ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drown in water: ನಾಲೆ ನೀರಲ್ಲಿ ಕೊಚ್ಚಿ ಹೋದ ನಾಲ್ವರು ಮಕ್ಕಳು; ಮುಂದುವರಿದ ಶೋಧ ಕಾರ್ಯ

ಪ್ರವಾಸಕ್ಕೆ ಬಂದಿದ್ದ ಮದರಸದ ನಾಲ್ವರು ಮಕ್ಕಳು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಬಳಿಯ ರಾಮಸ್ವಾಮಿ ನಾಲೆಯಲ್ಲಿ ನಡೆದಿದೆ. ಶಾಂತಿನಗರದ ಮದರಸದ ಮಕ್ಕಳನ್ನು ಪಿಕ್‌ನಿಕ್‌ಗೆ ಎಂದು ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ 5.30ರ ಸಮಯಕ್ಕೆ ನಾಲೆ ಬಳಿ ಆಟವಾಡುವಾಗ ಮಕ್ಕಳು ನಾಲೆಗೆ ಇಳಿದಿದ್ದರು. ಆದರೆ ನೋಡು ನೋಡುತ್ತಿದ್ದಂತೆ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದರು.

ಶ್ರೀರಂಗಪಟ್ಟಣ: ಪ್ರವಾಸಕ್ಕೆ ಬಂದಿದ್ದ ಮದರಸದ ನಾಲ್ವರು ಮಕ್ಕಳು ನೀರಲ್ಲಿ ಕೊಚ್ಚಿ (Drown in water) ಹೋಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಬಳಿಯ ರಾಮಸ್ವಾಮಿ ನಾಲೆಯಲ್ಲಿ ನಡೆದಿದೆ. ಮೈಸೂರಿನ ಶಾಂತಿನಗರದ ಮದರಸದ ಮಕ್ಕಳಾದ ಐಶಾ (13) ಎಂಬ ಬಾಲಕಿನ ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಜೀವ ಬಿಟ್ಟಿದ್ದಾಳೆ. ಹನಿ ‌(14), ಅರ್ಫಿನ್ (13), ತರ್ವೀನ್ (13) ನಾಪತ್ತೆ ಆಗಿದ್ದಾರೆ. ಕಾಣೆಯಾದವರ ಶೋಧ ಕಾರ್ಯ ನಡೆಯುತ್ತಿದೆ.

ಶಾಂತಿನಗರದ ಮದರಸದ ಮಕ್ಕಳನ್ನು ಪಿಕ್‌ನಿಕ್‌ಗೆ ಎಂದು ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ 5.30ರ ಸಮಯಕ್ಕೆ ನಾಲೆ ಬಳಿ ಆಟವಾಡುವಾಗ ಮಕ್ಕಳು ನಾಲೆಗೆ ಇಳಿದಿದ್ದರು. ಆದರೆ ನೋಡು ನೋಡುತ್ತಿದ್ದಂತೆ ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದರು. ಇದರಲ್ಲಿ ಬಾಲಕಿ ಐಶಾಳನ್ನ ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಇನ್ನು ಹನಿ, ಅರ್ಫಿನ್ ಹಾಗೂ ತರ್ವೀನ್ ನಾಪತ್ತೆ ಆಗಿದ್ದರು. ಈ ಸಂಬಂಧ ನಿನ್ನೆಯಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ರಾತ್ರಿಆಗಿದ್ದರಿಂದ ನಿನ್ನೆ ಶೋಧ ಕಾರ್ಯ ಸ್ಥಗಿತ ಮಾಡಲಾಗಿತ್ತು. ಇಂದು ಶೋಧ ಕಾರ್ಯ ಮುಂದುವರೆಯಲಿದೆ. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೇರಳದಲ್ಲಿ ಮಂಗಳೂರಿನ ರೌಡಿಶೀಟರ್​ನ ಹತ್ಯೆ

ಮಂಗಳೂರಿನ ರೌಡಿಶೀಟರ್​​ನ ಬರ್ಬರ ಹತ್ಯೆ ನಡೆದಿರುವಂತಹ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳದ ರೈಲ್ವೆ ಗೇಟ್ ಬಳಿ ನಡೆದಿದೆ. ರೌಡಿಶೀಟರ್ ಟೋಪಿ ನೌಫಾಲ್​​ ಅನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಉಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಫೈಸಲ್​ನಗರದ ನಿವಾಸಿಯಾಗಿರುವ ರೌಡಿಶೀಟರ್ ಟೋಪಿ ನೌಫಾಲ್, ಮಂಗಳೂರಿನ ನಟೋರಿಯಸ್ ರೌಡಿಯೊಂದಿಗೆ ಸೇರಿ ಡ್ರಗ್ಸ್​ ಸೇವನೆ ಮತ್ತು ವಹಿವಾಟು ಮಾಡುತ್ತಿದ್ದ. 2017ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿದ್ದ ಜೋಡಿ ಕೊಲೆ ಕೇಸ್​ನ ಪ್ರಮುಖ ಆರೋಪಿಯಾಗಿದ್ದ.

ಈ ಸುದ್ದಿಯನ್ನೂ ಓದಿ: Supreme Court: ವೃದ್ಧೆಯ ಅತ್ಯಾಚಾರ, ಕೊಲೆ: ಸರಿಯಾದ ಸಾಕ್ಷಿ ಇಲ್ಲ ಎಂದ ಸುಪ್ರೀಂ ಕೋರ್ಟ್, ಆರೋಪಿ ಖುಲಾಸೆ

ನೌಫಾಲ್​​ ಮಾರಿಪಳ್ಳ ಜಬ್ಬಾರ್​, ತಲ್ಲತ್​ ಗ್ಯಾಂಗ್​​ ಜೊತೆಗೂ ಗುರುತಿಸಿಕೊಂಡಿದ್ದ. ಬಳಿಕ ತನ್ನದೇ ತಂಡವೊಂದನ್ನು ಕಟ್ಟಿಕೊಂಡು ಡ್ರಗ್ಸ್​​, ವಸೂಲಿ, ಅಕ್ರಮ ಚಿನ್ನ ವಹಿವಾಟು ಮತ್ತು ಕೊಲೆಯತ್ನ ಮಾಡುತ್ತಿದ್ದ. ನೌಫಾಲ್ ವಿರುದ್ಧ ಮಂಗಳೂರಿನಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.