ನವದೆಹಲಿ, ಸೆ. 24: ದೆಹಲಿಯ ಆಸ್ಥಾಕುಂಜ್ ಪಾರ್ಕ್‌ನಲ್ಲಿ ನಡೆದ 17 ವರ್ಷದ ಬಾಲಕಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಆರೋಪಿಗಳ ಕರಾಳ ಹಿನ್ನೆಲೆಗಳು ಒಂದೊಂದಾಗಿ ಬಯಲಾಗುತ್ತಿವೆ. ಪ್ರಕರಣದ ಪ್ರಮಖ ಆರೋಪಿಗಳಲ್ಲಿ ಒಬ್ಬನಾದ ಆಸಿಫ್‌ನನ್ನು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಕಾರಣಕ್ಕಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಜಿಮ್‌ನಿಂದ ತೆಗೆದುಹಾಕಲಾಗಿತ್ತು ಎಂಬ ಮಾಹಿತಿ ಪೊಲೀಸ್ ತನಿಖೆಯಿದ ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಸೂತ್ರದಾರಿ ಎನ್ನಲಾದ 32 ವರ್ಷದ ಆಸಿಫ್ ದೆಹಲಿಯ ಕಲ್ಕಾಜಿ ಮಂದಿರದ ಬಳಿಯ ಆಸ್ಥಾಕುಂಜ್ ಪಾರ್ಕ್ ಹತ್ತಿರವೇ ವಾಸಿಸುತ್ತಿದ್ದ. ಜಿಮ್ ಕೆಲಸದಿಂದ ತೆಗೆದುಹಾಕಿದ ಮೇಲೆ ತಕಾರಿ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಕೃತ್ಯ ನಡೆಯುವ ಮೊದಲು ಆಸಿಫ್ ಪದೇ ಪದೆ ಪಾರ್ಕ್‌ಗೆ ಭೇಟಿ ನೀಡುತ್ತಿದ್ದು, ಮುಂಚಿತಾಗಿಯೇ ಯೋಜಿಸಿ ಅಪರಾಧವನ್ನು ಎಸಗಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ ಈತನ ಬಳಿ ಇದ್ದ ಪಿಸ್ತೂಲ್, ಚಾಕು ಹಾಗೂ ಕಾಂಡೋಮ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಫೋನ್‌ನಲ್ಲಿ ಅಶ್ಲೀಲ ವಿಡಿಯೊಗಳು
ಆಸಿಫ್‌ನ ಮೊಬೈಲ್ ಫೋನ್‌ನಲ್ಲಿ ಹಲವು ಅಶ್ಲೀಲ ವಿಡಿಯೊಗಳಿರುವುದು ಪತ್ತೆಯಾಗಿದೆ. ಮತ್ತಿಬ್ಬರು ಆರೋಪಿಗಳಾದ ಹೇಮಂತ್ (24) ಮತ್ತು ಆತನ ಸಹೋದರ ಮಹೇಶ (24) ಬಿಎಸ್‌ಸಿ ಮ್ಯಾತ್ಸ್ ಅಂತಿಮ ವರ್ಷ ಓದುತ್ತಿದ್ದರು. ಇಬ್ಬರು ತಮ್ಮ ಫೋನ್‌ಗಳ ಸರ್ಚ್ ಹಿಸ್ಟರಿನ್ನು ಡಿಲೀಟ್ ಮಾಡಿದ್ದರು. ಪ್ರಸ್ತುತ ಈ ಮೂವರು ಆರೋಪಿಗಳ ಮೊಬೈಲ್ ಫೋನ್‌ಗಳನ್ನ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು
ಸಾಕ್ಷ್ಯ ನಾಶಪಡಿಸಲು ಆರೋಪಿಗಳ ಯತ್ನ
ಅತ್ಯಾಚಾರ ಎಸಗಿದ ನಂತರ, ದೂರು ನೀಡದಂತೆ ಬಾಲಕಿಗೆ ಬೆದರಿಕೆ ಹಾಕಿ ಮೂವರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಬಳಿಕ ಬಾಲಕಿ ಮತ್ತು ಆಕೆಯ ಸ್ನೇಹಿತ ಹೇಗೋ ಪಾರ್ಕ್‌ನಿಂದ ಹೊರಬಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ಮೂಲಗಳ ಪ್ರಕಾರ ಮೂವರು ಆರೋಪಿಗಳು ಹತ್ತಿರದಲ್ಲಿದ್ದ ಹೋಟೆಲ್ ಒಂದರಲ್ಲಿ ಊಟ ಮಾಡಿ, ನಂತರ ಶ್ರೀನಿವಾಸಪುರಿಯಲ್ಲಿದ್ದ ತಮ್ಮ ಮನೆಗೆ ತೆರಳಿ, ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ತಮ್ಮ ಬಟ್ಟೆಗಳನ್ನು ಒಗೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಏನಿದು ಘಟನೆ?
ಸೆಪ್ಟೆಂಬರ್ 21ರ ಸಂಜೆ 7 ಗಂಟೆ ಸುಮಾರಿಗೆ ಹದಿಹರೆಯದ ಬಾಲಕಿ ತನ್ನ 17 ವರ್ಷದ ಸ್ನೇಹಿತನೊಂದಿಗೆ ಕಲ್ಕಾಜಿ ಮಂದಿರಕ್ಕೆ ಹೋಗಿದ್ದಳು. ಪ್ರಾರ್ಥನೆ ಸಲ್ಲಿಸಿದ ನಂತರ, ಇಬ್ಬರೂ ಸಂಜೆ 7:30ರ ಸುಮಾರಿಗೆ ದೇವಸ್ಥಾನದ ಬಳಿಯ ಉದ್ಯಾನವನಕ್ಕೆ ತೆರಳಿದರು. ಅಲ್ಲಿ ಮೂವರು ಆರೋಪಿಗಳು (ಆಸಿಫ್, ಹೇಮಂತ್ ಮತ್ತು ಮಹೇಶ್) ಅವರ ಬಳಿಗೆ ಬಂದು ತಾವು ಪೊಲೀಸರೆಂದು ಪರಿಚಯಿಸಿಕೊಂಡರು ಎನ್ನಲಾಗಿದೆ. ಆರೋಪಿಗಳು ಬಾಲಕಿಯ ಸ್ನೇಹಿತನನ್ನು 'ಸರ್' ಎಂಬ ಪದಗಳಿಂದ ಸಂಬೋಧಿಸಿದ್ದರು. ನಂತರ ಆರೋಪಿಗಳು ಬಾಲಕಿಯನ್ನು ಆಕೆಯ ಸ್ನೇಹಿತನಿಂದ ದೂರ ಕರೆದೊಯ್ದರು ಎನ್ನಲಾಗಿದೆ.
ಮದುವೆಯಾಗಿ 13 ವರ್ಷದ ಮಗಳನ್ನು ಹೊಂದಿರುವ ಆಸಿಫ್ ಎಂಬಾತ, ಕತ್ತಿ ಮತ್ತು ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದು, ನಂತರ ಮೂವರೂ ಸೇರಿ ಬಾಲಕಿಯನ್ನು ಉದ್ಯಾನವನದ ಒಳಗಿನ ವಿವಿಧ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು 40 ನಿಮಿಷಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಒಬ್ಬ ಆರೋಪಿ ಬಾಲಕಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾಗ, ಇನ್ನೊಬ್ಬ ಕಾವಲು ಕಾಯುತ್ತಿದ್ದನು ನಂತರ ಫೋನ್ ಮಾಡಿ ಇನ್ನೊಬ್ಬನನ್ನು ಕರಸಿಕೊಂಡು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಬೆನ್ನಟ್ಟಿ ಕಿರುಕುಳ
ಆರೋಪಿಗಳು ಈ ಹಿಂದೆ ಕೂಡ ಉದ್ಯಾನವನದಲ್ಲಿ ಇಂತಹ ಘಟನೆಗಳಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯ ಪೊಲೀಸರಿಗೆ ಬಂದಿದ್ದು, ಇವರ ಪರಾಧ ಹಿನ್ನೆಲೆಯನ್ನು ತನಿಖೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.