ಕಾನ್ಪುರ, ಏ.19: 48 ವರ್ಷದ ವ್ಯಕ್ತಿಯೊಬ್ಬ ತನ್ನ 11 ವರ್ಷದ ಅವಳಿ ಹೆಣ್ಣುಮಕ್ಕಳನ್ನು ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ. ಆರೋಪಿಯನ್ನು ಶಶಿ ರಂಜನ್ ಮಿಶ್ರಾ ಎಂದು (Crime News). ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಮಿಶ್ರಾ ಪೊಲೀಸರಿಗೆ ಕರೆ ಮಾಡಿ ತನ್ನ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.
ಬಿಹಾರದ ನಿವಾಸಿಯಾಗಿದ್ದ ಆರೋಪಿಯು, ತನ್ನ ಪತ್ನಿ ರೇಷ್ಮಾ, ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಹಾಗೂ ಆರು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ. ಅವನು ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸುತ್ತಿದ್ದ. ಅವಳು ತನ್ನ ಮಗನೊಂದಿಗೆ ವಾಸಿಸಬೇಕು, ಇಬ್ಬರು ಹೆಣ್ಣುಮಕ್ಕಳನ್ನು ತಾನೇ ನೋಡಿಕೊಳ್ಳುತ್ತೇನೆ ಎಂದು ಆಗಾಗ ಹೇಳುತ್ತಿದ್ದ.
ಶಶಿ ಖಿನ್ನತೆಯಿಂದ ಬಳಲುತ್ತಿದ್ದು, ಮನೆಯೊಳಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದ ಎಂದು ರೇಷ್ಮಾ ಹೇಳಿದ್ದಾರೆ. ಶಶಿ ತನ್ನನ್ನು ತಮ್ಮ ಹೆಣ್ಣುಮಕ್ಕಳ ಕೋಣೆಗೆ ಪ್ರವೇಶಿಸಲು ಬಿಡುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ಪೊಲೀಸರು
ಶನಿವಾರ (ಏ.18) ಊಟ ಮಾಡಿದ ನಂತರ ಆರೋಪಿ ಶಶಿ ಮಕ್ಕಳನ್ನು ಮಲಗಿಸಲು ಕೋಣೆಗೆ ಕರೆದುಕೊಂಡು ಹೋಗಿದ್ದ ಎಂದು ಅವರು ಹೇಳಿದರು. ಬೆಳಗಿನ ಜಾವ 2:30ರ ಸುಮಾರಿಗೆ ಅವನು ಒಬ್ಬ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ನಂತರ ಅವರು ಕೋಣೆಗೆ ಹಿಂತಿರುಗಿದರು. ಲೈಟ್‌ಗಳನ್ನು ಆಫ್ ಮಾಡಲಾಯಿತು ಎಂದು ಅವರು ಹೇಳಿದರು.
ಜೈಲಿನಿಂದ ತಪ್ಪಿಸಿಕೊಂಡಿದ್ದ ಮಾವೋವಾದಿ ಸೇರಿದಂತೆ ನಾಲ್ವರ ಎನ್‌ಕೌಂಟರ್
ಇದಾದ ಎರಡು ಗಂಟೆಗಳ ನಂತರ, ಪೊಲೀಸರಿಗೆ ಕರೆ ಮಾಡಿದ ಆರೋಪಿಯು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾನೆ. ಮನೆಗೆ ತಲುಪಿದಾಗ, ಇಬ್ಬರೂ ಬಾಲಕಿಯರು ಗಂಟಲು ಸೀಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಪೊಲೀಸರು ಕಂಡು ಆಘಾತಗೊಂಡಿದ್ದಾರೆ. ಆರೋಪಿ ಶಶಿ ಕೋಣೆಯೊಳಗೆ ಕುಳಿತಿದ್ದ ಎನ್ನಲಾಗಿದೆ.
ಪಶ್ಚಿಮ ಬಂಗಾಳ ಮೂಲದ ರೇಷ್ಮಾ, ಕಾನ್ಪುರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶಶಿಯನ್ನು ಭೇಟಿಯಾದರು. ಅವರು 2014 ರಲ್ಲಿ ವಿವಾಹವಾದರು. ಮೂವರು ಮಕ್ಕಳ ಸುಖೀ ದಾಂಪತ್ಯವಾಗಬೇಕಿದ್ದ ಕುಟುಂಬಕ್ಕೆ ಇದೀಗ ಆಘಾತ ತಂದಿದೆ. ತಂದೆಯೇ ತನ್ನಿಬ್ಬರು ಮಕ್ಕಳನ್ನು ಕೊಂದಿರುವುದು ತಾಯಿ ರೇಷ್ಮಾಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಆಕೆಯ ರೋದನ ಮುಗಿಲುಮುಟ್ಟಿದೆ.
ಇನ್ನು ಪ್ರಕರಣ ಸಂಬಂಧ ಆರೋಪಿ ತಂದೆಯನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ದೀಪೇಂದ್ರ ನಾಥ್ ಚೌಧರಿ ತಿಳಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.