ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಬೆನ್ನಟ್ಟಿ ಕಿರುಕುಳ: ದೆಹಲಿಯಲ್ಲಿ ನಿಲ್ಲದ ಮಹಿಳೆಯರ ಮೇಲಿನ ದೌರ್ಜನ್ಯ
Delhi crime: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಬೆನ್ನಟ್ಟಿ ಕಿರುಕುಳ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಹೌಜ್ ಖಾಸ್ ಪ್ರದೇಶದ ಪಂಚಶೀಲ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ಈ ಕುರಿತು ಎಫ್ ಐಆರ್ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಬೈಕ್‌ನಲ್ಲಿ ಬೆನ್ನಟ್ಟಿದ ಇಬ್ಬರು ವ್ಯಕ್ತಿಗಳು ತಮಗೆ ಕಿರುಕುಳ (harass) ನೀಡಿದ್ದಾರೆ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡಿರುವ ಘಟನೆ ದೆಹಲಿಯಲ್ಲಿ
(Delhi crime) ನಡೆದಿದೆ. ವಿನ್ಯಾಸ ವಿಭಾಗದ ವಿದ್ಯಾರ್ಥಿನಿ 21 ವರ್ಷದ ಯುವತಿ ಮನೆಗೆ ತೆರಳುತ್ತಿದ್ದಾಗ ಹೌಜ್ ಖಾಸ್ ಪ್ರದೇಶದ ಪಂಚಶೀಲ ಪಾರ್ಕ್ ಮೆಟ್ರೋ ನಿಲ್ದಾಣದ (Delhi metro station) ಬಳಿ ಇಬ್ಬರು ಯುವಕರು ಕಿರುಕುಳ ನೀಡಿದ್ದು, ಆಕೆ ಸ್ಕೂಟರ್ ಸಮೇತ ಕೆಳಗೆ ಬೀಳುವಂತೆ (accident) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್‌ಐಆರ್ ಮಾಹಿತಿ ಪ್ರಕಾರ ನಾಲ್ಕನೇ ವರ್ಷದ ಡಿಸೈನ್ ವಿದ್ಯಾರ್ಥಿನಿ ಸೆಪ್ಟೆಂಬರ್ 11 ಮತ್ತು 12 ರ ಮಧ್ಯರಾತ್ರಿ ಸಾಕೇತ್‌ನಲ್ಲಿರುವ ತನ್ನ ಇಂಟರ್ನ್‌ಶಿಪ್ ಕಚೇರಿಯಿಂದ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದಳು. ಈ ಸಂದರ್ಭದಲ್ಲಿ ಹೌಜ್ ಖಾಸ್ ಪ್ರದೇಶದ ಪಂಚಶೀಲ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಸುಮಾರು 20ರ ಹರೆಯದ ಇಬ್ಬರು ವ್ಯಕ್ತಿಗಳು ಮೋಟಾರ್‌ಸೈಕಲ್‌ನಲ್ಲಿ ಆಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾರೆ. ಅಸಭ್ಯ ಮಾತುಗಳನ್ನಾಡುತ್ತಾ ಹಾಗೂ ಚೇಷ್ಟೆ ಮಾಡಿ ಕಿರುಕುಳ ನೀಡಿದ್ದಾರೆ.
ಗುರುವಾರ ತಿರುವನಂತಪುರ ತಲುಪಲಿದೆ ಭಾರತದ ಏಕದಿನ ತಂಡ
ಸ್ಕೂಟಿಯಲ್ಲಿ ನಾನು ಮುಂದೆ ಹೋಗಿ ತಪ್ಪಿಸಲು ಪ್ರಯತ್ನಿಸಿದಾಗ ಅವರು ನನ್ನ ಸ್ಕೂಟರ್‌ಗೆ ಡಿಕ್ಕಿ ಹೊಡೆದರು. ಇದರಿಂದ ಸ್ಕೂಟಿ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಸುಮಾರು 100 ರಿಂದ 150 ಮೀಟರ್‌ಗಳಷ್ಟು ದೂರ ಜಾರಿಕೊಂಡು ಹೋಗಿ ಬಿದ್ದಿದೆ. ಇದರಿಂದ ನನಗೆ ತೀವ್ರ ಗಾಯಗಳಾದವು ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.
ತಕ್ಷಣ ಆ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾದರು. ದಾರಿಹೋಕರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮೊದಲು ಆಕೆಯನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನೋಯ್ಡಾದ ಮೇದಾಂತ ಆಸ್ಪತ್ರೆಗೆ ಸೇರಿದಲಾಗಿದೆ. ಅಲ್ಲಿನ ವೈದ್ಯರು ಗಾಯಗಳ ತೀವ್ರತೆಯನ್ನು ಗಮನಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಆಕೆ ಹೇಳಿದ್ದಾರೆ.
ಈ ಘಟನೆ ಬಗ್ಗೆ ಯಾವುದೇ ಸಿಸಿಟಿವಿಯಲ್ಲಿ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪೊಲೀಸರು ಆರಂಭದಲ್ಲಿ ಇದು ಕಿರುಕುಳಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದರು. ಸೆ. 11ರಂದು ಮಧ್ಯರಾತ್ರಿ ಸುಮಾರು 1 ಗಂಟೆಗೆ, ಹೌಜ್ ಖಾಸ್ ಪೊಲೀಸ್ ಠಾಣೆಗೆ ರಸ್ತೆ ಅಪಘಾತದ ಕುರಿತು ಪಿಸಿಆರ್ ಕರೆ ಬಂದಿತ್ತು. ತನಿಖಾಧಿಕಾರಿ ತಕ್ಷಣ ಘಟನಾ ಸ್ಥಳಕ್ಕೆ ತಲುಪಿದಾಗ ಅಲ್ಲಿ ಯಾರೂ ಕಂಡುಬರಲಿಲ್ಲ. ಗಾಯಗೊಂಡವರನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಘಟನೆಯ ಬಗ್ಗೆ ಖಚಿತ ಮಾಹಿತಿ ಪಡೆಯಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತಾದರೂ ಲಭ್ಯವಿರುವ ದೃಶ್ಯಾವಳಿಗಳಲ್ಲಿ ಯಾವುದೇ ಘಟನೆ ಕಂಡುಬಂದಿಲ್ಲ. ಸೆಪ್ಟೆಂಬರ್ 14 ರಂದು ದೂರುದಾರರ ಸೋದರಸಂಬಂಧಿಯನ್ನು ಠಾಣೆಗೆ ಕರೆಸಿ ಸಿಸಿಟಿವಿ ದೃಶ್ಯಗಳನ್ನು ತೋರಿಸಲಾಯಿತು. ಅವರಿಗೂ ಕೂಡ ಘಟನೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 15 ರಂದು ಸಂತ್ರಸ್ತೆಯ ವಕೀಲರಿಂದ ದೂರು ಸ್ವೀಕರಿಸಲಾಯಿತು.
Ramayana Movie: ‘ರಾಮಾಯಣ’ ಚಿತ್ರದ ಸಂಭಾವನೆಯನ್ನು ದಾನ ಮಾಡಿದ ಖ್ಯಾತ ನಟ!
ಪೊಲೀಸರು ದೂರುದಾರರನ್ನು ಮತ್ತೆ ಸಂಪರ್ಕಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಅವರು ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ. ತಾವು ಗುಣಮುಖರಾದ ಮೇಲೆ ದೆಹಲಿಗೆ ಬಂದು ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.