#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Digital Arrest: 5 ದಿನ ಡಿಜಿಟಲ್‌ ಅರೆಸ್ಟ್:‌ 1 ಕೋಟಿ ರುಪಾಯಿ ವಂಚಿಸಿದ ಸೈಬರ್‌ ಕಳ್ಳರು!

ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಒಂದೇ ಕುಟುಂಬದ ಮೂವರನ್ನು ಐದು ದಿನಗಳ ಕಾಲ 'ಡಿಜಿಟಲ್‌ ಬಂಧನ'ದಲ್ಲಿ ಇರಿಸಿದ ಅಪರಿಚಿತರು, ಬರೋಬ್ಬರಿ 1 ಕೋಟಿ ರುಪಾಯಿ ವಂಚಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿಟಲ್‌ ಅರೆಸ್ಟ್:‌ 1 ಕೋಟಿ ರುಪಾಯಿ ವಂಚಿಸಿದ ಸೈಬರ್‌ ಖದೀಮರು

Digital Arrest

Profile Deekshith Nair Feb 11, 2025 4:44 PM

ಲಖನೌ: ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌(Digital Arrest) ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಸೈಬರ್‌ ಖದೀಮರ(Cyber Scam) ವಂಚನೆಗೆ ಬಲಿಯಾಗುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಒಂದೇ ಕುಟುಂಬದ ಮೂವರನ್ನು ಐದು ದಿನಗಳ ಕಾಲ 'ಡಿಜಿಟಲ್‌ ಬಂಧನ'ದಲ್ಲಿ ಇರಿಸಿದ ಸೈಬರ್ ಕಳ್ಳರು ಬರೋಬ್ಬರಿ 1 ಕೋಟಿ ರುಪಾಯಿ ವಂಚಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ(Uttar Pradesh) ನೋಯ್ಡಾದಲ್ಲಿ(Noida) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರುವರಿ 1ರಂದು ಅಪರಿಚಿತ ಸಂಖ್ಯೆಯಿಂದ ವಿಡಿಯೊ ಕರೆ ಬಂದಿದ್ದು, ನಿ‌ಮ್ಮ ವಿರುದ್ಧ ಮುಂಬೈನ ಅಪರಾಧ ವಿಭಾಗದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಮಾರು 24 ಕಡೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ದೂರುದಾರ ಚಂದ್ರಭನ್ ಪಾಲಿವಾಲ್ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ನಿಮ್ಮ ವಿರುದ್ಧ ತನಿಖೆ ನಡೆಸುತ್ತಿದ್ದಾರೆ ಎಂದು ಕರೆ ಮಾಡಿದ ಅಪರಿಚಿತರು ಹೇಳಿದ್ದು, ಹಣ ಪಾವತಿಸದಿದ್ದಲ್ಲಿ ಬಂಧಿಸಲಾಗುತ್ತದೆ ಎಂದು ಸೈಬರ್‌ ವಂಚಕರು ಚಂದ್ರಭನ್‌ಗೆ ಬೆದರಿಕೆಯೊಡ್ಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.



ಅಪರಿಚಿತ ಕರೆ ಸ್ವೀಕರಿಸಿದ ಬಳಿಕ ಚಂದ್ರಭನ್ ಸೇರಿ ಅವರ ಪತ್ನಿ ಮತ್ತು ಮಗಳನ್ನು ಸುಮಾರು ಐದು ದಿನಗಳ ಕಾಲ ಡಿಜಿಟನ್‌ ಬಂಧನದಲ್ಲಿ ಇರಿಸಿ, ₹1.1 ಕೋಟಿ ರುಪಾಯಿ ಹಣವನ್ನು ವಂಚಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತೆ (ಸೈಬರ್ ಅಪರಾಧ ವಿಭಾಗ) ಪ್ರೀತಿ ಯಾದವ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Digital Arrest : ಎರಡು ಗಂಟೆಗಳ ಡಿಜಿಟಲ್‌ ಅರೆಸ್ಟ್‌... ಮಾಜಿ ಮಿಸ್‌ ಇಂಡಿಯಾ ವಿಜೇತೆಗೆ 99 ಸಾವಿರ ರೂ. ಪಂಗನಾಮ!

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಿನ್ಸಿಪಾಲರಿಂದ 15 ಲಕ್ಷ ರುಪಾಯಿ ವಂಚಿಸಿದ ಸೈಬರ್‌ ಕಳ್ಳರು

ಒಂದು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಪ್ರತಿಷ್ಠಿತ ಕಾಡಸಿದ್ದೇಶ್ವರ ಆರ್ಟ್ಸ ಕಾಲೇಜ್ ಪ್ರಿನ್ಸಿಪಾಲ್​ ಆಗಿರುವ ನಿರ್ಮಲಾ ಸೋಮನ ಗೌಡ ಪಾಟೀಲ್​​ ಅವರು ಸೈಬರ್ ವಂಚಕರ ಬಲೆಗೆ ಬಿದ್ದು, ಹೆಚ್ಚು ಕಡಿಮೆ 15 ಲಕ್ಷ ರೂ. ಹಣ ಕಳೆದುಕೊಂಡಿದ್ದರು. ನಕಲಿ ಪೊಲೀಸ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂ. ಹಣವನ್ನು ಸೈಬರ್‌ ಖದೀಮರು ವಂಚಿಸಿದ್ದರು.