ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಿಂತಾಮಣಿಯಲ್ಲಿ ನಕಲಿ 'ಫಿನೋಲೆಕ್ಸ್' ಕೇಬಲ್ ಜಾಲ ಪತ್ತೆ: ಪ್ರಖ್ಯಾತ ಕಂಪನಿ ಮ್ಯಾನೇಜರ್‌ನಿಂದಲೇ ದೂರು, ಪೊಲೀಸ್ ದಾಳಿ

ಚಿಂತಾಮಣಿ ನಗರದಲ್ಲಿ ನಡೆಸಿದ ಮಾರುಕಟ್ಟೆ ಸಮೀಕ್ಷೆಯ ವೇಳೆ,ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪವಿರುವ 'ಭರತ್ ಇಂಜಿನಿಯರಿಂಗ್ ವರ್ಕ್ಸ್ ಎಂಬ ಮಳಿಗೆಯಲ್ಲಿ ಫಿನೋಲೆಕ್ಸ್ ಬ್ರ‍್ಯಾಂಡ್ ಹೆಸರಿನ ನಕಲಿ ಸಬ್‌ಮರ್ಸಿಬಲ್ ಎಲೆಕ್ಟ್ರಿಕಲ್ ಕೇಬಲ್‌ಗಳನ್ನು ಉದ್ದೇಶಪೂರ್ವಕವಾಗಿ ಮಾರಾಟ ಮತ್ತು ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನಗರದ ಬಸ್ ನಿಲ್ದಾಣದ ಬಳಿ ಖ್ಯಾತ ವಿದ್ಯುತ್ ಉಪಕರಣಗಳ ತಯಾರಿಕಾ ಸಂಸ್ಥೆಯಾದ 'ಫಿನೋಲೆಕ್ಸ್' ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವಿದ್ಯುತ್ ಕೇಬಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊAದರ ಮೇಲೆ ಚಿಂತಾಮಣಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಚಿಂತಾಮಣಿ : ನಗರದ ಬಸ್ ನಿಲ್ದಾಣದ ಬಳಿ ಖ್ಯಾತ ವಿದ್ಯುತ್ ಉಪಕರಣಗಳ ತಯಾರಿಕಾ ಸಂಸ್ಥೆಯಾದ 'ಫಿನೋಲೆಕ್ಸ್' ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವಿದ್ಯುತ್ ಕೇಬಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಚಿಂತಾಮಣಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಫಿನೋಲೆಕ್ಸ್ ಕೇಬಲ್ಸ್ ಲಿಮಿಟೆಡ್ ಕಂಪನಿಯ ಬೌದ್ಧಿಕ ಆಸ್ತಿ ಹಕ್ಕುಗಳ ಐಪಿಆರ್ ವ್ಯವಸ್ಥಾಪಕ ಕಟಾರಂ ದುಬ್ಬರಾಜು ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಚಿಂತಾಮಣಿ ನಗರದಲ್ಲಿ ನಡೆಸಿದ ಮಾರುಕಟ್ಟೆ ಸಮೀಕ್ಷೆಯ ವೇಳೆ,ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪವಿರುವ 'ಭರತ್ ಇಂಜಿನಿಯರಿAಗ್ ವರ್ಕ್ಸ್ ಎಂಬ ಮಳಿಗೆಯಲ್ಲಿ ಫಿನೋಲೆಕ್ಸ್ ಬ್ರ‍್ಯಾಂಡ್ ಹೆಸರಿನ ನಕಲಿ ಸಬ್‌ಮರ್ಸಿಬಲ್ ಎಲೆಕ್ಟ್ರಿಕಲ್ ಕೇಬಲ್‌ಗಳನ್ನು ಉದ್ದೇಶಪೂರ್ವಕವಾಗಿ ಮಾರಾಟ ಮತ್ತು ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Chinthamani Crime: ಗುರುಭವನದ ಬಳಿ ಯುವಕನ ಮೇಲೆ ಹಲ್ಲೆ: ಹಣಕ್ಕಾಗಿ ಬೆದರಿಕೆ, ಇಬ್ಬರು ವಶಕ್ಕೆ

ಫಿನೋಲೆಕ್ಸ್ ಕಂಪನಿಯು ತನ್ನ ಗುಣಮಟ್ಟದ ಉತ್ಪನ್ನಗಳಿಂದಾಗಿ ದೇಶ-ವಿದೇಶಗಳಲ್ಲಿ ಉತ್ತಮ ಹೆಸರು ಗಳಿಸಿದೆ.ಕಂಪನಿಯ ಪ್ಯಾಕೇಜಿಂಗ್, ಬಣ್ಣದ ವಿನ್ಯಾಸ ಮತ್ತು ಟ್ರೇಡ್ ಮಾರ್ಕ್ ಬಳಕೆಗೆ ಸಂಬಂಧಿಸಿದಂತೆ 1957ರ ಹಕ್ಕುಸ್ವಾಮ್ಯ ಕಾಯ್ದೆ ಅಡಿಯಲ್ಲಿ ಕಂಪನಿಯು ವಿಶೇಷ ಹಕ್ಕುಗಳನ್ನು ಹೊಂದಿದೆ.ಆದರೆ,ಸದರಿ ಅಂಗಡಿಯು ನಕಲಿ ಕೇಬಲ್ ಮಾರಾಟ ಮಾಡುವ ಮೂಲಕ ಸಾರ್ವ ಜನಿಕರಿಗೆ ವಂಚಿಸುತ್ತಿರುವುದಲ್ಲದೆ,ಕAಪನಿಯ ಬೌದ್ಧಿಕ ಆಸ್ತಿಯನ್ನು ಕಾನೂನುಬಾಹಿರವಾಗಿ ಬಳಸಿಕೊಂಡು ವಂಚನೆ ಎಸಗಿದೆ ಎಂದು ದೂರುದಾರರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ನಕಲಿ ದಂಧೆಯಿAದಾಗಿ ಸಾರ್ವಜನಿಕರಿಗೆ ಹಾಗೂ ಕಂಪನಿಗೆ ಭಾರಿ ಆರ್ಥಿಕ ನಷ್ಟ ಉಂಟಾ ಗುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಬಗ್ಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.