ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿಎಂಸಿ ಮಾಜಿ ನಾಯಕನ ಸಹಚರ ಬಸ್ ಚಾಲಕನ ಮನೆ ಮೇಲೆ ದಾಳಿ: 5.5 ಕೋಟಿ ರೂ. ನಗದು, 15 ಕೆಜಿ ಚಿನ್ನ ವಶ

ಪಶ್ಚಿಮ ಬಂಗಾಳದ ಬಸ್ ಚಾಲಕ, ಟಿಎಂಸಿ ಮಾಜಿ ನಾಯಕನ ಸಹಚರ ಮನೆ ಮೇಲೆ ಪೊಲೀಸರು ದಾಳಿ ದಾಳಿ ನಡೆಸಿದ್ದು, ಕೋಟ್ಯಾಂತರ ರೂಪಾಯಿ ನಗದು ಸೇರಿದಂತೆ ಅಪಾರ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದಿದ್ದರೆ. ತೃಣಮೂಲ ಕಾಂಗ್ರೆಸ್ ನ ಮಾಜಿ ನಾಯಕ, ಕಲ್ಲು ವ್ಯಾಪಾರಿ ಅನುಬ್ರತಾ ಮೊಂಡಲ್ ಅವರ ಆಪ್ತ ಸಹಚರ ಮಿನಾರ್ ಮಂಡಲ್ ಎಂಬಾತನ ಮನೆ ಮೇಲೆ ಮಂಗಳವಾರ ತಡರಾತ್ರಿ ದಾಳಿ ನಡೆಸಲಾಗಿದೆ.

ಸಂಗ್ರಹ ಚಿತ್ರ

ಕೋಲ್ಕತ್ತಾ: ಬಸ್ ಚಾಲಕನ ಮನೆ ಮೇಲೆ ಮಂಗಳವಾರ ತಡರಾತ್ರಿ ಪೊಲೀಸರು ದಾಳಿ (Police raid) ನಡೆಸಿದ್ದು, ಅಪಾರ ಪ್ರಮಾಣದ ನಗದು, ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ತೃಣಮೂಲ ಕಾಂಗ್ರೆಸ್ (Trinamool Congress) ನ ಮಾಜಿ ನಾಯಕ ಅನುಬ್ರತಾ ಮೊಂಡಲ್ (anubrata mondal) ಅವರ ಆಪ್ತ ಸಹಚರ, ಪಶ್ಚಿಮ ಬಂಗಾಳ (west bengal) ಸರ್ಕಾರದ ಮಾಜಿ ಬಸ್ ಚಾಲಕನಾಗಿದ್ದ ಮಿನಾರ್ ಮಂಡಲ್ ಎಂಬಾತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 5 ಕೋಟಿ ರೂಪಾಯಿಗೂ ಹೆಚ್ಚಿನ ನಗದು, 15 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಪ್ರಮುಖ ಕಲ್ಲು ವ್ಯಾಪಾರಿ ತುಳು ಮಂಡಲ್ ನ ಸಂಬಂಧಿಯಾಗಿರುವ ಬಿರ್ಭುಮ್‌ನ ಮಿನಾರ್ ಮಂಡಲ್ ತೃಣಮೂಲ ಕಾಂಗ್ರೆಸ್ ನ ಮಾಜಿ ನಾಯಕ ಅನುಬ್ರತ ಮೊಂಡಲ್ ಅವರ ಸಹಚರನು ಆಗಿದ್ದಾನೆ. ಮೊಹಮ್ಮದ್ ಬಜಾರ್‌ನಲ್ಲಿ ಸಾಮಾನ್ಯ ಎರಡು ಅಂತಸ್ತಿನ ಕಟ್ಟಡದಲ್ಲಿ ಆತ ವಾಸವಾಗಿದ್ದು, ಇಲ್ಲಿಂದ ಕೋಟ್ಯಾಂತರ ರೂಪಾಯಿ ನಗದು, ಚಿನ್ನದ ಗಟ್ಟಿಗಳು ಮತ್ತು ಕರೆನ್ಸಿ ಎಣಿಕೆ ಯಂತ್ರಗಳನ್ನು ಮಂಗಳವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇ20 ಪೆಟ್ರೋಲ್ ಬಳಕೆಗೆ ಎಂಜಿನ್ ಬದಲಾವಣೆ ಬೇಡ; ಕೆಲವು ರಬ್ಬರ್ ಭಾಗಗಳಷ್ಟೇ ಬದಲಿಸಿ: ನಿತಿನ್ ಗಡ್ಕರಿ

ಮಿನಾರ್ ಮಂಡಲ್ ಮನೆ ಮೇಲೆ ಮಂಗಳವಾರ ತಡರಾತ್ರಿ ದಾಳಿ ಪ್ರಾರಂಭಿಸಲಾಗಿದೆ. ವಶ ಪಡಿಸಿಕೊಂಡ ನಗದಿನಲ್ಲಿ ಬುಧವಾರ ಸಂಜೆ ವೇಳೆಗೆ ಸುಮಾರು 5.5 ಕೋಟಿ ರೂ. ಅನ್ನು ಲೆಕ್ಕ ಮಾಡಲಾಗಿದೆ. 15 ಕೆಜಿ ಚಿನ್ನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಮಿನಾರ್ ಮಂಡಲ್ ಕೂಡ ಕಲ್ಲು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ತುಳು ಮಂಡಲ್ ಒಡೆತನದ ಹಲವಾರು ಕಲ್ಲು ಕ್ವಾರಿಗಳು ಮತ್ತು ಪುಡಿಮಾಡುವ ಘಟಕಗಳೊಂದಿಗೆ ಆತ ಸಂಬಂಧ ಹೊಂದಿದೆ ಎನ್ನಲಾಗಿದೆ.

ಹಲವು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದೊಡ್ಡ ಸಿಬ್ಬಂದಿ ತೂಕಡಿಯೊಂದಿಗೆ ಮಿನಾರ್ ಮಂಡಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿಗೆ ನಿಖರ ಕಾರಣವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಅಕ್ರಮ ಹಣಕಾಸು ವಹಿವಾಟುಗಳು ಶಂಕೆಯಿಂದ ದಾಳಿ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭ್ರಷ್ಟಾಚಾರದ ವಿರುದ್ಧ "ಶೂನ್ಯ ಸಹಿಷ್ಣುತೆ" ನೀತಿಯನ್ನು ಅನುಸರಿಸುತ್ತಿರುವ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ದಾಳಿಯ ಬಳಿಕ ಪ್ರತಿಕ್ರಿಯಿಸಿ, ಮರಳು ಮಾಫಿಯಾ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಕಾನೂನು ಜಾರಿ ಸಿಬ್ಬಂದಿಯ ಕೆಲಸ ಶ್ಲಾಘನೀಯ ಎಂದು ಹೇಳಿದ್ದಾರೆ.

ಬಿರ್ಭಮ್ ಪೊಲೀಸರು ಅಕ್ರಮ ಮರಳು ಮಾಫಿಯಾದಲ್ಲಿ ತೊಡಗಿಕೊಂಡಿರುವ ತುಳು ಮಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಅಡಗುತಾಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಸುಮಾರು 5.5 ಕೋಟಿ ರೂ. ನಗದು ವಶಕ್ಕೆ ಪಡೆದಿದ್ದು, ಎಣಿಕೆ ಕಾರ್ಯ ಮುಂದುವರಿದಿದೆ. ಸುಮಾರು 15 ಕೆಜಿ ಚಿನ್ನ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಮಿನಾರ್ ರಾಜ್ಯ ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿಯಾಗಿದ್ದು, ಕಲ್ಲು ವ್ಯವಹಾರಕ್ಕೆ ಇಳಿಯುವ ಮೊದಲು ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆತ ಇಷ್ಟೊಂದು ಆದಾಯ ಹೇಗೆ ಸಂಗ್ರಹಿಸಿದ ಎಂಬುದು ಸ್ಪಷ್ಟವಾಗಿಲ್ಲ. ಆತನ ಆದಾಯದ ಮೂಲಗಳ ತನಿಖೆ ನಡೆಯಬೇಕಿದೆ ಎಂದು ಅವರು ಹೇಳಿದರು.

2024ರಲ್ಲಿ ತುಳು ಮಂಡಲ್ ತನ್ನ ಮಗಳ ಮದುವೆಗಾಗಿ ಸುಮಾರು 100 ಕೋಟಿ ರೂ.ಖರ್ಚು ಮಾಡಿದ್ದನು. ಬಿರ್ಭುಮ್‌ನ ಸೂರಿಯಲ್ಲಿ ನಡೆದ ಮದುವೆಗೆ ಬಂಗಾಳಿ ಮತ್ತು ಬಾಲಿವುಡ್ ನಟರನ್ನು ಆಹ್ವಾನಿಸಲಾಗಿತ್ತು. ಅತಿಥಿಗಳ ಪಟ್ಟಿಯಲ್ಲಿ ಅಂಕುಶ್ ಹಜ್ರಾ, ದರ್ಶನಾ ಬಾನಿಕ್, ಅರ್ಬಾಜ್ ಖಾನ್ ಮತ್ತು ಜರೀನ್ ಖಾನ್‌ ಇದ್ದರು ಎನ್ನಲಾಗಿದೆ. ಈ ಮದುವೆಯ ಬಳಿಕ ಆತನ ಆದಾಯ ಮತ್ತು ಸಹಚರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಮಿನಾರ್ ಮಂಡಲ್ ತೃಣಮೂಲ ಕಾಂಗ್ರೆಸ್ ನ ಮಾಜಿ ನಾಯಕ ಅನುಬ್ರತಾ ಮೊಂಡಲ್ ಅವರ ಸಹಚರ ಎಂಬುದು ತಿಳಿದ ಮೇಲೆ ಇದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಟಿಎಂಸಿ ಶಾಸಕ ಕುನಾಲ್ ಘೋಷ್ ಮಾತನಾಡಿ, ಇದರಿಂದಾಗಿಯೇ ಉತ್ತಮ ತೃಣಮೂಲ ಕಾಂಗ್ರೆಸ್ ನ ನಾಯಕರ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಅಗತ್ಯವಿದ್ದರೆ ಪೊಲೀಸರು ಆ ನಾಯಕರನ್ನು ವಿಚಾರಣೆ ಮಾಡಬೇಕು, ಸತ್ಯವನ್ನು ಬೆಳಕಿಗೆ ತರಬೇಕು ಎಂದು ಹೇಳಿದ್ದಾರೆ.

ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?

ಮಿನಾರ್ ಮಂಡಲ್ ಮನೆ ಮೇಲಿನ ದಾಳಿಯು ತೃಣಮೂಲ ಕಾಂಗ್ರೆಸ್ ನ ಋತಬ್ರತ ಬ್ಯಾನರ್ಜಿ ಬಣದಲ್ಲಿರುವ ಟಿಎಂಸಿ ಶಾಸಕ ಪ್ರಸೂನ್ ಬ್ಯಾನರ್ಜಿ ಅವರ ಮೇಲೆ ಬೆರಳು ತೋರಿಸಿದೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಪ್ರತಿಕ್ರಿಯಿಸಿ ಬಿರ್ಭುಮ್ ಅನ್ನು ಯಾವಾಗಲೂ ತೃಣಮೂಲ ಪಕ್ಷದ ಮಾಜಿ ಸಚಿವರ ವಿಶೇಷ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಬೇರೆ ಯಾರೂ ಅಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಈಗ ತನಿಖೆ ನಡೆಸಿ ಆರೋಪಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ನಡುವಿನ ಸಂಪರ್ಕದ ವ್ಯಾಪ್ತಿಯನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author