ಭುವನೇಶ್ವರ, ಏ. 1: ಮಲತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮನೆಯಿಂದ ಓಡಿಹೋಗಿದ್ದ ಆಂಧ್ರ ಪ್ರದೇಶದ (Andhra Pradesh) 17 ವರ್ಷದ ಬಾಲಕಿಯ ಮೇಲೆ ಮೂವರು ಹದಿಹರೆಯದವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ನಡೆದಿದೆ (Crime News). ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ವಾಸಿಸುವ ಬಾಲಕಿಯು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಳು. ಆಕೆಯ ತಾಯಿ ಮರುಮದುವೆಯಾದ ನಂತರ, ಮಲತಂದೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಒಂದು ದಿನ, ಅವಳು ಮಲಗಿದ್ದಾಗ, ಮಲತಂದೆ ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ. ಭಯಭೀತಳಾದ ಹುಡುಗಿ ತನ್ನ ಮನೆಯಿಂದ ಓಡಿಹೋಗಿ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು ಹತ್ತಿ, ಕೊನೆಗೆ ಒಡಿಶಾದ ಬೆರ್ಹಾಂಪುರ ತಲುಪಿದಳು.
ಮಹಿಳೆಯ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ; ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಅರೆಸ್ಟ್
ಅಲ್ಲಿಗೆ ಬಂದ ನಂತರ, ಅಪ್ರಾಪ್ತ ಬಾಲಕಿ ತನ್ನ ಜೀವನ ನಿರ್ವಹಣೆಗಾಗಿ ರೈಲ್ವೆ ನಿಲ್ದಾಣದ ಬಳಿಯ ಚಹಾ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಅಲ್ಲಿ ಅವಳು ಲಂಜಿಪಲ್ಲಿಯ 15 ವರ್ಷದ ಬಾಲಕನನ್ನು ಭೇಟಿಯಾದಳು. ಅವನು ಅವಳೊಂದಿಗೆ ಒಳ್ಳೆಯ ಮಾತುಗಳನ್ನಾಡಿ ಸ್ನೇಹ ಬೆಳೆಸಿದನು. ನಂತರ ಅವಳನ್ನು ತನ್ನ ಮನೆಗೆ ಕರೆದೊಯ್ದ.
ಅಪ್ರಾಪ್ತೆ ಮನೆಯಲ್ಲಿದ್ದಾಗ ಬಾಲಕ ತನ್ನ ಇಬ್ಬರು ಸ್ನೇಹಿತರಿಗೆ ಕರೆ ಮಾಡಿದ. ಹೀಗೆ ಮೂವರು ಮಾರ್ಚ್ 29ರಂದು ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು, ಆಕೆಯ ಆಹಾರದಲ್ಲಿ ಮಾದಕ ವಸ್ತುವನ್ನು ಬೆರೆಸಿ, ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ವಿವಿಧ ಸ್ಥಳಗಳಿಗೆ ಕರೆದೊಯ್ದು ಆಕೆಯ ಮೇಲೆ ಪದೇ ಪದೆ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿದ್ದಾರೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಗಂಜಾಂನ ಗೋಸೈನ್ ನುವಾಗಾಂವ್ ಪೊಲೀಸರು ದಾಳಿ ನಡೆಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ. ಗೋಸೈನ್ ನುಗಾಂವ್ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಸಮೋಸಾ ತಿಂದು ಹಣ ಪಾವತಿಸುವ ಬದಲು ಹೋಟೆಲ್ ಮಾಲಕನ ಬೆರಳನ್ನೇ ಕಚ್ಚಿ ತುಂಡರಿಸಿದ ಗ್ರಾಹಕ!
ಬೆರ್ಹಾಂಪುರ್ ಪೊಲೀಸ್ ವರಿಷ್ಠಾಧಿಕಾರಿ ಸರವಣ ವಿವೇಕ್ ಎಂ. ಮಾತನಾಡಿ, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಅವರಲ್ಲಿ 23 ಮತ್ತು 19 ವರ್ಷ ವಯಸ್ಸಿನ ಇಬ್ಬರನ್ನು ಬಂಧಿಸಲಾಗಿದ್ದು, 15 ವರ್ಷದ ಬಾಲಕನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.
ಆಂಧ್ರ ಪ್ರದೇಶದಲ್ಲಿಯೂ ಸಂತ್ರಸ್ತೆಯ ಮಲತಂದೆಯ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.