ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇ-ಕೆವೈಸಿ ಆಗದೆ ಹಣವಿದ್ದರೂ ಕೊಡದ ಬ್ಯಾಂಕ್; ಸಕಾಲದಲ್ಲಿ ಚಿಕಿತ್ಸೆ ಸಿಗದೆ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟ ವ್ಯಕ್ತಿ

ಇ-ಕೆವೈಸಿ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕೊಂದು ಸಕಾಲದಲ್ಲಿ ಹಣ ನೀಡದೇ ಇದ್ದುದರಿಂದ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನ ಜಾರ್ಖಂಡ್ ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯ ಮೃತದೇಹದೊಂದಿಗೆ ಕುಟುಂಬದವರು ಪ್ರತಿಭಟನೆ ನಡೆಸಿ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಗ್ರಹ ಚಿತ್ರ

ಜಾರ್ಖಂಡ್: ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಇ-ಕೆವೈಸಿ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ (Jharkhand Gramin Bank) ಹಣ ನೀಡಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಬುಡಕಟ್ಟು ಸಮುದಾಯದ (tribal community) ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಘಟನೆ ಜಾರ್ಖಂಡ್ (Jharkhand) ನ ಗರ್ವಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ವ್ಯಕ್ತಿಯ ಮೃತದೇಹದೊಂದಿಗೆ ಕುಟುಂಬದವರು ಪ್ರತಿಭಟನೆ (protest) ನಡೆಸಿದರು. ಬುಡಕಟ್ಟು ಸಮುದಾಯದ ರತನ್ ಲಕ್ರಾ ಅವರ ಸಾವು ಬ್ಯಾಂಕಿನ ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದರು.

ಬುಡಕಟ್ಟು ಸಮುದಾಯದ ರತನ್ ಲಕ್ರಾ ಅವರ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಇ-ಕೆವೈಸಿ ಪೂರ್ಣಗೊಳಿಸಿಲ್ಲ ಎಂದು ಹೇಳಿ ಅವರ ಚಿಕಿತ್ಸೆಗಾಗಿ ಬ್ಯಾಂಕ್ ಹಣ ನೀಡಲು ನಿರಾಕರಿಸಿದೆ. ಜಾರ್ಖಂಡ್ ಗ್ರಾಮೀಣ ಬ್ಯಾಂಕ್ ನಿಂದ ಸಮಯಕ್ಕೆ ಸರಿಯಾಗಿ ಹಣ ಸಿಗದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಮ ಮಂದಿರ ಹುಂಡಿಯ ಹಣ ಕದ್ದು ಗೆಳತಿಗೆ ಐಫೋನ್ ಉಡುಗೊರೆ ಕೊಟ್ಟ ಆರೋಪಿ; ಬಗೆದಷ್ಟು ಹೊರ ಬರುತ್ತಿದೆ ಪಾಪಿಗಳ ಕೃತ್ಯ

ಬರ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಜಾರ್ಖಂಡ್ ಗ್ರಾಮೀಣ ಬ್ಯಾಂಕ್ ನಿಂದ ಸಮಯಕ್ಕೆ ಸರಿಯಾಗಿ ಹಣ ಸಿಗದೇ ಇದ್ದುದರಿಂದ ಬುಡಕಟ್ಟು ಸಮುದಾಯದ ರತನ್ ಲಕ್ರಾ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಗರ್ವಾ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆ ನಡೆಸಲಾಯಿತು. ರತನ್ ಲಕ್ರಾ ಅವರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಸೋಮವಾರ ಬ್ಯಾಂಕಿನ ಮುಂದೆ ಅವರ ಮೃತದೇಹವನ್ನು ಇರಿಸಿ ಧರಣಿ ನಡೆಸಿದರು.

ಬುಡಕಟ್ಟು ಸಮುದಾಯ ಪ್ರಾಬಲ್ಯವಿರುವ ರಾಜ್ಯವಾಗಿರುವ ಜಾರ್ಖಂಡ್ ನಲ್ಲಿ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಇ-ಕೆವೈಸಿ ಪೂರ್ಣಗೊಳ್ಳದ ಕಾರಣ ಬಿಡುಗಡೆ ಮಾಡಲಾಗಿಲ್ಲ. ಇ-ಕೆವೈಸಿ ಪೂರ್ಣಗೊಳಿಸುವ ವೇಳೆಗೆ ಅವರು ಸಾವನ್ನಪ್ಪಿದ್ದಾರೆ ಎಂದು ರೋಗಿಯು ಚಿಕಿತ್ಸೆಯ ಕೊರತೆಯಿಂದಾಗಿ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ಶವದೊಂದಿಗೆ ಜಾರ್ಖಂಡ್ ಗ್ರಾಮೀಣ ಬ್ಯಾಂಕ್‌ಗೆ ಬಂದು ಪ್ರತಿಭಟನೆ ನಡೆಸಿದರು.

ಪ್ರಾದೇಶಿಕ ವ್ಯವಸ್ಥಾಪಕರ ಸೂಚನೆಯ ಮೇರೆಗೆ ಇ-ಕೆವೈಸಿ ಮಾಡಲು ಬ್ಯಾಂಕ್ ಮ್ಯಾನೇಜರ್ ತಮ್ಮನ್ನು ಮೂರು ತಿಂಗಳ ಕಾಲ ಅಲೆದಾಡುವಂತೆ ಮಾಡಿದರು.ಮರಣಶಯ್ಯೆಯಲ್ಲಿದ್ದ ಅಸ್ವಸ್ಥ ವ್ಯಕ್ತಿಯನ್ನು ಇ-ಕೆವೈಸಿಗಾಗಿ ಬ್ಯಾಂಕಿಗೆ ಕರೆದುಕೊಂಡು ಬಂದೆವು. ಇ-ಕೆವೈಸಿ ಪೂರ್ಣಗೊಂಡ ಅನಂತರವೂ ಹಣಕ್ಕಾಗಿ ಅಲೆದಾಡುವಂತೆ ಮಾಡಲಾಯಿತು. ಆದರೆ ಹಣ ಸಿಗಲಿಲ್ಲ. ರತನ್ ಲಕ್ರಾ ಅವರು ಸೋಮವಾರ ನಿಧನರಾದರು.

ಲಕ್ರಾ ಅವರ ಗ್ರಾಮೀಣ ಬ್ಯಾಂಕ್ ಖಾತೆಯಲ್ಲಿ ಸರ್ಕಾರಿ ಪಿಂಚಣಿ ಪಡೆಯುತ್ತಿದ್ದರು. ಹಣ ಅವರ ಖಾತೆಯಲ್ಲಿ ಚಿಕಿತ್ಸೆಗಾಗಿ ಮೀಸಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಾರ್ಖಂಡ್ ಗ್ರಾಮೀಣ ಬ್ಯಾಂಕಿನ ಕ್ಯಾಷಿಯರ್ ವಿಕಾಸ್ ಕುಮಾರ್, ಇ-ಕೆವೈಸಿ ಪೂರ್ಣಗೊಂಡಿತ್ತು. ಆದರೆ ಕುಟುಂಬ ಸದಸ್ಯರು ಹಣವನ್ನು ಹಿಂಪಡೆಯಲು ಬ್ಯಾಂಕಿಗೆ ಬಂದಿಲ್ಲ. ಅದಕ್ಕಾಗಿಯೇ ಯಾವುದೇ ಮೊತ್ತವನ್ನು ನೀಡಲಾಗಿಲ್ಲ. ಈಗ ಅವರು ಶವದೊಂದಿಗೆ ಬ್ಯಾಂಕಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

Bengaluru Murder: ಬಾರ್‌ನಲ್ಲಿ ಜಸ್ಟ್ ಗುರಾಯಿಸಿದ್ದಕ್ಕೆ ಚಾಕು ಇರಿದು ಯುವಕನ ಬರ್ಬರ ಹತ್ಯೆ!

ಖಾತೆಯಲ್ಲಿ ಹಣವಿದೆ. ಆದರೆ ಹಣವನ್ನು ತಡೆ ಹಿಡಿಯಲಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದು, ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author