ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈದ್ಯರ ಉಡುಗೆಯಲ್ಲಿ ಕಾಣಿಸಿಕೊಂಡಿದ್ದ ಭಯೋತ್ಪಾದಕ ಉಮರ್ ಮೊಹಮ್ಮದ್ ಫೋಟೊ ವೈರಲ್‌

ದೆಹಲಿಯ ಕೆಂಪು ಕೋಟೆಯ ಬಳಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಉಮರ್ ಮೊಹಮ್ಮದ್ ನ ಹೊಸ ಛಾಯಾಚಿತ್ರವೊಂದು ಬಿಡುಗಡೆಯಾಗಿದೆ. ಇದರಲ್ಲಿ ಆತ ವೈದ್ಯರ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾನೆ. ಹರಿಯಾಣದ ಫರಿದಾಬಾದ್‌ನ ಅಂಗಡಿಯೊಂದರ ಸಿಸಿಟಿವಿ ದೃಶ್ಯಗಳಲ್ಲಿ ಇದು ಕಂಡು ಬಂದಿದೆ.

ವೈದ್ಯರ ಉಡುಗೆಯಲ್ಲಿ ಕಾಣಿಸಿಕೊಂಡ ಭಯೋತ್ಪಾದಕ ಉಮರ್ ಮೊಹಮ್ಮದ್ (ಸಂಗ್ರಹ ಚಿತ್ರ)

ನವದೆಹಲಿ: ಕಳೆದ ಸೋಮವಾರ ರಾತ್ರಿ ದೆಹಲಿಯ (Delhi blast) ಕೆಂಪು ಕೋಟೆಯ ಬಳಿ ನಡೆದ ಆತ್ಮಾಹುತಿ ಬಾಂಬರ್ ದಾಳಿಯ ಪ್ರಮುಖ ಆರೋಪಿ ಉಮರ್ ಮೊಹಮ್ಮದ್ (Delhi Suicide Bomber Umar Mohammad) ವೈದ್ಯರ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಚಿತ್ರವೊಂದು ತನಿಖಾಧಿಕಾರಿಗಳ ಕೈಗೆ ಸಿಕ್ಕಿದೆ. ಹರಿಯಾಣದ (haryana) ಫರಿದಾಬಾದ್‌ನ (Faridabad) ಅಂಗಡಿಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಇತ್ತೀಚೆಗೆ ಪತ್ತೆಯಾದ ಜೈಶ್-ಎ-ಮೊಹಮ್ಮದ್ (Jaish-e-Mohammed) ಗೆ ಸಂಬಂಧಿಸಿದ ಭಯೋತ್ಪಾದಕ ಕಾರ್ಯಾಚಟುವಟಿಕೆ ಇದರ ಹತ್ತಿರದಲ್ಲೇ ನಡೆಯುತ್ತಿತ್ತು. ಸಿಕ್ಕಿರುವ ಸಿಸಿಟಿವಿ ದೃಶ್ಯವಾಳಿಯಲ್ಲಿ ಉಮರ್ ಮೊಹಮ್ಮದ್ ಎರಡು ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.

ಹಳೆಯ ದೆಹಲಿಯ ಟ್ರಾಫಿಕ್ ನಿಲ್ದಾಣ ಸಮೀಪ ಕಳೆದ ಸೋಮವಾರ ಕಾರು ಸ್ಫೋಟಗೊಂಡು 13 ಮಂದಿ ಸಾವನ್ನಪ್ಪಿದ್ದರು. ಈ ಕಾರಿನಲ್ಲಿ ಉಮರ್ ಮೊಹಮ್ಮದ್ ಕೂಡ ಇದ್ದ ಎನ್ನಲಾಗಿದೆ.

ಇದನ್ನೂ ಓದಿ: Yadgir News: ಸುರಪುರದಲ್ಲಿ ಬಸ್ ಹರಿದು 2 ವರ್ಷದ ಮಗು ಸಾವು

ಉಮರ್ ಮೊಹಮ್ಮದ್ 1989ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ್ದು, ಫರಿದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿದ್ದಾನೆ. ಈಗ ಈತ ಹಾಗೂ ಇನ್ನು ಹಲವು ವೈದ್ಯರು ಭಯೋತ್ಪಾದನಾ ಆರೋಪಗಳನ್ನು ಎದುರಿಸುತ್ತಿದ್ದಾರೆ.

ದೆಹಲಿಯ ಚಾಂದನಿ ಚೌಕ್‌ಗೆ ಸೋಮವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದಿದ್ದ ಈತನ ಸಂಪೂರ್ಣ ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ನಕ್ಷೆ ರಚನೆ ಮಾಡಿದ್ದು ಆರೋಪಿ ಎಲ್ಲಿಂದ ಬಂದಿದ್ದಾನೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲಿ ಆತನ ಗುರುತನ್ನು ಕೂಡ ಪತ್ತೆ ಮಾಡಲಾಗಿದೆ.

ಭಯೋತ್ಪಾದಕ ಸಂಚಿನ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಇನ್ನೂ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಉಮರ್ ಮೊಹಮ್ಮದ್ ಅಕ್ಟೋಬರ್ 29 ರಂದು ನಗರದ ಡೀಲರ್‌ನಿಂದ ಕಾರು ಖರೀದಿ ಮಾಡಿದ್ದು, ಅದೇ ದಿನ ಅದರ ಮಾಲಿನ್ಯ ತಪಾಸಣೆಗಾಗಿ ಹೊರಗೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ 12 ದಿನಗಳ ಕಾಲ ಅದನ್ನು ಹೊರಗೆ ತೆಗೆದಿರಲಿಲ್ಲ.

ಇದನ್ನೂ ಓದಿ: Chikkanayakanahalli News: ತಹಸೀಲ್ದಾರ್ ಕಚೇರಿಗೆ ಕಳಂಕ ! ನೂರಾರು ನಕಲಿ ಸಾಗುವಳಿ ಚೀಟಿ ವಿತರಣೆ ಜನರಲ್ಲಿ ಆತಂಕ

ಫರಿದಾಬಾದ್ ನಲ್ಲಿ ಮುಜಮ್ಮಿಲ್ ಶಕೀಲ್, ಆದಿಲ್ ರಾಥರ್ ಮತ್ತು ಇತರ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳದಲ್ಲಿ 2,900 ಕೆಜಿ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡರು. ಇದರಿಂದ ಭಯಭೀತಗೊಂಡ ಮೊಹಮ್ಮದ್‌ ಬಂಧನದಿಂದ ತಪ್ಪಿಸಿಕೊಳ್ಳಲು ಫರಿದಾಬಾದ್‌ನಿಂದ ಹರಿಯಾಣದ ಮೇವಾತ್ ಮೂಲಕ ಫಿರೋಜ್‌ಪುರ್ ಝಿರ್ಕಾಕ್ಕೆ ಹೋಗಿದ್ದಾನೆ. ಅನಂತರ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ದೆಹಲಿಗೆ ಮರಳಿ ಬಂದಿದ್ದು, ಸೋಮವಾರ ಬೆಳಗ್ಗೆ 8.13ಕ್ಕೆಆತ ಬದರ್ಪುರ್ ಟೋಲ್ ದಾಟಿದ್ದಾನೆ. ಬಳಿಕ ದೆಹಲಿಯ ಸುಮಾರು 50 ಸ್ಥಳಗಳಲ್ಲಿ ಆತ ಕಾಣಿಸಿಕೊಂಡಿದ್ದಾನೆ. ಮಧ್ಯಾಹ್ನ 3 ಗಂಟೆಯವರೆಗೆ ನಗರದಾದ್ಯಂತ ಪ್ರಯಾಣಿಸಿದ್ದ ಈತ ಕೊನೆಗೆ ಕೆಂಪು ಕೋಟೆಯ ಬಳಿ ಬಂದು ಕಾರನ್ನು ಪಾರ್ಕ್ ಮಾಡಿದ್ದಾನೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author