ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ಕಚೇರಿಯ ನಕಲಿ ಐಡಿ, ಬಂದೂಕು ಹೊಂದಿದ್ದ ಇಬ್ಬರ ಬಂಧನ; ನರೇಂದ್ರ ಮೋದಿ ಆಗಮನಕ್ಕೂ ಮುನ್ನ ಇವರು ಮುಂಬೈಯ ಮಾಲ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದೇಕೆ?

Fake PMO officer: ಪ್ರಧಾನಮಂತ್ರಿ ಕಚೇರಿಯ ಉದ್ಯೋಗಿ ಎಂದು ಸುಳ್ಳು ಹೇಳಿ, ನಕಲಿ ಗುರುತಿನ ಚೀಟಿ ಬಳಸಿ ಮಹಾರಾಷ್ಟ್ರದ ಮುಂಬೈ ಜಿಯೋ ವರ್ಲ್ಡ್ ಪ್ಲಾಜಾ ಮಾಲ್‌ಗೆ ಪ್ರವೇಶಿಸಲು ಯತ್ನಿಸಿದ ಸ್ಥಳೀಯ ಉದ್ಯಮಿ ಮತ್ತು ಆತನ ಸಶಸ್ತ್ರ ಅಂಗರಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಸುಳ್ಳು ಹೇಳಿ ನಕಲಿ ಗುರುತಿನ ಚೀಟಿಯನ್ನು ಆತ ತೋರಿಸಿದ್ದ.

ಮುಂಬೈಯಲ್ಲಿ ಪಿಎಂಒ ಅಧಿಕಾರಿ ಎಂದು ಸುಳ್ಳು ಹೇಳಿದ ಉದ್ಯಮಿಯ ಬಂಧನ

ಮುಂಬೈ, ಸೆ. 8: ಪ್ರಧಾನಮಂತ್ರಿ ಕಚೇರಿಯ (PMO) ಉದ್ಯೋಗಿ ಎಂದು ಸುಳ್ಳು ಹೇಳಿ, ನಕಲಿ ಗುರುತಿನ ಚೀಟಿ ಬಳಸಿ ಜಿಯೋ ವರ್ಲ್ಡ್ ಪ್ಲಾಜಾ ಮಾಲ್‌ಗೆ ಪ್ರವೇಶಿಸಲು ಯತ್ನಿಸಿದ ಸ್ಥಳೀಯ ಉದ್ಯಮಿ ಮತ್ತು ಆತನ ಸಶಸ್ತ್ರ ಅಂಗರಕ್ಷಕನನ್ನು ಮುಂಬೈ ಪೊಲೀಸರು ಸೋಮವಾರ (ಸೆಪ್ಟೆಂಬರ್‌ 7) ಬಂಧಿಸಿದ್ದಾರೆ. ಬಂಧಿತನನ್ನು ರೋಹನ್ ಪರೇಖ್ ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಎನ್‌ಎಂಎಸಿಸಿಯಲ್ಲಿ ನಡೆಯಲಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗವಹಿಸುವ ಒಂದು ದಿನದ ಮೊದಲು ಈ ಘಟನೆ ನಡೆದಿದೆ.

ಖಾರ್ ಪ್ರದೇಶದಲ್ಲಿ ಡ್ರೋನ್ ವ್ಯವಹಾರ ನಡೆಸುತ್ತಿರುವುದಾಗಿ ತಿಳಿಸಿರುವ ಪರೇಖ್, ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶ ಪಡೆಯಲು ತಾನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಸುಳ್ಳು ಹೇಳಿ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದಾನೆ. ಭದ್ರತಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಆತನ ಗುರುತಿನ ಚೀಟಿ ನಕಲಿ ಎಂಬುದು ಬೆಳಕಿಗೆ ಬಂದಿದೆ.

ಸಂಸತ್ತಿನಲ್ಲಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯ, ಹಸ್ತಲಾಘವ

ಅಂಗರಕ್ಷಕನು ಪರವಾನಗಿ ಪಡೆದ ಬಂದೂಕನ್ನು ಹೊಂದಿದ್ದನೆಂದು ತಿಳಿದುಬಂದ ನಂತರ, ಪರೇಖ್ ಮತ್ತು ಮಾಜಿ ಸೈನಿಕನಾಗಿದ್ದ ಆತನ ಅಂಗರಕ್ಷಕನನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲಾಯಿತು. ಕ್ರೈಂ ಬ್ರಾಂಚ್ (ಅಪರಾಧ ವಿಭಾಗ) ಇವರಿಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದೆ.

ನಂತರ ಆಯುಧದೊಂದಿಗೆ ಅಕ್ರಮವಾಗಿ ಪ್ರವೇಶಿಸುವುದು ಸೇರಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ನಿಯಮಗಳ ಅಡಿಯಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಅಡಿಯಲ್ಲಿ ಬಂಧಿಸಲಾಗಿದೆ. ಬಂಧಿತರಿಬ್ಬರನ್ನೂ ಸೆಪ್ಟೆಂಬರ್ 11ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಸೆಪ್ಟೆಂಬರ್ 11 ರವರೆಗೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಫಿನ್‌ಟೆಕ್ ವೇದಿಕೆ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026 ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ 8ರಂದು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದುಕೊಂಡಿದೆ. ಮೇಲ್ನೋಟಕ್ಕೆ ಮೋದಿ ಭೇಟಿಗೂ, ಬಂಧಿತರ ಅಕ್ರಮ ಪ್ರವೇಶಕ್ಕೂ ಯಾವುದೇ ಸಂಬಂಧವಿಲ್ಲ. ಅದಾಗ್ಯೂ ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.