Honeymoon Murder Case: ತೆರೆ ಮೇಲೆ ಬರುತ್ತಾ ಮೇಘಾಲಯ ಹನಿಮೂನ್ ಕೊಲೆ ಪ್ರಕರಣ? ರಾಜಾ ರಘುವಂಶಿ ಕುಟುಂಬ ಹೇಳೋದೇನು?
ಇದೇ ವರ್ಷದ ಜನವರಿಯಂದು ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಹತ್ಯೆಯಾಗಿತ್ತು. ತನಿಖೆ ವೇಳೆ ಆತನ ಪತ್ನಿ ಸೋನಮ್ ಮತ್ತು ಆಕೆಯ ಪ್ರೇಮಿ ಸೇರಿಕೊಂಡು ಈ ಕೊಲೆ ಮಾಡಿದ್ದು ತಿಳಿದುಬಂದಿದೆ. ಇದೀಗ ಕ್ರೈಂ ಸಸ್ಪೆಕ್ಟ್ ಥ್ರಿಲ್ಲಿಂಗ್ ಆಗಿರುವ ನೈಜ ಕಥೆಯೇ ಸಿನಿಮಾ ಮೂಲಕ ತೆರೆ ತರಲು ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ


ನವದೆಹಲಿ: ಮೇಘಾಲಯ ಹನಿಮೂನ್ ನಲ್ಲಿ ಪತ್ನಿಯಿಂದಲೇ ಹತ್ಯೆಗೊಳಗಾದ ಪತಿ ರಾಜಾ ರಘುವಂಶಿ (Raja Raghuvanshi) ಪ್ರಕರಣವು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಮರ್ಡರ್ ಸಿನಿ ಮೀಯ ರೀತಿಯಲ್ಲಿದ್ದು ಇದನ್ನೇ ತೆರೆ ಮೇಲೆ ತರಲು ನಿರ್ದೇಶಕ ಎಸ್.ಪಿ. ನಿಂಬವತ್ ಅವರು ಮುಂದಾಗಿದ್ದಾರೆ. ಈ ಸಿನಿಮಾ ಮಾಡಲು ರಾಜಾ ರಘುವಂಶಿ ಅವರ ಕುಟುಂಬದ ಅನುಮತಿ ಅಗತ್ಯ ವಾಗಿತ್ತು ಹೀಗಾಗಿ ರಘುವಂಶಿ ಸಹೋದರನ ಬಳಿ ನಿರ್ದೇಶಕ ಎಸ್‌ಪಿ ನಿಂಬವತ್ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಅವರ ಕುಟುಂಬವು ಸಿನಿಮಾ ಮಾಡಲು ಒಪ್ಪಿಗೆ ಕೂಡ ನೀಡಿದ್ದರಂತೆ. ಈಗಾಗಲೇ ಸಿನಿಮಾ ಹೆಸರು ಇತರ ಪ್ರೊಡಕ್ಷನ್ ಹಂತದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಬಹುತೇಕ ಶೂಟಿಂಗ್ ಇಂದೋರ್ ನಲ್ಲಿ ನಡೆಯುದಾಗಿ ಚಿತ್ರತಂಡ ತಿಳಿಸಿದೆ.
ಇದೇ ವರ್ಷದ ಜನವರಿಯಂದು ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿದ್ದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಹತ್ಯೆಯಾಗಿತ್ತು. ತನಿಖೆ ವೇಳೆ ಆತನ ಪತ್ನಿ ಸೋನಮ್ ಮತ್ತು ಆಕೆಯ ಪ್ರೇಮಿ ಸೇರಿಕೊಂಡು ಈ ಕೊಲೆ ಮಾಡಿದ್ದು ತಿಳಿದುಬಂದಿದೆ. ಇದೀಗ ಕ್ರೈಂ ಸಸ್ಪೆಕ್ಟ್ ಥ್ರಿಲ್ಲಿಂಗ್ ಆಗಿರುವ ನೈಜ ಕಥೆಯೇ ಸಿನಿಮಾ ಮೂಲಕ ತೆರೆ ತರಲು ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದರ ಕುರಿತು ಸ್ವತಃ ರಾಜಾ ಅವರ ಸಹೋದರ ಸಚಿನ್ ಅವರೇ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ರಾಜಾ ಅವರ ಸಹೋದರ ಸಚಿನ್ ಅವರು ಈ ಬಗ್ಗೆ ಮಾತನಾಡಿ, ನನ್ನ ಸಹೋದರನ ಕೊಲೆ ಪ್ರಕರಣವನ್ನೇ ಆಧರಿಸಿ ಸಿನಿಮಾ ಮಾಡಲು ಚಿತ್ರತಂಡಕ್ಕೆ ನಾವೆಲ್ಲರೂ ಒಪ್ಪಿಗೆಯನ್ನು ಸೂಚಿಸಿ ದ್ದೇವೆ. ಇದನ್ನು ತೆರೆ ಮೇಲೆ ತಂದ ಮೇಲಾದರು ಜನರಿಗೆ ಯಾರದ್ದು ಸರಿ, ಯಾರದ್ದು ತಪ್ಪು ಎಂದು ತಿಳಿಯಲಿದೆ. ಇನ್ನು ಮುಂದಾದರೂ ಜನರು ಮದುವೆ ವಿಚಾರದಲ್ಲಿ ಸರಿಯಾಗಿ ಯೋಚಿಸಿ ಮುನ್ನಡೆಯಬೇಕು, ಕ್ಷುಲಕ ಕಾರಣಕ್ಕೆ ಹತ್ಯೆ ಮಾಡುವ ಮನಸ್ಥಿತಿ ದೂರಾಗಬೇಕು ಎಂದು ಅವರು ತಿಳಿಸಿದ್ದಾರೆ.
ನಿರ್ದೇಶಕ ನಿಂಬವತ್ ಕೂಡ ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ರಾಜಾ ರಘುವಂಶಿ ಅವರು ಅಮಾಯಕರು, ಆದರೆ ಅವರಿಗೆ ದ್ರೋಹ ಮಾಡಲಾಗಿದೆ. ನಮ್ಮ ಸಿನಿಮಾದ ಮೂಲಕ ಅಂತಹ ನಂಬಿಕೆ ದ್ರೋಹ, ಮೋಸವನ್ನು ನಿಲ್ಲಿಸಬೇಕು ಎಂಬ ಸಂದೇಶವನ್ನು ನಾವು ಸಾರ್ವಜನಿ ಕರಿಗೆ ನೀಡಲು ಬಯಸುತ್ತೇವೆ. ಈ ಸಿನಿಮಾದ ಚಿತ್ರೀಕರಣವೂ ಶೇ 80 ರಷ್ಟು ಇಂದೋರ್ ನಲ್ಲಿ ಹಾಗೂ ಉಳಿದ ಶೇ. 20 ರಷ್ಟು ಮೇಘಾಲಯದ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಹನಿಮೂನ್ ಇನ್ ಶಿಲ್ಲಾಂಗ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಚಿತ್ರವನ್ನು ಎಸ್‌ಪಿ ನಿಂಬವತ್ ಅವರು ನಿರ್ದೇಶಿಸುತ್ತಿದ್ದಾರೆ. ರಾಜಾ ರಘುವಂಶಿ ಅವರ ಸಾವಿಗೆ ಕಾರಣವಾಗುವ ಘಟನೆಗಳು, ಪೊಲೀಸ್ ತನಿಖೆ, ಬಳಿಕ ಅಪರಾಧಿಗಳ ಬಂಧನ ಇತರ ವಿಚಾರಗಳ ಮೇಲೆ ಕಥೆ ಕೇಂದ್ರೀಕರಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ.