ಈ ವೇಳೆ ಗುರುತು ಸಿಗದ ಬೆತ್ತಲೆ ಕೊಳೆತ ಮೃತದೇಹ ಕಂಡು ಶಾಕ್ ಆಗಿದ್ದಾರೆ.
2 ತಿಂಗಳ ಹಿಂದೆ ಮೋಹನ್ ಕೃಷ್ಣ-ಊರ್ವಶಿ ಎಂಬವರಿಗೆ ನಾಗರಾಜ್ ಮನೆ ಬಾಡಿಗೆ ನೀಡಿದ್ದರು. ಕೊಲೆಯಾಗಿದ್ದು ಮೋಹನ್ ಕೃಷ್ಣನಾ ಅಥವಾ ಬೇರೆ ವ್ಯಕ್ತಿಯಾ ಎಂಬ ಅನುಮಾನ ಮೂಡಿದೆ. ಮೋಹನ್ ಜೊತೆಗಿದ್ದ ಊರ್ವಶಿ ಈವರೆಗೂ ಪತ್ತೆ ಆಗಿಲ್ಲ. ಕೊಲೆ ಮಾಡಿದ ಬಳಿಕ ಪಾಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅಕ್ರಮ ಸಂಬಂಧದಿಂದಾಗಿ ಹತ್ಯೆಯಾಗಿದೆ ಎಂದು ಶಂಕಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ 5.24 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು : ಬೆಂಗಳೂರಿನಲ್ಲಿ 5.24 ಕೋಟಿ ಮೌಲ್ಯದ ಡ್ರಗ್ಸ್ ಮತ್ತು ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿವಿಧ ಡ್ರಗ್ಸ್ ಪ್ರಕರಣಗಳಲ್ಲಿ ಒಟ್ಟು 16 ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿ 16 ಪೆಡ್ಲರ್ ಗಳು ಅರೆಸ್ಟ್ ಆಗಿದ್ದಾರೆ.
ವಿದೇಶಿ ಪ್ರಜೆಗಳು ಹಾಗೂ ಹೊರ ರಾಜ್ಯದ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಈ ಒಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಒಟ್ಟು 16 ಆರೋಪಿಗಳನ್ನು ಬಂಧಿಸಿದ್ದು ಇದುವರೆಗೂ 5.24 ಕೋಟಿ ಮಾಡಿದ ಡ್ರಗ್ಸ್ ಮತ್ತು ಗಾಂಜಾವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.