ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾಗೆ ಹಿಂಸೆ ಕೊಟ್ಟ ಕನ್ನಿಕಾ-ಮೀನಾಕ್ಷಿಯ ಮೈಚಳಿ ಬಿಡಿಸಿದ ಆದೀಶ್ವರ್

ಮದುವೆಯಾಗಿ ಬಂದ ಮೊದಲ ದಿನವೇ ಪೂಜಾಗೆ ಕನ್ನಿಕಾ-ಮೀನಾಕ್ಷಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಮೀನಾಕ್ಷಿ-ಕನ್ನಿಕಾ ಇದು ನಮ್ಮ ರಾಮ್​ದಾಸ್ ಮನೆಯ ಶಾಸ್ತ್ರ ಎಂದು ಹೇಳಿ ಪೂಜಾಳ ಕೈಯಿಂದ ಇಲ್ಲಸಲ್ಲದ ಕೆಲಸ ಮಾಡಿಸಿದ್ದಾರೆ. ಆದರೆ, ಈ ವಿಚಾರ ಕೊನೆಗೂ ಆದೀಶ್ವರ್ ಕಾಮತ್ಗೆ ಗೊತ್ತಾಗಿದ್ದು, ಮೀನಾಕ್ಷಿ-ಕನ್ನಿಕಾರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲಾಗಿದೆ.

ಪೂಜಾಗೆ ಹಿಂಸೆ ಕೊಟ್ಟ ಕನ್ನಿಕಾ-ಮೀನಾಕ್ಷಿಯ ಮೈಚಳಿ ಬಿಡಿಸಿದ ಆದೀಶ್ವರ್

Bhagya Lakshmi Serial

Profile Vinay Bhat Jul 31, 2025 11:52 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ರಾಮ್​ದಾಸ್ ಮನೆಗೆ ಸೊಸೆಯಾಗಿ ಕಾಲಿಟ್ಟಾಗಿನಿಂದ ಆಕೆಗೆ ಮೀನಾಕ್ಷಿ ಹಾಗೂ ಕನ್ನಿಕಾ ಬೆಂಬಿಡದೆ ತೊಂದರೆ ಕೊಡುತ್ತಿದ್ದಾಳೆ. ಮೊದಲಿಗೆ ಈ ಮದುವೆ ನಿಲ್ಲಿಸಲು ಇವರಿಬ್ಬರು ಸಾಕಷ್ಟು ಪ್ರಯತ್ನ ನಡೆಸಿದರು.. ಇದು ಸಾಧ್ಯವಾಗದೇ ಇದ್ದಾಗ ಮನೆಗೆ ಬರಲಿ.. ಆಮೇಲೆ ಅವಳೇ ಈ ಮನೆ ಬಿಟ್ಟು ಓಡಿ ಹೋಗುವ ಹಾಗೆ ಮಾಡೋಣ ಎಂದು ಸುಮ್ಮನಾಗಿದ್ದರು. ಅದರಂತೆ ಮದುವೆಯಾಗಿ ಬಂದ ಮೊದಲ ದಿನವೇ ಪೂಜಾಗೆ ಇವರು ಚಿತ್ರಹಿಂಸೆ ನೀಡುತ್ತಿದ್ದಾರೆ. ಆದರೆ, ಈ ವಿಚಾರ ಕೊನೆಗೂ ಆದೀಶ್ವರ್ ಕಾಮತ್​ಗೆ ಗೊತ್ತಾಗಿದ್ದು, ಮೀನಾಕ್ಷಿ-ಕನ್ನಿಕಾರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲಾಗಿದೆ.

ಮೀನಾಕ್ಷಿ-ಕನ್ನಿಕಾ ಇದು ನಮ್ಮ ರಾಮ್​ದಾಸ್ ಮನೆಯ ಶಾಸ್ತ್ರ ಎಂದು ಹೇಳಿ ಪೂಜಾಳ ಕೈಯಿಂದ ಇಲ್ಲಸಲ್ಲದ ಕೆಲಸ ಮಾಡಿಸಿದ್ದಾರೆ. ಬೆಳಗ್ಗೆ ಬೇಗ ತಿಂಡಿ ಒಲೆಯಲ್ಲೇ ಆಗಬೇಕು ಎಂದು ಹೇಳಿ ಮೀನಾಕ್ಷಿ ಒದ್ದೆಯಾದ ಸೌದೆ ತಂದುಕೊಟ್ಟಿದ್ದಳು. ಅಲ್ಲದೆ ಸ್ಥಾನ ಮಾಡಿ ಇದನ್ನೆಲ್ಲ ಶುರುಮಾಡಬೇಕು ಎಂದು ಕನ್ನಿಕಾ ಒಂದು ಬಕೆಟ್ ತಣ್ಣೀರು ತಂದು ಪೂಜಾಳ ತಲೆ ಮೇಲೆ ಸುರಿದಳು. ಇದರಿಂದ ಪೂಜಾಗೆ ಜೋರು ಜ್ವರ ಬಂದಿದೆ. ಆದರೆ, ಇದನ್ನೂ ಲೆಕ್ಕಿಸದ ಕನ್ನಿಕಾ, ನಿನಗೆ ಜ್ವರ ಕಡಿಮೆ ಆಗಿದೆ ಎಂದು ಕರೆದು ಗಾರ್ಡನ್ ಕೆಲಸ ಮಾಡಲು ಹೇಳಿದ್ದಾಳೆ.

ಜ್ವರ ಹಾಗೂ ಚಳಿಯ ಮಧ್ಯೆ ಪೂಜಾ ಈ ಕೆಲಸ ಮಾಡುತ್ತಿರುವಾಗ ಆದೀಶ್ವರ್ ಕಾಮತ್​ನ ಕಾಲ್ ಬರುತ್ತದೆ. ಆದರೆ, ಪೂಜಾಳಿಗೆ ಆ ಕಾಲ್ ರಿಸಿವ್ ಮಾಡಲು ಕನ್ನಿಕಾ ಬಿಡುವುದಿಲ್ಲ. ನಿನ್ಗೆ ಹುಷಾರಿಲ್ಲ ಅಂತ ಆದೀಗೆ ಗೊತ್ತಾದ್ರೆ ಅವನು ಟೆನ್ಶನ್ ಮಾಡ್ತಾನೆ ಎಂದು ಪೂಜಾಗೆ ಹೇಳಿ ಆಕೆಯೇ ಕಾಲ್ ರಿಸಿವ್ ಮಾಡುತ್ತಾಳೆ. ಪೂಜಾ ರೆಸ್ಟ್ ಮಾಡ್ತಾ ಇದ್ದಾಳೆ.. ಪಾಪಾ ನಿನ್ನೆ ಎಲ್ಲ ಕೆಲಸ ಮಾಡಿ ಸುಸ್ತಾಗಿ ಇರುತ್ತಾಳೆ ಅಂತ ನಾನೇ ರೆಸ್ಟ್ ಮಾಡು ಅಂತ ಹೇಳಿದೆ ಎಂದು ಸುಳ್ಳು ಹೇಳಿದ್ದಾಳೆ.

ಜ್ವರದ ಮಧ್ಯೆ ಕೆಲಸ ಮಾಡಿ ಮಾಡಿ ರೂಮ್​ಗೆ ರೆಸ್ಟ್ ಮಾಡೋಣ ಅಂತ ಹೊರಾಟಗ ಪೂಜಾ ಮನೆಯ ಹಾಲ್​ನಲ್ಲಿ ತಲೆ ತಿರುಗಿ ಬೀಳುತ್ತಾಳೆ. ಅದೇವೇಳೆ ಮನೆಗೆ ಬಂದ ಆದೀಶ್ವರ್ ಪೂಜಾಳನ್ನು ಎತ್ತಿ ಮುಖಕಕ್ಕೆ ನೀರು ಹಾಕಿ ಸೋಫಾ ಮೇಲೆ ಕೂರಿಸುತ್ತಾನೆ. ಆಗ ಮನೆಯವರೆಲ್ಲ ಬರುತ್ತಾರೆ. ಇಷ್ಟೊಂದು ಜ್ವರ ಇದೆ ಏನು ಮಾಡ್ತಾ ಇದ್ರಿ ನೀವೆಲ್ಲ ಎಂದು ಆದೀ ಜೋರು ಮಾಡುತ್ತಾನೆ. ಆಗ ರಾಮ್​ದಾಸ್, ಜ್ವರ ಬೆಳಗ್ಗಿನಿಂದಲೇ ಇದೆ.. ನಾನು ಆಗಲೇ ಹೇಳಿದ್ನಲ್ಲ ಮೀನಾಕ್ಷಿ ಹತ್ರ ಡಾಕ್ಕಟರ್ ಬಳಿ ಹೇಳಿ ಅಂತ ಅವ್ರು ಯಾಕೆ ಇನ್ನೂ ಬಂದಿಲ್ಲ ಎಂದು ಕೇಳುತ್ತಾರೆ. ಅಸಲಿಗೆ ಇಲ್ಲಿ ಮೀನಾಕ್ಷಿ ವೈದ್ಯರ ಬಳಿ ಹೇಳಿಯೇ ಇರುವುದಿಲ್ಲ.

ಪೂಜಾಗೆ ಬೆಳಗ್ಗೆಯಿಂದಲೇ ಜ್ವರ ಇರುವ ವಿಷಯ ಆದೀಗೆ ಗೊತ್ತೇ ಇರುವುದಿಲ್ಲ.. ಇದನ್ನು ಯಾಕೆ ಹೇಳಿಲ್ಲ ಅಂತ ಕನ್ನಿಕಾಳನ್ನು ಜೋರು ಮಾಡಿ ಕೇಳುತ್ತಾನೆ. ಅವಳು ಮತ್ತೊಂದು ಸುಳ್ಳು ಹೇಳಿ, ಪೂಜಾನೇ ಹೇಳೋದು ಬೇಡ ಅಂತ ಹೇಳಿದ್ಳು ಎನ್ನುತ್ತಾಳೆ. ಆದೀ ತಕ್ಷಣ ಡಾಕ್ಟರ್​ಗೆ ಕಾಲ್ ಮಾಡಿ ಬರೋಕೆ ಹೇಳಿದ್ದಾನೆ. ಡಾಕ್ಟರ್ ಬಂದೊಡನೆ ಜ್ವರ ತುಂಬಾ ಜೋರಿದೆ.. ಇವಾಗ ಬರೋಕೆ ಹೇಳೋದ.. ತುಂಬಾ ಕೆಲಸ ಮಾಡಿದ್ದಾರೆ ಅದಕ್ಕೆ ಇಷ್ಟೊಂದು ಜೋರಾಗಿರುವುದು ಎಂದು ಹೇಳುತ್ತಾರೆ.



ಇದು ಆದೀಗೆ ಕೆರಳಿಸಿದೆ. ಪೂಜಾ ಏನು ಕೆಲಸ ಮಾಡಿದೆ ಇವತ್ತು ಅಂತ ಆದೀ ಕೇಳಿದ್ದಾನೆ. ಆಗ ಪೂಜಾ ಎಲ್ಲ ಸತ್ಯವನ್ನು ಹೇಳಿದ್ದಾಳೆ. ಕನ್ನಿಕಾ ತಲೆ ಮೇಲೆ ತಣ್ಣೀರು ಎರೆದಿರುವುದು, ಗಾರ್ಡನ್ ಕೆಲಸ ಮಾಡಿರುವುದು, ಕಿಚನ್ ಕೆಲಸ ಮಾಡಿಸಿರುವುದು ಎಲ್ಲ ಹೇಳಿದ್ದಾಳೆ. ಇದು ಆದೀಗೆ ಕೋಪ ತರಿಸಿದೆ. ಪೂಜಾನ ನೀವು ಏನು ಅಂತ ಅಂದುಕೊಂಡಿದ್ದೀರಾ?, ಅವಳಿಗೆ ಜ್ವರ ಇದ್ದು ಇಷ್ಟೊಂದು ಕೆಲಸ ಮಾಡಿಸಿದ್ದೀರಾ, ಶಾಸ್ತ್ರ ಎಲ್ಲ ಈ ಟೈಮ್​ನಲ್ಲಿ ಬೇಕಾ?, ಆರೋಗ್ಯ ಮುಖ್ಯ ಆರೋಗ್ಯದ ಮುಂದೆ ಯಾವ ಶಾಸ್ತ್ರನೂ ಇಲ್ಲ.. ಕನ್ನಿಕಾ ನೀನು ಈ ಮನೆಗೆ ಹೇಗೋ ಹಾಗೆ ಪೂಜಾ ಕೂಡ.. ಇವಳು ಈ ಮನೆಯ ಕೆಲಸದವಳಲ್ಲ.. ಮನೆ ಯಜಮಾನಿ ಎಂದು ಹೇಳಿದ್ದಾನೆ.

ಸದ್ಯ ಆದೀಶ್ವರ್ ತನ್ನ ಮಾತಿನ ಮೂಲಕ ಕನ್ನಿಕಾ-ಮೀನಾಕ್ಷಿಗೆ ಸರಿಯಾಗಿ ಏಟು ಕೊಟ್ಟಿದ್ದಾನೆ.. ಇನ್ನದಾರು ಇವರು ಬದಲಾಗುತ್ತಾರ ಅಥವಾ ಇದೇ ಚಾಳಿ ಮುಂದುವರೆಸುತ್ತಾರ ನೋಡಬೇಕು. ಇನ್ನು ಪೂಜಾಗೆ ಹಿಂಸೆ ಕೊಟ್ಟ ವಿಚಾರ ಭಾಗ್ಯಾಗೆ ಗೊತ್ತಾಗುತ್ತ, ಗೊತ್ತಾದ್ರೆ ಆಕೆ ಇನ್ನೇನು ಮಾಡುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.

Bhavya Gowda: ಮಾಲ್​ನಲ್ಲಿ ಕೆಂಪು ಗುಲಾಬಿ ಹಿಡಿದು ಕಾಯುತ್ತಿರುವ ಭವ್ಯಾ ಗೌಡ