Physical Assault: ಬಾಲಕಿಯನ್ನು ತುಂಡರಿಸಿ 2 ಚೀಲಗಳಲ್ಲಿ ತುಂಬಿದ ನೀಚ! ಶಿಕ್ಷಕನ ಚಪಲಕ್ಕೆ ವಿದ್ಯಾರ್ಥಿನಿ ಬಲಿ
ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪ್ರಾಪ್ತ ಬಾಲಕಿಯರು ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದೀಗ ಇಂತದೇ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಬದುಕಿಗೆ ದಾರಿ ತೋರಿಸಿಬೇಕಾದ ಗುರುವೇ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯನ್ನ ಬಳಸಿಕೊಂಡಿದ್ದಾನೆ.

-

ರಾಂಪುರ್‌ಹತ್: ಪಶ್ಚಿಮ ಬಂಗಾಳದ (West Bengal) ಬೀರ್‌ಭೂಮ್ ಜಿಲ್ಲೆಯ ರಾಂಪುರ್‌ಹತ್‌ನ (Rampurhat) ಬರಮೇಸಿಯಾ ಗ್ರಾಮದಲ್ಲಿ 13 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ (Murder) ಮಾಡಿರು ಘಟನೆ ನಡೆದಿದೆ. ಮೃತ ಬಾಲಕಿ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಈ ಹಿಂದೆ ಆಕೆಯ ಶಿಕ್ಷಕನಾಗಿದ್ದ ಕೆಲಸ ಮಾಡಿದ್ದ ಮನೋಜ್ ಪಾಲ್ ಎಂಬಾತನೇ ದೌರ್ಜನ್ಯ ಎಸಗಿ, ಕೊಲೆಗೈದಿದ್ದಾನೆ.
ಬಾಲಕಿಯ ಕುಟುಂಬದವರ ಪ್ರಕಾರ ಈಗಾಗಲೇ ವಿವಾಹಿತನಾಗಿದ್ದ ಮನೋಜ್ ಪಾಲ್, ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ. ಅಷ್ಟೇಅಲ್ಲದೆ ಕಳೆದ ಕೆಲ ತಿಂಗಳಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ. “ನೀನು ಬೆಳೆದ ಮೇಲೆ ನಿನ್ನನ್ನು ಮದುವೆಯಾಗುವೆ, ಬಿಡುವುದಿಲ್ಲ” ಎಂದು ಆಕೆಗೆ ಹೇಳುತ್ತಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಬಾಲಕಿ ಶಾಲೆ ಮತ್ತು ಟ್ಯೂಶನ್‌ಗೆ ಹೋಗುವಾಗ ಶಿಕ್ಷಕ ಆಕೆಯನ್ನು ತಡೆಯುತ್ತಿದ್ದ ಎಂದು ಆಕೆಯ ಸಹಪಾಠಿಗಳು ತಿಳಿಸಿದ್ದಾರೆ.
ಆಗಸ್ಟ್ 28ರಂದು ಬಾಲಕಿ ಟ್ಯೂಶನ್‌ಗೆಂದು ಮನೆಯಿಂದ ಹೊರಟು ವಾಪಸಾಗಲಿಲ್ಲ. ಕುಟುಂಬವು ತಕ್ಷಣ ಪೊಲೀಸರಿಗೆ ದೂರು ನೀಡಿತಾದರೂ, ಪೊಲೀಸರು “ಬಾಲಕಿಯೇ ಓಡಿಹೋಗಿರಬಹುದು” ಎಂದು ಲಘುವಾಗಿ ತೆಗೆದುಕೊಂಡರು. ಸೆಪ್ಟೆಂಬರ್ 1ರಂದು ಪಾಲ್‌ನನ್ನು ವಿಚಾರಣೆಗೆ ಒಳಪಡಿಸಿದರಾದರೂ, ಬಿಡುಗಡೆ ಮಾಡಲಾಯಿತು. ಆದರೆ, ಹೊಸ ಸುಳಿವುಗಳ ಆಧಾರದ ಮೇಲೆ ಸೆಪ್ಟೆಂಬರ್ 16ರಂದು ಆತನನ್ನು ಮತ್ತೆ ಬಂಧಿಸಲಾಯಿತು. ವಿಚಾರಣೆಯಲ್ಲಿ ಆತ ಬಾಲಕಿಯ ಶವವನ್ನು ಎಸೆದಿದ್ದ ಸ್ಥಳಕ್ಕೆ ಕರೆದೊಯ್ದನು.
ಈ ಸುದ್ದಿಯನ್ನೂ ಓದಿ: Viral Video: ಬೆಂಗಳೂರಿನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಹಲ್ಲೆ; ಆರ್ಡರ್ ವಿಳಂಬ ಮಾಡಿದ್ದಕ್ಕೆ ಈ ಕೃತ್ಯ, ವಿಡಿಯೊ ವೈರಲ್
ಪೊಲೀಸರ ಪ್ರಕಾರ, ಪಾಲ್ ಬಾಲಕಿಯನ್ನು ಕೊಂದು, ಶವವನ್ನು ತುಂಡರಿಸಿದ್ದಾನೆ. ಎರಡು ಚೀಲಗಳಲ್ಲಿ ಶವದ ಭಾಗಗಳನ್ನು ಇಟ್ಟಿದ್ದು, ಕೆಳಗಿನ ಭಾಗ ಇನ್ನೂ ಪತ್ತೆಯಾಗಿಲ್ಲ. ಇನ್ನೊಬ್ಬ ವ್ಯಕ್ತಿಯು ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪಾಲ್‌ನ ಬಳಿಯಿಂದ ಪೆನ್‌ಡ್ರೈವ್ ಮತ್ತು ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸ್ಥಳೀಯರ ಪ್ರಕಾರ, ಪಾಲ್ ನಡತೆ ಕೆಟ್ಟದಾಗಿತ್ತು. ಆತನ ವಿಚ್ಛೇದಿತ ಪತ್ನಿ ಕೂಡ ಆತನನ್ನು “ವಿಕೃತ ವ್ಯಕ್ತಿ” ಎಂದು ಕರೆದಿದ್ದಾಳೆ. ಈ ಘಟನೆಯು ಬಾಲಕಿಯರ ಸುರಕ್ಷತೆ ಬಗ್ಗೆ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ.