ನವದೆಹಲಿ: ಕೆಂಪು ಕೋಟೆ ಬಾಂಬ್ ದಾಳಿ ಪ್ರಕರಣದ (Red Fort car blast case) ಆರೋಪಿಗಳು ಉತ್ತರ ಪ್ರದೇಶದ ವಿಧಾನ ಸಭೆ (UP Assembly) ಮೇಲೂ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ತಿಳಿಸಿದೆ. ಕಳೆದ ವರ್ಷ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ದಾಳಿ (Bomb attack) ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿಯ ಪ್ರಮುಖ ಆರೋಪಿ ವೈದ್ಯರಾದ ಮುಜಮ್ಮಿಲ್ ಶಕೀಲ್ ಮತ್ತು ಶಾಹೀನ್ ಸಯೀದ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಅವರು ಇದನ್ನು ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಲಕ್ನೋದ ವಿಧಾನಸಭೆ, ಬಾಪು ಭವನ ಮತ್ತು ಜನದಟ್ಟಣೆಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಟಿಎಟಿಪಿ ಸ್ಫೋಟಕಗಳನ್ನು ಬಳಸಿ ಕಾರಿನಲ್ಲೇ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ದೆಹಲಿಯ ಕೆಂಪು ಕೋಟೆ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆ ವೇಳೆ ಬಹಿರಂಗವಾಗಿದೆ.
ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದಾಗಿ ಹೇಳಿ ವಂಚನೆ: ಜ್ಯೋತಿಷ್ಯದ ಹೆಸರಿನಲ್ಲಿ 60 ಲಕ್ಷ ರುಪಾಯಿ ಲೂಟಿ
ದೆಹಲಿಯ ಬಾಂಬ್ ಸ್ಫೋಟ ಪ್ರಕರಣ ಆರೋಪಿ ವೈದ್ಯರಾದ ಮುಜಮ್ಮಿಲ್ ಶಕೀಲ್ ಮತ್ತು ಶಾಹೀನ್ ಸಯೀದ್ ಹಲವು ಜನದಟ್ಟಣೆಯ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದರು. ಇದಕ್ಕಾಗಿ 2025ರ ಆಗಸ್ಟ್ 25 ಮತ್ತು 30 ನಡುವೆ ಹರಿಯಾಣದ ಫರಿದಾಬಾದ್‌ನಿಂದ ಲಕ್ನೋಗೆ ತೆರಳಿ ಸ್ಥಳ ಪರಿಶೀಲನೆಯನ್ನು ನಡೆಸಿದ್ದರು.
ಉತ್ತರ ಪ್ರದೇಶದ ಸರ್ಕಾರದ ಹೆಮ್ಮೆಯ ಗುರುತುಗಳಾಗಿರುವ ವಿಧಾನಸೌಧ, ನಾಗರಿಕ ಸಚಿವಾಲಯ ಬಾಪು ಭವನ, ಇಮಾಂಬರಾ, ಲಾಲ್ ಬಾಗ್ ಮತ್ತು ಅಮೀನಾಬಾದ್‌ನಂತಹ ಜನದಟ್ಟಣೆ ಪ್ರದೇಶಗಳಲ್ಲಿ ಸ್ಫೋಟಕಗಳನ್ನು ತುಂಬಿದ ಕಾರನ್ನು ತಂದು ಸ್ಫೋಟಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಇದಕ್ಕಾಗಿ ಆರೋಪಿ ಮುಜಮ್ಮಿಲ್ ಲಕ್ನೋದ ಅಂಗಡಿಗಳಿಂದ ಟ್ರಯಾಸೆಟೋನ್ ಟ್ರೈಪೆರಾಕ್ಸೈಡ್ (ಟಿಎಟಿಪಿ) ತಯಾರಿಸಲು ಅಗತ್ಯವಿರುವ ಎರಡು ಪ್ರಮುಖ ರಾಸಾಯನಿಕ ಪೆರಾಕ್ಸೈಡ್ ಅನ್ನು ಸಂಗ್ರಹಿಸಿದ್ದಾನೆ. ಇದು ಅತ್ಯಂತ ಮಾರಕವಾದ ಸ್ಫೋಟಕವಾಗಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಸೈತಾನನ ತಾಯಿ' ಎಂದು ಕರೆಯಲಾಗುತ್ತದೆ. ಇದಕ್ಕೆ ಶಾಹೀನ್ ಕೂಡ ಸಹಾಯ ಮಾಡಿದ್ದಾಳೆ. ಇದೆಲ್ಲವೂ ಮುಜಮ್ಮಿಲ್ ನ ಫೋನ್ ತನಿಖೆಯಿಂದ ಬಹಿರಂಗವಾಗಿದೆ.
ಇಬ್ಬರು ಲಕ್ನೋದಲ್ಲಿರುವ ಶಾಹೀನ್‌ನ ಪೂರ್ವಜರ ಮನೆಯಲ್ಲಿ ಉಳಿದುಕೊಂಡಿದ್ದರು. ಶಾಹೀನ್‌ನ ತಂದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅವರ ಮನೆ ಲಾಲ್ ಬಾಗ್‌ನ ಖಾಂಡಾರಿ ಬಜಾರ್‌ನಲ್ಲಿದೆ. ಆರೋಪಿಗಳು ನಗರ ಪ್ರದೇಶಗಳಿಂದ ದೂರದಲ್ಲಿ ಸ್ಫೋಟಕ ತಯಾರಿ ನಡೆಸಲು ಫರಿದಾಬಾದ್‌ನ ಖೋರಿ ಜಮಾಲ್‌ಪುರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಡಿಜಿಟಲ್ ಅರೆಸ್ಟ್ ಪ್ರಕರಣ; ಬೆಂಗಳೂರಿನ ವೃದ್ಧೆಗೆ 24 ಕೋಟಿ ವಂಚಿಸಿದ್ದ 6 ಸೈಬರ್ ಖದೀಮರ ಬಂಧನ
ಕಳೆದ ವರ್ಷ ನವೆಂಬರ್ 10ರಂದು ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಮೇ 14 ರಂದು 7,500 ಪುಟಗಳ ಬೃಹತ್ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ ಈ ಎಲ್ಲಾ ಮಾಹಿತಿಗಳು ಸೇರಿವೆ.