Atal Setu: ಪ್ರಧಾನಿ ಮೋದಿ ಉದ್ಘಾಟಿಸಿದ್ದ ಅಟಲ್ ಸೇತುವೆ ಮೇಲೆಲ್ಲಾ ಗುಂಡಿಗಳು; ಗುತ್ತಿಗೆದಾರರಿಗೆ ಬಿತ್ತು 1 ಕೋಟಿ ರೂ. ದಂಡ
ಈ ಹಿಂದೆ ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಸಮುದ್ರ ಸೇತುವೆ ಅಟಲ್ ಸೇತು ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಆರೋಪಿಸಿದ್ದರು. ಅಲ್ಲದೇ ಸೇತುವೆ ಉದ್ಘಾಟನೆಗೊಂಡ ಕೆಲವೇ ತಿಂಗಳೊಳಗೆ ಅದರಲ್ಲಿ ಬಿರುಕುಗಳು ಕಾಣಿಸಿಕೊಂಡಿತ್ತು. ಇದೀಗ ಈ ಸೇತುವೆ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಮಯವಾಗಿದೆ.

ಸಾಂದರ್ಭಿಕ ಚಿತ್ರ -

ಮುಂಬೈ: ಭಾರತದ (India) ಅತಿ ಉದ್ದದ ಸಮುದ್ರ ಸೇತುವೆಯಾದ ಅಟಲ್ ಸೇತುವೆಯಲ್ಲಿ (Atal Setu) ರಸ್ತೆ ಹದಗೆಟ್ಟ ವಿಡಿಯೋ ವೈರಲ್ ಆದ ನಂತರ, ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (MMRDA) ಗುತ್ತಿಗೆದಾರರಿಗೆ (Contractors) 1 ಕೋಟಿ ರೂ. ದಂಡ ವಿಧಿಸಿದೆ. ಸಾಮಾಜಿಕ ಜಾಲತಾಣ Xನಲ್ಲಿ @Roads_of_India ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ ಸೇತುವೆಯ ಕೆಲವು ಭಾಗಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ.
ವರದಿಯ ಪ್ರಕಾರ, MMRDA ಗುತ್ತಿಗೆದಾರರಾದ TATA ಪ್ರಾಜೆಕ್ಟ್ಸ್, ದೇವೂ JVಯನ್ನು ಜವಾಬ್ದಾರರನ್ನಾಗಿಸಿದೆ. 21.8 ಕಿ.ಮೀ. ಉದ್ದದ ಅಟಲ್ ಸೇತುವೆಯ 7.8 ಕಿ.ಮೀ. ಭಾಗವನ್ನು ಈ ಗುತ್ತಿಗೆದಾರರು ನಿರ್ಮಿಸಿದ್ದರು. ನವಿ ಮುಂಬೈಗೆ ಹೋಗುವ ರಸ್ತೆಯ 11, 15 ಮತ್ತು 16 ಕಿ.ಮೀ. ಗುರುತುಗಳ ಬಳಿ ಸಣ್ಣ ಹಾನಿಗಳು ಕಂಡುಬಂದಿವೆ. ಭಾರೀ ಮಳೆ ಮತ್ತು ಮಾನ್ಸೂನ್‌ನಲ್ಲಿ ನಿರಂತರ ಟ್ರಾಫಿಕ್ ಸಮಸ್ಯೆ ಈ ಹಾನಿಗೆ ಕಾರಣ ಎಂದು MMRDA ತಿಳಿಸಿದೆ.
#WATCH | Mumbai, Maharashtra: Additional Metropolitan Commissioner Vikram Kumar inspects the damage to Atal Setu road. pic.twitter.com/eivJG57Hm0
— ANI (@ANI) September 19, 2025
ಸೇತುವೆಯ ಮಹತ್ವ
2024ರಲ್ಲಿ ಉದ್ಘಾಟನೆಯಾದ ಅಟಲ್ ಸೇತುವೆ, 16.5 ಕಿ.ಮೀ. ಸಮುದ್ರದ ಮೇಲೆ ವಿಸ್ತರಿಸಿದೆ. ದಕ್ಷಿಣ ಮುಂಬೈನ ಸೇವ್ರಿಯಿಂದ ನವಿ ಮುಂಬೈನ ನ್ಹಾವ ಶೇವಾಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯು 18,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾಗಿದ್ದು, ಜವಾಹರಲಾಲ್ ನೆಹರು ಬಂದರು ಮತ್ತು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಗ ತಲುಪಲು ಸಾಧ್ಯವಾಗುತ್ತೆ. ಇದು ಸೇವ್ರಿ-ನ್ಹಾವ ಶೇವಾ ಪ್ರಯಾಣದ ಸಮಯವನ್ನು 15-20 ನಿಮಿಷಗಳಿಗೆ ಕಡಿಮೆ ಮಾಡಿದೆ.
ಈ ಸುದ್ದಿಯನ್ನು ಓದಿ: Viral Video: ಎರಡು ಪಾನಿಪುರಿ ಕಮ್ಮಿ ಕೊಟ್ಟಿದ್ದಕ್ಕೆ ರಸ್ತೆಯನ್ನೇ ಬ್ಲಾಕ್ ಮಾಡಿದ್ಲು ಈ ಮಹಿಳೆ! ವಿಡಿಯೋ ನೋಡಿ
ತಕ್ಷಣದ ಕ್ರಮ
MMRDA ತಕ್ಷಣ ದುರಸ್ತಿಗೆ ಕ್ರಮ ಕೈಗೊಂಡಿದೆ. ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮಾಸ್ಟಿಕ್ ಆಸ್ಫಾಲ್ಟ್ ಬಳಸಿ ಒದ್ದೆಯಾದ ಸ್ಥಿತಿಯಲ್ಲೂ ರಸ್ತೆ ಸುರಕ್ಷಿತವಾಗಿರುವಂತೆ ಕ್ರಮ ಕೈಗೊಳ್ಳಲಾಗಿದೆ. “ಮಾನ್ಸೂನ್ ಮುಗಿದ ನಂತರ, ಉನ್ನತ ದರ್ಜೆಯ ಡೆನ್ಸ್ ಬಿಟುಮಿನಸ್ ಮಕಾಡಮ್ (DBM) ಮತ್ತು ಆಸ್ಫಾಲ್ಟ್ ಕಾಂಕ್ರೀಟ್ (AC) ಲೇಯರ್‌ಗಳೊಂದಿಗೆ ಶಾಶ್ವತ ದುರಸ್ತಿ ಮಾಡಲಾಗುವುದು,” ಎಂದು MMRDA ತಿಳಿಸಿದೆ.