ಧಾರವಾಡ, ಡಿ.17: ಧಾರವಾಡ (Dharwad news) ಜಿಲ್ಲೆಯ ಕವಲಗೇರಿ ಮಠದ ಶಿವಾನಂದ ಮಠದ (Kavalageri Shivananda Mutt) ಸರಸ್ವತಿ ಸ್ವಾಮೀಜಿಯ ಕಾಮಪುರಾಣ ಬಯಲಾಗಿದೆ. ಮಠದ ಆವರಣದಲ್ಲೇ ಮಹಿಳೆಯೊಬ್ಬರಿಂದ ಬೆತ್ತಲೆಯಾಗಿ ಮಸಾಜ್ ಮಾಡಿಸಿಕೊಂಡಿರುವ ವಿಡಿಯೋ ವೈರಲ್ (Viral video) ಆಗಿದೆ. ಈ ವಿಡಿಯೋ ಇಟ್ಟುಕೊಂಡು ಗುಂಪೊಂದು ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದು, ಡೀಲ್ ಕುದುರಿಸಲು ಕೂಡ ಸ್ವಾಮೀಜಿ ಮುಂದಾಗಿರುವುದು ಗೊತ್ತಾಗಿದೆ.
ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ ಗ್ರಾಮಸ್ಥರ ಮುಂದೆ ಸನ್ಯಾಸಿಯಂತೆ ಪೋಸ್ ಕೊಡುತ್ತಿದ್ದು, ಮಠದ ಆವರಣದಲ್ಲಿ ಮಹಿಳೆಯ ಜೊತೆ ಬೆತ್ತಲೆಯಾಗಿ ಸ್ನಾನ ಮಾಡಿಸಿಕೊಂಡು ಮೈಯಲ್ಲಾ ಮಸಾಜ್ ಮಾಡಿಸಿಕೊಂಡಿದ್ದಾರೆ. ಗ್ರಾಮಸ್ಥರ ಆಧ್ಯಾತ್ಮಿಕ ಕೇಂದ್ರವಾಗಿದ್ದ ಮಠವನ್ನೇ ಸ್ವಾಮಿ ಮಸಾಜ್ ಪಾರ್ಲರ್ ಆಗಿ ಮಾಡಿಕೊಂಡಿದ್ದು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಆರೋಪಿಸಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಕೆರಳಿದ್ದು, ಸ್ವಾಮೀಜಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೇ ಅನ್ನೋ ಆರೋಪವೂ ಕೇಳಿಬಂದಿದೆ.
ಸುಮಾರು 5 ಜನರ ಗುಂಪು ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಯನ್ನ ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿತ್ತು. ಗ್ರಾಮದ ವ್ಯಕ್ತಿಯೊಬ್ಬರ ಸಮ್ಮುಖದಲ್ಲಿ 10 ಲಕ್ಷಕ್ಕೆ ಡೀಲ್ ಓಕೆ ಆಗಿತ್ತು. ಬಳಿಕ ಸ್ವಾಮೀಜಿ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿ ಮಠಕ್ಕೆ ಕರೆಸಿಕೊಂಡು 7 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಬಾಕಿ 3 ಲಕ್ಷ ಹಣ ಬಂದಿಲ್ಲ ಅಂತ ಗುಂಪಿನವರು ವಿಡಿಯೋ ವೈರಲ್ ಮಾಡಿದ್ದಾರೆ.
ಶ್ರದ್ಧಾ ಥರ ಕತ್ತರಿಸಿ ಹಾಕುವೆ ಎಂದು ಯುವತಿಗೆ ಬೆದರಿಕೆ; ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್
ಸದ್ಯ ವಿಡಿಯೋ ಮಾಡಿ ಹಣ ವಸೂಲಿ ಮಾಡಿದ ಗ್ಯಾಂಗ್ ವಿರುದ್ಧ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸ್ವಾಮೀಜಿ ದೂರು ದಾಖಲಿಸಿದ್ದಾರೆ. ವಿಡಿಯೋ ಇಟ್ಟುಕ್ಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಐವರ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲು ಮುಂದಾಗಿದ್ದಾರೆ.