ನವದೆಹಲಿ: ಹೊಲವೊಂದರಲ್ಲಿ ಮೃತದೇಹದ (dead body found) ಭಾಗಗಳನ್ನು ನಾಯಿಗಳು ತಿನ್ನುತ್ತಿವೆ ಎನ್ನುವ ನವದೆಹಲಿಯ (delhi crime) ವಾಯುವ್ಯ ಜಿಲ್ಲೆಯ ಸ್ವರೂಪ್ ನಗರದ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು (delhi polce) ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು (Crime News) ಕಂಡು ಅವರು ಕೂಡ ಬೆಚ್ಚಿಬಿದ್ದರು. ದೇಹದ ಒಂದು ಕೈ ಕತ್ತರಿಸಲ್ಪಟ್ಟಿತ್ತು. ಶವ ಸ್ತ್ರೀ, ಪುರುಷನದ್ದೋ ಎಂದು ಗುರುತಿಸಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯ ಶವ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ದೃಢ ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವರೂಪ್ ನಗರದ ನಿವಾಸಿಗಳು ಸೆಪ್ಟೆಂಬರ್ 13 ರಂದು ಬೆಳಗ್ಗೆ ಹೊಲವೊಂದರಲ್ಲಿ ನಾಯಿಗಳು ಮೃತದೇಹವೊಂದನ್ನು ತಿನ್ನುತ್ತಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕಂಡು ಬೆಚ್ಚಿಬಿದ್ದರು. ಶವದ ಮುಖ ಸಂಪೂರ್ಣವಾಗಿ ವಿರೂಪಗೊಂಡಿತ್ತು. ದೇಹದ ಮೇಲೆ ಚಾಕುವಿನಿಂದ ಇರಿದ ಹಲವು ಗಾಯಗಳಿದ್ದವು.
ಗನ್ ತೋರಿಸಿ ಬಿಜೆಪಿ ಮಾಜಿ ಶಾಸಕನಿಂದ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಸಾಥ್ ನೀಡಿದ ಪೊಲೀಸ್ ಸಿಬ್ಬಂದಿ ಮೇಲೂ ಎಫ್ಐಆರ್
ತಕ್ಷಣವೇ ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನು ಕರೆಸಲಾಯಿತು. ನಾಯಿಗಳಿಂದ ತಿನ್ನಲ್ಪಟ್ಟ ಮೃತದೇಹದ ಭಾಗಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪರೀಕ್ಷಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು. ದೇಹದ ಕೆಲವು ಭಾಗಗಳನ್ನು ಬೀದಿ ನಾಯಿಗಳು ತಿಂದಿದ್ದವು. ಒಂದು ಕೈ ದೇಹದಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದರು.
ತನಿಖೆ ವೇಳೆ ಮೃತದೇಹವು 16 ವರ್ಷದ ಬಾಲಕಿಯದ್ದು ಎಂದು ತಿಳಿದು ಬಂದಿದೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಕುಶಕ್ ರಸ್ತೆಯ ಹೊಲವೊಂದರಲ್ಲಿ ಎಸೆಯಲಾಗಿತ್ತು. ಈ ಘಟನೆ ಎರಡು ದಿನಗಳ ಹಿಂದೆ ಸೆಪ್ಟೆಂಬರ್ 11ರಂದು ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಲಕಿ ನಾಪತ್ತೆಯಾಗಿರುವ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಆಕೆ ಹಲವು ಬಾರಿ ಮನೆಯಿಂದ ಹೊರಹೋಗಿ ಕೆಲವು ದಿನಗಳ ಅನಂತರ ವಾಪಸಾಗುತ್ತಿದ್ದಳು. ಅವರಿಗೆ ಮೂವರು ಅಪ್ರಾಪ್ತರು ಸೇರಿ ನಾಲ್ವರ ಪರಿಚಯವಿತ್ತು. ಅಪರಾಧ ನಡೆದ ದಿನ ಆಕೆ ಅವರೊಂದಿಗೆ ಟೆಂಪೋದಲ್ಲಿ ತೆರಳಿದ್ದಳು ಎಂದು ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ 16 ರಿಂದ 19ರ ವಯಸ್ಸಿನ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ ಪೊಲೀಸರ ತಂಡಗಳು ಆ ಪ್ರದೇಶ ಮತ್ತು ಸುತ್ತಮುತ್ತಲಿನ ಮಾರ್ಗಗಳಲ್ಲಿನ 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿತ್ತು. ಅಲ್ಲದೇ ಅಪರಾಧ ನಡೆದ ದಿನ ಆ ಪ್ರದೇಶದ ಬಳಿ ಟೆಂಪೋವೊಂದು ಕಂಡು ಬಂದಿದೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ಟೆಂಪೋ ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿವಾಹವಾಗಿ 17 ದಿನದಲ್ಲೇ ಅಮೆರಿಕದಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ವ್ಯಕ್ತಿ: ಪತ್ನಿ ನಾಪತ್ತೆ, ಹೆಚ್ಚಿದ ಅನುಮಾನ
ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆ. ವಯಸ್ಕ ಆರೋಪಿಯನ್ನು ಖಡ್ಡಾ ಕಾಲೋನಿಯ ನಿವಾಸಿ ಶಿವಂ ಅಲಿಯಾಸ್ ಸುದಾಮ ಅಥವಾ ಚುಚು ಎಂದು ಗುರುತಿಸಲಾಗಿದೆ. ಅಪರಾಧ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಚಾಕುಗಳು, ಆರೋಪಿಗಳು ಧರಿಸಿದ್ದ ಬಟ್ಟೆಗಳು ಮತ್ತು ಆ ಟೆಂಪೋವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.