ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಯುವತಿಯ ಪ್ರಾಣ ತೆಗೆದ ಪೊಲೀಸಪ್ಪ; ಕುಟುಂಬಸ್ಥರಿಂದ ಭಾರೀ ಪ್ರತಿಭಟನೆ

Accident: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ಪೊಲೀಸ್ ಅಧಿಕಾರಿ ಅಪಘಾತವೆಸಗಿ, ಪ್ರಯಾಣಿಕಳ ಮೇಲೆ ಕಾರು ಹರಿಸಿದ ಪರಿಣಾಮ ಯುವತಿ ಸ್ಥಳದಲ್ಲೇ ದುರ್ಮರಣ ಹೊಂದಿದ ದುರ್ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಯಾಣಿಕಳ ಮೇಲೆಯೆ ಕಾರು ಹರಿಸಿದ ಪೊಲೀಸ್, ಯುವತಿ ದುರ್ಮರಣ

ಗುರುಗ್ರಾಮ, ಫೆ.12: ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕಾರು, ಇ-ರಿಕ್ಷಾಗೆ ಡಿಕ್ಕಿ ಹೊಡೆದ (Accident) ಪರಿಣಾಮ 24 ವರ್ಷದ ಯುವತಿ ದುರ್ಮರಣಕ್ಕೀಡಾದ ಘಟನೆ ಹರಿಯಾಣದ (Haryana) ಅಂಬಾಲದಲ್ಲಿ ನಡೆದಿದೆ. ನಿಕಿತಾ ಎಂದು ಗುರುತಿಸಲಾದ ಯುವತಿ ಮೃತ ದುರ್ದೈವಿ. ತಾನು ಪ್ರಯಾಣಿಸುತ್ತಿದ್ದ ಇ-ರಿಕ್ಷಾಗೆ ಪೊಲೀಸ್ ಡಿಕ್ಕಿ ಹೊಡೆದ ಕಾರಣ ರಸ್ತೆಗೆ ಬಿದ್ದಿದ್ದಾಳೆ. ಇದು ಅಂಬಾಲ ಸಿವಿಲ್ ಆಸ್ಪತ್ರೆಯಲ್ಲಿ ಭಾರಿ ಗದ್ದಲ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದು, ಆಕೆಯ ಕುಟುಂಬವು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಬುಧವಾರ (ಫೆ.11) ಸಂಜೆ ನಿಕಿತಾ ದೆಹಲಿಯಿಂದ ಅಂಬಾಲದಲ್ಲಿರುವ ತನ್ನ ಮನೆಗೆ ಪ್ರಯಾಣಿಸುತ್ತಿದ್ದಾಗ ಪೊಲೀಸ್ ಸಿಬ್ಬಂದಿಯೊಬ್ಬರು ತಾವು ಚಲಾಯಿಸುತ್ತಿದ್ದ ವಾಹನದಿಂದ ಇ-ರಿಕ್ಷಾಗೆ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ನಿಕಿತಾ ವಾಹನದಿಂದ ಕೆಳಕ್ಕೆ ಬಿದ್ದಿದ್ದಾಳೆ. ಪೊಲೀಸ್ ಅಧಿಕಾರಿಯು ಆಕೆಯ ಮೇಲೆಯೇ ತನ್ನ ವಾಹನದಿಂದ ಹರಿದ ಪರಿಣಾಮ ಸ್ಥಳದಲ್ಲೇ ಯುವತಿ ಸಾವಿಗೀಡಾಗಿದ್ದಾಳೆ.

ಕಾನ್ಪುರ ಲಂಬೋರ್ಘಿನಿ ಅಪಘಾತ; ಕೊನೆಗೂ ಉದ್ಯಮಿ ಪುತ್ರನನ್ನು ಬಂಧಿಸಿದ ಪೊಲೀಸರು

ನಾನು ಅಂಬಾಲಾ ಕಂಟೋನ್ಮೆಂಟ್‌ನಿಂದ ನನ್ನ ಇ-ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಕರೊಂದಿಗೆ ಚಲಾಯಿಸುತ್ತಿದ್ದೆ. ಪೊಲೀಸ್ ಅಧಿಕಾರಿಯೊಬ್ಬರು ವೇಗವಾಗಿ ಚಲಿಸುತ್ತಿದ್ದ ಕಾರು, ನಮ್ಮ ಇ-ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರಲ್ಲಿ ಒಬ್ಬ ಯುವತಿ ರಸ್ತೆಗೆ ಬಿದ್ದಳು ಎಂದು ಇ-ರಿಕ್ಷಾ ಚಾಲಕ ರವೀಂದರ್ ಸಿಂಗ್ ಹೇಳಿದರು. ನಂತರ, ಪೊಲೀಸ್ ಅಧಿಕಾರಿ ಯುವತಿಯ ಮೇಲೆಯೇ ಕಾರು ಹರಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ, ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು ಎಂದು ಅವರು ಹೇಳಿದರು. ಪೊಲೀಸ್ ಅಧಿಕಾರಿ ಕುಡಿದಿದ್ದರು ಎಂದು ಸಿಂಗ್ ಹೇಳಿದ್ದಾರೆ.

ಸ್ಥಳೀಯರ ಹೇಳಿಕೆಗಳನ್ನು ಆಧರಿಸಿ ನಿಕಿತಾಳ ಸಹೋದರ ಮಾಯಾಂಕ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ನನ್ನ ಅಕ್ಕ ದೆಹಲಿಯಿಂದ ಬರುತ್ತಿದ್ದರು. ಅವರ ಹೆಸರು ನಿಕಿತಾ. ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕಾರನ್ನು ಚಲಾಯಿಸಿ ಅಪಘಾತವೆಸಗಿದ್ದಾರೆ. ತನ್ನ ಸಹೋದರಿಯ ಮೇಲೆ ಕಾರು ಹರಿಸಿದ್ದಾರೆ ಎಂದು ಅವರು ಆರೋಪಿಸಿದರು.

ಅಂಬಾಲಾದ ಕಾಳಿ ಪಲ್ಟನ್ ಸೇತುವೆ ಬಳಿ ಈ ಅಪಘಾತ ನಡೆದಿದ್ದು, ಸ್ಥಳೀಯರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಷಯದ ಕುರಿತು ಮಾತನಾಡಿದ ಸ್ಟೇಷನ್ ಹೌಸ್ ಆಫೀಸರ್ (SHO) ಧರ್ಮವೀರ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಮಿತ್ ಅವರನ್ನು ಬಲದೇವ್ ನಗರ ಔಟ್‌ಪೋಸ್ಟ್‌ನಲ್ಲಿ ರೈಡರ್ ಸಂಖ್ಯೆ 13 ಆಗಿ ನಿಯೋಜಿಸಲಾಗಿತ್ತು ಎಂದು ಹೇಳಿದರು.

ಕುಡಿದ ಅಮಲಿನಲ್ಲಿದ್ದ ಪೊಲೀಸ್ ಅಧಿಕಾರಿ ವಾಹನದ ನಿಯಂತ್ರಣ ಕಳೆದುಕೊಂಡು ನಿಕಿತಾ ಮೇಲೆ ಹರಿದಿದ್ದು, ವಾಹನ ಹೆದ್ದಾರಿಯಲ್ಲಿನ ಗ್ರಿಲ್‌ಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಚಾಲಕನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.