ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MBBS Student Death: ಎಂಬಿಬಿಎಸ್ ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿ ನೇಣಿಗೆ ಶರಣು

ಮೃತ ದುರ್ದೈವಿ ಹೇಮಂತ್ ತಾಲೂಕಿನ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ಎನ್ನಲಾಗಿದೆ. ಈತನ ತಾಯಿ ವೈದ್ಯರಾಗಿದ್ದು ಅವರ ಜೊತೆ ವಿಯಟ್ನಾಂ ದೇಶದ ಪ್ರವಾಸ ಮುಗಿಸಿ ಮನೆಗೆ ಬುಧವಾರವೇ ಮನೆಗೆ  ಬಂದಿದ್ದ ಎನ್ನಲಾಗಿದೆ.

ಎಂಬಿಬಿಎಸ್ ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿ ನೇಣಿಗೆ ಶರಣು

ಎಂಬಿಬಿಎಸ್ ವಿದ್ಯಾರ್ಥಿ ಮೃತ ಹೇಮಂತ್

Profile Ashok Nayak Apr 9, 2025 9:04 PM

ಚಿಕ್ಕಬಳ್ಳಾಪುರ : ಮೊದಲ ವರ್ಷದ ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಪಟ್ರೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು ಸಾವಿನ ಕಾರಣ ನಿಗೂಢ ವಾಗಿದೆ. ಆತ್ಮಹತ್ಯೆಗೆ ಶರಣಾಗಿರುವ ವೈದ್ಯ ವಿದ್ಯಾರ್ಥಿಯನ್ನು ಹೇಮಂತ್(18) ಎಂದು ಗುರ್ತಿಸ ಲಾಗಿದ್ದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ಸಂಬಂಧಿಯಾಗಿರುವ ಹೇಮಂತ್  ತಾಲೂಕಿನ ಪಟ್ರೇನಹಳ್ಳಿಯ ತೋಟದ ಮನೆಯಲ್ಲಿ ಬುಧವಾರ ಮಧ್ಯಾಹ್ನ ೩.೩೦ರ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.

ಮೃತ ದುರ್ದೈವಿ ಹೇಮಂತ್ ತಾಲೂಕಿನ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ಎನ್ನಲಾಗಿದೆ. ಈತನ ತಾಯಿ ವೈದ್ಯರಾ ಗಿದ್ದು ಅವರ ಜೊತೆ ವಿಯಟ್ನಾಂ ದೇಶದ ಪ್ರವಾಸ ಮುಗಿಸಿ ಮನೆಗೆ ಬುಧವಾರವೇ ಮನೆಗೆ  ಬಂದಿದ್ದ ಎನ್ನಲಾಗಿದೆ. ಆದರೆ, ಅದೇನಾಯ್ತೋ ಏನೋ ಸಂಜೆ ಸ್ನಾನ ಮುಗಿಸಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಹೇಮಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಹೇಮಂತ್ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾ ಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.