ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಾಸಗಿ ಸ್ಲೀಪರ್ ಕೋಚ್‌ ಬಸ್‌ನಲ್ಲಿ ಚಿನ್ನ ರಾಬರಿ; ಊಟಕ್ಕೆಂದು ನಿಲ್ಲಿಸಿದ್ದಾಗ ಬಂಗಾರದ ಬ್ಯಾಗ್‌ ಕದ್ದೊಯ್ದ ಖದೀಮರು

ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್​ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್​ ಕಳ್ಳತನವಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಾಲ್ಕು ಜನ ಖದೀಮರ ಗ್ಯಾಂಗ್​​ ಪಕ್ಕಾ ಪ್ಲ್ಯಾನ್​​ ಮಾಡಿ 90 ಲಕ್ಷ ಮೌಲ್ಯದ ಚಿನ್ನವನ್ನು ಎಗರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಗ್ರಹ ಚಿತ್ರ

ಕೊಪ್ಪಳ: ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್​ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್​ ಕಳ್ಳತನವಾಗಿರುವ ಘಟನೆ ಕೊಪ್ಪಳದಲ್ಲಿ (Gold Robbery) ನಡೆದಿದೆ. ನಾಲ್ಕು ಜನ ಖದೀಮರ ಗ್ಯಾಂಗ್​​ ಪಕ್ಕಾ ಪ್ಲ್ಯಾನ್​​ ಮಾಡಿ 90 ಲಕ್ಷ ಮೌಲ್ಯದ ಚಿನ್ನವನ್ನು ಎಗರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಹಮ್ಮದ್, ಇರ್ಷಾದ್ ಚಿನ್ನ ಇರುವ ಬ್ಯಾಗ್‌ನೊಂದಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್​ನಲ್ಲಿ ಮಹಮ್ಮದ್, ಇರ್ಷಾದ್ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಬಸ್​ಅನ್ನು ಊಟಕ್ಕೆಂದು ತವ ಪಂಜಾಬ್ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿದ್ದರು. ಈ ವೇಳೆ ಬಸ್​ನಲ್ಲಿದ್ದ ಚಿನ್ನಾಭರಣವಿದ್ದ ಬ್ಯಾಗ್​​​ ರಾಬರಿಯಾಗಿದೆ. ನಾಲ್ಕು ಜನರ ಖದೀಮರ ಗ್ಯಾಂಗ್​ ಚಿನ್ನಾಭರಣವಿದ್ದ ಬ್ಯಾಗ್​ ಕದ್ದು ಎಸ್ಕೇಪ್​ ಆಗಿದ್ದಾರೆ. ರಾಬರಿಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ಸಿಂಧನೂರಿನಿಂದ ಸ್ಲೀಪರ್ ಕೋಚ್ ಬಸ್​ನಲ್ಲಿಯೇ ಆರೋಪಿ ಇದ್ದ. ಇನ್ನು ಮೂರು ಜನ ಬಸ್‌ಅನ್ನು ಫಾಲೋ ಮಾಡಿಕೊಂಡು ಬಂದಿದ್ದರು ಎಂದು ತಿಳಿದು ಬಂದಿದೆ.

ರಸ್ತೆ ಬದಿಯಲ್ಲಿರುವ ತವ ಪಂಜಾಬ್​​ ಹೋಟೆಲ್​ನಿದ್ದ ಸಿಸಿಟಿವಿ ಕ್ಯಾಮರದಲ್ಲಿ ಗೋಲ್ಡ್​ ರಾಬರಿಯ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಆರೋಪಿಗಳು ಬಸ್‌ಗೆ ಹತ್ತಿ ಚಿನ್ನಾಭರಣವಿದ್ದ ಬ್ಯಾಗ್​ ಅನ್ನು ಕದ್ದು ಹೋಗಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.

ಕಳೆದ ತಿಂಗಳು ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡಲಾಗಿತ್ತು. ಇ-ಕಾಮರ್ಸ್ ಸಂಸ್ಥೆಗೆ ಸೇರಿದ ವಸ್ತುಗಳು ರಾಬರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ರಾಣೇಬೆನ್ನೂರು (Ranebennuru) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮಾರ್ಗ ಮಧ್ಯದಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದಲೇ ಫ್ಲಿಪ್​ಕಾರ್ಟ್​ ಕಂಪನಿ ಸ್ವತ್ತುಗಳ ರಾಬರಿಯಾಗಿರುವ ಘಟನೆ ನಡೆದಿದೆ. ಸುಮಾರು 24 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆಕೋರರು ಕದ್ದು ಪರಾರಿಯಾಗಿದ್ದಾರೆ .

ಬೆಳಗಾವಿಯಲ್ಲಿ ನಡೀತು ದೇಶದಲ್ಲಿಯೇ ಅತ್ಯಂತ ದೊಡ್ಡ ದರೋಡೆ; 400 ಕೋಟಿ ರಾಬರಿ!

ಮಲಿಕಜಾನ್ ಮುಲ್ಲಾ ಎಂಬುವವರಿಗೆ ಸೇರಿದ್ದ ಟ್ರಕ್​ನಲ್ಲಿ ದರೋಡೆ ನಡೆದಿದೆ. ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆದ್ದಾರಿ ಸಿಸಿಟಿವಿ ಆಧಾರಿಸಿ ಪೊಲೀಸರು ತನಿಖೆ ಶುರುಮಾಡಿದ್ದಾರೆ.

Vishakha Bhat Heggar

View all posts by this author