ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Baba: ದುಬೈ ಶೇಖ್‌ಗೆ ಹುಡುಗಿಯರನ್ನು ಸಪ್ಲೈ ಮಾಡ್ತಿದ್ದನೇ ದೆಹಲಿ ಬಾಬಾ? ಚಾಟ್‌ನಲ್ಲಿ ಬಯಲಾಯ್ತು ಭಯಾನಕ ಸಂಗತಿ!

17 ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿಯು ಯುವತಿಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಆತನ ವಾಟ್ಸಾಪ್ ಚಾಟ್‌ಗಳು ಲಭ್ಯವಾಗಿವೆ. ಈ ಮೂಲಕ ಆತ ದುಬೈ ಶೇಖ್ ಸಂಪರ್ಕವಿರುವ ವ್ಯಕ್ತಿ, ವಿದ್ಯಾರ್ಥಿಯೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿದೆ.

ನವದೆಹಲಿ: ಸ್ವಯಂ ಘೋಷಿತ ದೇವ ಮಾನವ, ದೆಹಲಿ ಬಾಬಾ (Delhi Baba) ಎಂದು ಕರೆಯಲ್ಪಡುವ ಸ್ವಾಮಿ ಚೈತನ್ಯಾನಂದ ಸರಸ್ವತಿ (Swami Chaitanyananda Saraswati) ಬಂಧನದ ಬಳಿಕ ಯುವತಿಯರ ಮೇಲೆ ಅವರು ಮಾಡುತ್ತಿದ್ದ ಶೋಷಣೆ ಒಂದೊಂದಾಗಿ ಹೊರ ಬರುತ್ತಿದೆ. ಇತ್ತೀಚಿಗೆ ಅವರ ವಾಟ್ಸಾಪ್ ಚಾಟ್‌ಗಳು (Delhi Baba whats app chat) ಬಹಿರಂಗವಾಗಿದ್ದು, ಇದು ಕೆಲವು ಆಘಾತಕಾರಿ ಅಂಶಗಳನ್ನು ಹೊರಹಾಕಿದೆ. ಇದರಲ್ಲಿ ದುಬೈ ಶೇಖ್ (Dubai Sheikh) ಒಬ್ಬನಿಗೆ ಲೈಂಗಿಕ ಸಂಬಂಧಕ್ಕಾಗಿ ಹುಡುಗಿ ಬೇಕು ಎನ್ನುವ ಸಂದೇಶವೊಂದಿದ್ದು, ಇದು ಸ್ವಾಮಿ ಚೈತನ್ಯಾನಂದ ಸರಸ್ವತಿಯ ಅಕ್ರಮ ವ್ಯವಹಾರಗಳ ಕುರಿತು ಮತ್ತಷ್ಟು ತನಿಖೆಗೆ ಒತ್ತಾಯಿಸಿದೆ.

ಸ್ವಾಮಿ ಚೈತನ್ಯಾನಂದ ಸರಸ್ವತಿ ಬಂಧನದ ಬಳಿಕ ಯುವತಿಯರ ಮೇಲೆ ಆತ ನಡೆಸುತ್ತಿದ್ದ ದೌರ್ಜನ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಆತನ ವಾಟ್ಸಾಪ್ ಚಾಟ್‌ಗಳು ಲಭ್ಯವಾಗಿವೆ.ಚೈತನ್ಯಾನಂದ ಸರಸ್ವತಿಯು ದುಬೈ ಶೇಖ್ ಸಂಪರ್ಕವಿರುವ ವ್ಯಕ್ತಿ, ವಿದ್ಯಾರ್ಥಿಯೊಂದಿಗೆ ಮಾತನಾಡಿರುವುದು ಈ ಚಾಟ್ ಗಳ ಮೂಲಕ ತಿಳಿದು ಬಂದಿದೆ. ಈ ಸಂದೇಶಗಳು ಇಂತಿವೆ.

ದೆಹಲಿ ಬಾಬಾ: ದುಬೈ ಶೇಖ್ ಗೆ ಲೈಂಗಿಕ ಸಂಗಾತಿ ಬೇಕಿದೆ. ನಿಮಗೆ ಯಾರಾದರೂ ಒಳ್ಳೆಯ ಸ್ನೇಹಿತರಿದ್ದಾರೆಯೇ?

ವಿದ್ಯಾರ್ಥಿ: ಯಾರೂ ಇಲ್ಲ.

ದೆಹಲಿ ಬಾಬಾ: ಅದು ಹೇಗೆ ಸಾಧ್ಯ?

ವಿದ್ಯಾರ್ಥಿ: ನನಗೆ ಗೊತ್ತಿಲ್ಲ.

ದೆಹಲಿ ಬಾಬಾ: ನಿಮ್ಮ ಸಹಪಾಠಿ? ಜೂನಿಯರ್?

ಈ ಚಾಟ್ ನಲ್ಲಿ ವಿದ್ಯಾರ್ಥಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಇದರಲ್ಲಿ ದೆಹಲಿ ಬಾಬಾ ಸ್ವೀಟಿ, ಬೇಬಿ, ಡಾಟರ್, ಡಾಲ್ ನಂತಹ ಪದಗಳಲ್ಲಿ ಆಕೆಯನ್ನು ಪದೇ ಪದೇ ಸಂಬೋಧಿದ್ದಾನೆ. ಈ ಚಾಟ್ ಗಳು ಹಗಲು, ರಾತ್ರಿ ನಡೆದಿದೆ.

ಇನ್ನೊಂದು ಸಂದೇಶದಲ್ಲಿ, ಬೇಬಿ ನೀನು ಎಲ್ಲಿದ್ದೀಯಾ?, ಗುಡ್ ಮಾರ್ನಿಂಗ್ ಬೇಬಿ, ನನ್ನ ಮೇಲೆ ಯಾಕೆ ಕೋಪಗೊಂಡಿದ್ದೀಯಾ?, ಶುಭ ಸಂಜೆ ನನ್ನ ಅತ್ಯಂತ ಪ್ರೀತಿಯ ಪುಟ್ಟ ಮಗಳ ಗೊಂಬೆ.. ಹೀಗೆ ಅನೇಕ ಚಾಟ್ ಗಳು ತನಿಖಾಧಿಕಾರಿಗಳ ಕೈ ಸೇರಿವೆ.

ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಯು ಇಲ್ಲಿ ಸಂತೋಷದ ಮಧ್ಯಾಹ್ನ, ಏನಾದರೂ ತಿಂದಿದ್ದೀರಾ ಸರ್ ಎಂದು ಕೇಳಿದ್ದಾಳೆ. ಇನ್ನೊಂದರಲ್ಲಿ ಆಕೆ ಡಿಸ್ಕೋ ನೃತ್ಯ ಮಾಡುತ್ತಿದ್ದೇನೆ, ನನ್ನೊಂದಿಗೆ ಸೇರಲು ಬಯಸುತ್ತೀರಾ, ನೀವು ನನ್ನೊಂದಿಗೆ ಮಲಗುವುದಿಲ್ಲವೇ ಎಂದು ಕೂಡ ಕೇಳಿದ್ದಾಳೆ ಎನ್ನಲಾಗಿದೆ.

17 ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಚೈತನ್ಯಾನಂದನನ್ನು ಭಾನುವಾರ ಬೆಳಗ್ಗೆ ಆಗ್ರಾದ ತಾಜ್ ಗಂಜ್ ಪ್ರದೇಶದ ಹೊಟೇಲ್ ನಲ್ಲಿ ಬಂಧಿಸಲಾಗಿತ್ತು. ಸುಮಾರು ಎರಡು ತಿಂಗಳಿನಿಂದ ಬಂಧನದಿಂದ ತಪ್ಪಿಸಿಕೊಂಡಿದ್ದ ಆತ ವೃಂದಾವನ, ಮಥುರಾ ಮತ್ತು ಆಗ್ರಾ ನಡುವೆ ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಆತನು ವಿದ್ಯಾರ್ಥಿಗಳನ್ನು ಬೆದರಿಸಲು ಮತ್ತು ಅಪರಾಧ ಸಂದೇಶಗಳನ್ನು ಅಳಿಸಲು ಸಹಾಯ ಮಾಡಿದ ಸಂಸ್ಥೆಯ ಮೂವರು ಮಹಿಳಾ ಸಹಾಯಕರನ್ನು ಕೂಡ ಪೊಲೀಸರು ವಿಚಾರಣೆ ಮಾಡುವ ಸಾಧ್ಯತೆ ಇದೆ. ಆತನ ಐಪ್ಯಾಡ್, ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ.

ಇದನ್ನೂ ಓದಿ: Smartphone Addiction: ನಾವೇಕೆ ಸ್ಮಾರ್ಟ್‌ಫೋನ್‌ಗಳ ಗುಲಾಮರಾಗಿದ್ದೇವೆ?

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಶಾಶ್ವತ ರಾಯಭಾರಿ ಮತ್ತು ಬ್ರಿಕ್ಸ್‌ನ ವಿಶೇಷ ರಾಯಭಾರಿ ಎಂದು ಗುರುತಿಸುವ ನಕಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಎರಡು ಪಾಸ್‌ಪೋರ್ಟ್‌ಗಳು, 8 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author