ದೆಹಲಿ ಸ್ಫೋಟ: ಉಮರ್ ಭೇಟಿಯಾಗಿದ್ದ ಮೌಲಾನಾ, ಶಿಕ್ಷಕನ ಬಂಧನ
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಉರ್ದು ಶಿಕ್ಷಕನನ್ನು ಬಂಧಿಸಲಾಗಿದೆ. ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಹೊರಗೆ ನಡೆದ ಸ್ಪೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿ ಭೇಟಿಯಾಗಿದ್ದ ಹರಿಯಾಣದ ಗುರುಗ್ರಾಮ್‌ನ ಸೋಹ್ನಾದ ಮೌಲಾನಾ ಮತ್ತು ಶಿಕ್ಷಕನನ್ನು ಫರಿದಾಬಾದ್ ಅಪರಾಧ ವಿಭಾಗವು ಬಂಧಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ: ಕೆಂಪು ಕೋಟೆ ಮೆಟ್ರೋ ನಿಲ್ದಾಣದ (Delhi's Red Fort Metro Station) ಹೊರಗೆ ಇತ್ತೀಚೆಗೆ ನಡೆದ ಬಾಂಬ್ ಸ್ಪೋಟದ (Delhi bomb blast case) ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿ ಭೇಟಿಯಾಗಿದ್ದ ಹರಿಯಾಣದ (Haryana Mosque) ಗುರುಗ್ರಾಮ್‌ನ ಸೋಹ್ನಾದ ಮೌಲಾನಾ ಮತ್ತು ಶಿಕ್ಷಕನನ್ನು ಫರಿದಾಬಾದ್ ಅಪರಾಧ ವಿಭಾಗವು ಬಂಧಿಸಿದೆ. ದೆಹಲಿ ಸ್ಫೋಟಕ್ಕೂ ಮುನ್ನ ಉಮರ್ ಹರ್ಯಾಣದ ಮಸೀದಿಗೆ ಹಲವಾರು ಬಾರಿ ಭೇಟಿ ನೀಡಿದ್ದ ಎನ್ನಲಾಗಿದೆ. ಉಮರ್ ಸೊಹ್ನಾದ ರಾಯ್ಪುರ ಗ್ರಾಮದ ಮಸೀದಿಯ ಮೌಲಾನಾ ತಯ್ಯಬ್ ಹುಸೇನ್ ಮತ್ತು ಉರ್ದು ಶಿಕ್ಷಕನೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಹೊರಗೆ ಇತ್ತೀಚಿಗೆ ನಡೆದ ಬಾಂಬ್ ಸ್ಪೋಟದಲ್ಲಿ ಸುಮಾರು 13 ಮಂದಿ ಸಾವನ್ನಪ್ಪಿದ್ದರು. ಈ ಘಟನೆಗೆ ಕಾರಣವಾದ ಪ್ರಮುಖ ಆರೋಪಿ ಉಮರ್ ದೆಹಲಿ ಬಾಂಬ್ ಸ್ಪೋಟಕ್ಕೂ ಮುನ್ನ ರಾಯ್ಪುರ ಮಸೀದಿಗೆ ಹಲವಾರು ಬಾರಿ ಭೇಟಿ ನೀಡಿದ್ದನು. ಮಸೀದಿಗೆ ಭೇಟಿ ನೀಡಿದ ಬಳಿಕ ಆತ ಸೊಹ್ನಾದ ಮಂಡಿಯಲ್ಲಿರುವ ರಸಗೊಬ್ಬರ ಮತ್ತು ಬೀಜದ ಅಂಗಡಿಗೆ ತೆರಳಿದ್ದ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ತಡರಾತ್ರಿ, ಮೌಲಾನಾ ಮತ್ತು ಉರ್ದು ಶಿಕ್ಷಕನನ್ನು ವಿಚಾರಣೆಗಾಗಿ ಫರಿದಾಬಾದ್ ಅಪರಾಧ ವಿಭಾಗವು ವಶಕ್ಕೆ ಪಡೆದಿದೆ.
ಇದನ್ನೂ ಓದಿ: Child Marriage Eradication: ಬಾಲ್ಯ ವಿವಾಹ ಮುಕ್ತ ಗ್ರಾ.ಪಂ.ಗಳಿಗೆ 25 ಸಾವಿರ ರೂ. ಬಹುಮಾನ ಘೋಷಿಸಿದ ಸರ್ಕಾರ
ಕಾಶ್ಮೀರಕ್ಕೆ ಭೇಟಿ ನೀಡಿದ್ದ ಉಮರ್
ದೆಹಲಿಯಲ್ಲಿ ಬಾಂಬ್ ಸ್ಫೋಟಿಸುವ ಕೆಲವು ದಿನಗಳ ಮೊದಲು ಪ್ರಕರಣದ ಪ್ರಮುಖ ಆರೋಪಿ ಉಮರ್-ಉನ್-ನಬಿ ಕಾಶ್ಮೀರದಕ್ಕೆ ಭೇಟಿ ನೀಡಿದ್ದು, ಆಗ ಆತ ತನ್ನ ಮೊಬೈಲ್ ಫೋನ್ ಅನ್ನು ಸಹೋದರನಿಗೆ ಒಪ್ಪಿಸಿದ್ದನು ಎನ್ನಲಾಗಿದೆ.
ಆರೋಪಿ ಉಮರ್ ನಿಂದ ವಶಪಡಿಸಿಕೊಳ್ಳಲಾದ ಫೋನ್ ನಲ್ಲಿ , ಉಮರ್ ದಾಳಿಯನ್ನು "ಹುತಾತ್ಮ ಕಾರ್ಯಾಚರಣೆ" ಎಂದು ಸಮರ್ಥಿಸುವ ಹಲವಾರು ದೃಶ್ಯಗಳಿದ್ದು, ಇದು ಪೂರ್ವ ಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ವಿಚಾರಣೆ ವೇಳೆ ತಾನು ಸಿಕ್ಕಿಬಿದ್ದರೆ ಫೋನ್ ಅನ್ನು ನೀರಿಗೆ ಬಿಸಾಡುವಂತೆ ಉಮರ್ ತನ್ನ ಸಹೋದರನಿಗೆ ಹೇಳಿದ್ದ ಎನ್ನಲಾಗಿದೆ. ಆರೋಪಿಯ ಸಹೋದರ ಪೊಲೀಸರಿಗೆ ಫೋನ್ ಎಸೆಯಲ್ಪಟ್ಟ ಸ್ಥಳ ತೋರಿಸಿದ್ದರಿಂದ ಭಾಗಶಃ ಹಾನಿಗೊಳಗಾಗಿದ್ದ ಫೋನ್ ಸಿಕ್ಕಿದೆ. ಇದರಿಂದ ವಿಧಿವಿಜ್ಞಾನ ತಜ್ಞರು ಹಲವು ಮಹತ್ವಪೂರ್ಣ ಮಾಹಿತಿಯನ್ನು ಹೊರಕ್ಕೆ ತೆಗೆದಿದ್ದಾರೆ.
ಇದನ್ನೂ ಓದಿ: Varanasi title dispute: ರಾಜಮೌಳಿ 'ವಾರಣಾಸಿ' ಸಿನಿಮಾ ಟೈಟಲ್ ವಿವಾದ; ದೊಡ್ಡ ಮೊತ್ತದ ಹಣ ವ್ಯರ್ಥ?
ಹಮಾಸ್ ರೀತಿ ದಾಳಿಗೆ ಸಂಚು
ಕೆಂಪು ಕೋಟೆಯ ಬಳಿ ಕಾರು ಸ್ಫೋಟಿಸುವ ಮೊದಲು ಭಯೋತ್ಪಾದಕರು ಡ್ರೋನ್‌ಗಳನ್ನು ಶಸ್ತ್ರಾಸ್ತ್ರಗಳ ಮೂಲಕ ರಾಕೆಟ್‌ಗಳ ದಾಳಿಗೆ ಸಂಚು ರೂಪಿಸಿದ್ದರು. ಇವರು ಹಮಾಸ್ ಉಗ್ರರಿಂದ ಪ್ರೇರೇಪಿತವಾಗಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ದಾಳಿಯ ರೀತಿಯಲ್ಲಿ ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲು ಉಗ್ರರು ಯೋಜನೆ ಹಾಕಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಗಳು ದೊರೆತಿವೆ ಎನ್ನಲಾಗಿದೆ.