ಭುವನೇಶ್ವರ, ಮಾ. 12: ದೀರ್ಘಕಾಲದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವೃದ್ಧನೊಬ್ಬ ತನ್ನ ಪತ್ನಿ, ಸೊಸೆ ಮತ್ತು ಮೊಮ್ಮಗಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಒಡಿಶಾದ (Odisha) ದಿಯೋಗಢ ಜಿಲ್ಲೆಯಲ್ಲಿ ನಡೆದಿದೆ (Crime News). ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಈತ ಬುಧವಾರ (ಮಾ. 11) ತಡರಾತ್ರಿ ಇಬ್ಬರು ಮಹಿಳೆಯರು ಮತ್ತು ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆದ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ನಂತರ ಪರಾರಿಯಾಗಿದ್ದಾನೆ.
ಆರೋಪಿಯ ಪುತ್ರ ಮನೆಗೆ ಹಿಂತಿರುಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಆ ಭೀಕರ ದೃಶ್ಯದಿಂದ ಆಘಾತಕ್ಕೊಳಗಾದ ಆತ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ. ಪ್ರಾಥಮಿಕ ತನಿಖೆಯ ಪ್ರಕಾರ, ದೀರ್ಘಕಾಲದ ಕೌಟುಂಬಿಕ ಕಲಹದಿಂದ ಈ ದಾಳಿ ನಡೆದಿದೆ. ಕೋಪದ ಭರದಲ್ಲಿ ರಮೇಶ್ ತನ್ನ ಪತ್ನಿ, ಸೊಸೆ ಮತ್ತು ಮೊಮ್ಮಗಳನ್ನು ಸುತ್ತಿಗೆಯಿಂದ ಹೊಡೆದು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಅಣ್ಣ, ತಂಗಿಯನ್ನೇ ಬರ್ಬರ ಹತ್ಯೆ ಮಾಡಿದ ವ್ಯಕ್ತಿ!
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿತು. ಹೆಚ್ಚಿನ ತನಿಖೆಗಾಗಿ ಪೊಲೀಸರು ನೆರೆಹೊರೆಯವರು ಮತ್ತು ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಘಟನೆಗೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಮಾಹಿತಿ ಪಡೆದ ನಂತರ ನಮ್ಮ ತಂಡ ಸ್ಥಳಕ್ಕೆ ತಲುಪಿದ್ದು, ಕುಟುಂಬದ ಸದಸ್ಯರು ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು ಸುತ್ತಿಗೆಯನ್ನು ಬಳಸಿ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಆಟವಾಡುವ ವೇಳೆ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು
ಅತ್ತೆಯನ್ನು ಹತ್ಯೆ ಮಾಡಿದ ಸೊಸೆ ಆಕೆಯ ಪ್ರಿಯಕರ
ಲಖನೌ: ಸೊಸೆ, ತನ್ನ ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ರಾಯಾ ಪೊಲೀಸ್ ಠಾಣೆ ವ್ಯಾಪ್ತಿಯ ಭಂಕರ್‌ಪುರ್ ಬಸೇಲಾ ಗ್ರಾಮದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಮೃತ ಅನ್ವರಿ ಬೇಗಂ ಅವರ ಮಗ ಅಮೀರ್ ಮತ್ತು ಪತಿ ಅನ್ವರ್ ಕೆಲಸಕ್ಕೆ ಹೋಗಿದ್ದರು. ಮಾರ್ಚ್ 2 ರ ತಡರಾತ್ರಿ, ಸೊಸೆ ಹಿನಾ ನೆರೆಯ ಆದಿಲ್‌ನನ್ನು ಸಂಪರ್ಕಿಸಿದ್ದಾಳೆ. ಈ ಸಮಯದಲ್ಲಿ, ಅತ್ತೆ ಅನ್ವರಿ ಬೇಗಂ ಇಬ್ಬರನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದರು. ತಮ್ಮ ವಿಚಾರ ತಿಳಿದಿದ್ದಕ್ಕೆ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ತೆಯನ್ನು ಕೊಲೆಗೈದಿದ್ದಾರೆ.