ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಲಿವುಡ್‌ ಜೊತೆ ಲಿಂಕ್‌... ಡ್ರಗ್ಸ್‌ ಸರಬರಾಜು...ಭೂಗತ ಪಾತಕಿ ದಾವೂದ್‌ ಸಹಚರ ಗಡಿಪಾರು

ಬಾಲಿವುಡ್, ರಾಜಕೀಯ ಗಣ್ಯರಿಗೆ ಮಾದಕ ದ್ರವ್ಯ ಸರಬರಾಜು ಆರೋಪದಲ್ಲಿ ದಾವೂದ್ ಇಬ್ರಾಹಿಂನ ಸಹಾಯಕ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ ನನ್ನು ದುಬೈನಿಂದ ಗಡಿಪಾರು ಪಡಲಾಗಿದೆ. ಈತನ ವಿಚಾರಣೆ ಸಮಯದಲ್ಲಿ ಹಲವಾರು ಸ್ಪೋಟಕ ಸಂಗತಿಗಳು ಬಹಿರಂಗವಾಗಿವೆ. ಭಾರತದ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರ ಸಲೀಂ ಡೋಲಾ ಬಂಧನದ ಬಳಿಕ ಇದೊಂದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

ದಾವೂದ್ ಇಬ್ರಾಹಿಂನ ಸಹಚರ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. (ಸಂಗ್ರಹ ಚಿತ್ರ)

ಮುಂಬೈ: ಬಾಲಿವುಡ್ ನ ಹಲವಾರು ನಟ, ನಟಿಯರು ಸೇರಿದಂತೆ ಅನೇಕರಿಗೆ ಮಾದಕ ದ್ರವ್ಯ ಸರಬರಾಜು ಮಾಡಿದ್ದಾನೆ ಎಂದು ಶಂಕಿಸಲಾಗಿದ್ದ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ (Mohammed Salman Safi Sheikh) ನನ್ನು ದುಬೈನಿಂದ (Dubai) ಗಡಿಪಾರು ಪಡಲಾಗಿದೆ. ಈತ ಮಾದಕ ದ್ರವ್ಯ ಲೋಕದ ದೊರೆ ದಾವೂದ್ ಇಬ್ರಾಹಿಂನ (Dawood Ibrahim) ಸಹಾಯಕನಾಗಿದ್ದಾನೆ. ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಿರುವ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ ವಿಚಾರಣೆ ವೇಳೆ ಬಾಲಿವುಡ್ (bollywood stars) ಮತ್ತು ರಾಜಕೀಯದ ಪ್ರಮುಖ ವ್ಯಕ್ತಿಗಳಿಗೆ ತಾನು ಮಾದಕ ದ್ರವ್ಯ ಪೂರೈಸಿರುವುದಾಗಿ ಹೇಳಿದ್ದಾನೆ ಎನ್ನಲಾಗಿದ್ದು, ಇದು ಈಗ ತೀವ್ರ ತನಿಖೆಯಲ್ಲಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ದಾವೂದ್ ನ ಪ್ರಮುಖ ಸಹಚರನಾಗಿದ್ದ ಮಾದಕವಸ್ತು ಕಳ್ಳಸಾಗಣೆದಾರ ಸಲೀಂ ಡೋಲಾ ನನ್ನು ಯುಎಇ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಡೋಲಾ ದುಬೈನಿಂದ ಕಾರ್ಯ ನಿರ್ವಹಿಸುತ್ತಿದ್ದು, ಈತ ಏಳರಿಂದ ಎಂಟು ಭಾರತೀಯ ರಾಜ್ಯಗಳಿಗೆ ಎಂ-ಕ್ಯಾಟ್, ಮಿಯಾವ್ ಮಿಯಾವ್ ಅಥವಾ ಐಸ್ ಎಂದು ಕರೆಯಲ್ಪಡುವ ಸಿಂಥೆಟಿಕ್ ಡ್ರಗ್ ಮೆಫೆಡ್ರೋನ್ ಅನ್ನು ಪೂರೈಸುತ್ತಿದ್ದನು. ವಿಚಾರಣೆಯ ಸಮಯದಲ್ಲಿ ಡೋಲಾನ ಮಗ ತಾಹೆರ್ ಡೋಲಾ ಹಲವು ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ.

ಇದನ್ನೂ ಓದಿ: Prajwal Revanna case: ಪ್ರಜ್ವಲ್‌ ರೇವಣ್ಣ ಜೈಲುವಾಸ ಮುಂದುವರಿಕೆ, ಜಾಮೀನಿಗೆ ಕೋರ್ಟ್‌ ನಕಾರ

ದಾವೂದ್ ಇಬ್ರಾಹಿಂ ಅವರ ಸಂಬಂಧಿಕರು ಭಾರತ ಮತ್ತು ವಿದೇಶಗಳಲ್ಲಿ ಆಯೋಜಿಸಿದ್ದ ವಿವಿಧ ರೀತಿಯ ಮಾದಕವಸ್ತುಗಳನ್ನು ಬಳಸಲಾಗಿದ್ದ ಪಾರ್ಟಿಗಳಲ್ಲಿ ಹಲವಾರು ಬಾಲಿವುಡ್ ನಟರು, ಮಾಡೆಲ್‌ಗಳು, ರ‍್ಯಾಪರ್‌ಗಳು, ಚಲನಚಿತ್ರ ನಿರ್ಮಾಪಕರು ಪಾಲ್ಗೊಂಡಿದ್ದರು ಎಂದು ಆತ ತಿಳಿಸಿದ್ದಾನೆ.

ಇದೀಗ ಈ ಪ್ರಕರಣವನ್ನು ಜಂಟಿಯಾಗಿ ಮುಂಬೈ ಪೊಲೀಸರು, ಜಾರಿ ನಿರ್ದೇಶನಾಲಯ ಮತ್ತು ಅಪರಾಧ ಶಾಖೆ ತನಿಖೆ ನಡೆಸುತ್ತಿವೆ. ಹೀಗಾಗಿ ಶೀಘ್ರದಲ್ಲೇ ಅನೇಕ ಬಾಲಿವುಡ್ ಗಣ್ಯರಿಗೆ ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ. ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಗಳಲ್ಲಿ ಇದು ಅತ್ಯಂತ ದೊಡ್ಡದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಾದಕ ದ್ರವ್ಯ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪ ಹಲವಾರು ಬಾಲಿವುಡ್ ತಾರೆಯರ ಮೇಲೆ ಕೇಳಿ ಬಂದಿತ್ತು. ಇದರಲ್ಲಿ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್, ನಟಿ ನೋರಾ ಫತೇಹಿ, ಹಿರಿಯ ಕಾಂಗ್ರೆಸ್ ನಾಯಕ ಬಾಬಾ ಸಿದ್ದೀಕ್ ಅವರ ಪುತ್ರ ರಾಜಕಾರಣಿ ಜೀಶನ್ ಸಿದ್ದೀಕ್, ದಿವಂಗತ ಹಸೀನಾ ಪಾರ್ಕರ್ ಅವರ ಪುತ್ರ ಅಲಿಶಾ ಪಾರ್ಕರ್, ನಿರ್ಮಾಪಕ ಅಬ್ಬಾಸ್ ಮಸ್ತಾನ್ ಮತ್ತು ರ‍್ಯಾಪರ್ ಲೋಕಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಬರೋಬ್ಬರಿ 252 ಕೋಟಿ ರೂಪಾಯಿಗಳ ಮಾದಕ ದ್ರವ್ಯವವನ್ನು ಪೂರೈಕೆ ಮಾಡಿದ್ದ ಆರೋಪ ಸಲೀಂ ಡೋಲಾ ಮೇಲಿದೆ.

ಇದರ ತನಿಖೆಯ ಮುಂದುವರಿದ ಭಾಗವಾಗಿ ಇದೀಗ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ ನನ್ನು ದುಬೈನಿಂದ ಗಡಿಪಾರು ಮಾಡಿದ ಬಳಿಕ ಬಂಧಿಸಲಾಗಿದೆ. 2024 ರಲ್ಲಿ ನಡೆದ ಸಣ್ಣ ಪ್ರಕರಣಕ್ಕೆ ಸಂಬಂಧಿಸಿ ಮುಂದುವರಿದ ತನಿಖೆಯ ಭಾಗವಾಗಿ ಇದು 15ನೇ ವ್ಯಕ್ತಿಯ ಬಂಧನವಾಗಿದೆ.

ಇದನ್ನೂ ಓದಿ: Shreya Ghoshal: ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು; ಅನೇಕರು ಅಸ್ವಸ್ಥ

ಡೋಂಗ್ರಿ ಮೂಲದ ಸಲೀಂ ಡೋಲಾನ ನಿಕಟವರ್ತಿಯಾಗಿರುವ ಮೊಹಮ್ಮದ್ ಸಲ್ಮಾನ್ ಸಫಿ ಶೇಖ್ ಭಾರತ, ದುಬೈ, ಥೈಲ್ಯಾಂಡ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಈತ ಹೈ ಪ್ರೊಫೈಲ್ ಮಾದಕವಸ್ತು ಆಧಾರಿತ ಪಾರ್ಟಿಗಳನ್ನು ನಡೆಸಿದ್ದ. ಇದರಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ವಿದ್ಯಾ ಇರ್ವತ್ತೂರು

View all posts by this author