ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ನನ್ನ ಮಗಳು ತಪ್ಪು ಮಾಡಿದ್ದರೆ ಅದೇ ಕೋಟೆಯಿಂದ ಆಕೆಯನ್ನು ತಳ್ಳಿ ಬಿಡಿ"; ಕಣ್ಣೀರು ಹಾಕಿದ ಆರೋಪಿ ಸಿಯಾ ತಂದೆ

Pune Muder Case: ಉದ್ಯಮಿ ಕೇತನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರು ಸಿಯಾ ಗೋಯಲ್‌ (Siya Goyal) ಹಾಗೂ ಚೇತನ್‌ ಚೌಧರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಆರೋಪಿಗಳು ಕೊಲೆ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ

ಸಂಗ್ರಹ ಚಿತ್ರ

ಪುಣೆ: ಉದ್ಯಮಿ ಕೇತನ್‌ ಕೊಲೆ ಪ್ರಕರಣಕ್ಕೆ (Pune Muder Case) ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರು ಸಿಯಾ ಗೋಯಲ್‌ (Siya Goyal) ಹಾಗೂ ಚೇತನ್‌ ಚೌಧರಿಯನ್ನು (Chetan Choudhari) ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಆರೋಪಿಗಳು ಕೊಲೆ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಿಯಾ ಗೋಯಲ್ ಅವರ ತಂದೆ ಪ್ರವೀಣ್ ಗೋಯಲ್, ತಮ್ಮ ಮಗಳು ತನ್ನ ನಿಶ್ಚಿತ ವರ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡಿದ ಆರೋಪ ಸಾಬೀತಾದರೆ , ಮರಣದಂಡನೆ ಸೇರಿದಂತೆ ಅತ್ಯಂತ ಕಠಿಣ ಶಿಕ್ಷೆಯನ್ನು ಅನುಭವಿಸಬೇಕು ಹೇಳಿಕೆಯನ್ನು ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಕೆಯ ಬಂಧನದ ನಂತರ ನನಗೆ ಶಾಕ್‌ ಎದುರಾಯಿತು. ಅದೇ ನೋವಿನಲ್ಲಿ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದೆ ಎಂದು ಹೇಳಿದರು. ಅವರಿಗೆ ಹೃದಯಾಘಾತವಾಗಿದ್ದು, ಪ್ರಸ್ತುತ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. "ನನ್ನ ಮಗಳು ಇಂತಹದ್ದನ್ನು ಮಾಡಬಲ್ಲಳು ಎಂದು ನನಗೆ ಇನ್ನೂ ನಂಬಲು ಅಸಾಧ್ಯವೆನಿಸುತ್ತದೆ. ಅವಳು ಎಂದಿಗೂ ನನಗೆ ಸುಳ್ಳು ಹೇಳಲಿಲ್ಲ ಮತ್ತು ಯಾವಾಗಲೂ ಸರಿಯಾದ ಮಾರ್ಗವನ್ನು ಅನುಸರಿಸುತ್ತಿದ್ದಳು" ಎಂದು ಪ್ರವೀಣ್‌ ಗೋಯಲ್‌ ಹೇಳಿದ್ದಾರೆ.

ನನ್ನ ಮಗಳು ತಪ್ಪಿತಸ್ಥೆ ಎಂದು ಸಾಬೀತಾದರೆ, ನ್ಯಾಯಾಲಯವು ನ್ಯಾಯವನ್ನು ವಿಳಂಬ ಮಾಡಬಾರದು. ಆಕೆಗೂ ಅದೇ ಶಿಕ್ಷೆಯನ್ನು ನೀಡಬೇಕು. ಒಬ್ಬ ತಂದೆಯಾಗಿ ನಾನು ಅದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ, ಅವಳು ತಪ್ಪಿತಸ್ಥನೆಂದು ಸಾಬೀತಾದರೆ, ಅವಳನ್ನು ಅದೇ ಕೋಟೆಗೆ ಕರೆದೊಯ್ದು ಅದೇ ಸ್ಥಳದಿಂದ ತಳ್ಳಿಬಿಡಿ. ಒಬ್ಬ ತಂದೆ ಹೇಳಬಹುದಾದದ್ದು ಇಷ್ಟೇ. ಅವಳಿಗೂ ಮರಣ ದಂಡನೆ ನೀಡಿ ಎಂದು ಭಾವುಕರಾಗಿದ್ದಾರೆ.

ಪುಣೆ ಉದ್ಯಮಿ ಕೊಲೆ ಕೇಸ್‌; ಸಿಕ್ಕಿಬಿದ್ದ ಬಳಿಕ ಮೂಡಿತಾ ಬಿರುಕು? ಸಿಯಾ - ಚೇತನ್‌ ಪರಸ್ಪರ ಆರೋಪ

ಸಿಯಾಗೆ ಮದುವೆ ಇಷ್ಟವಿಲ್ಲ ಎಂದು ಹೇಳಿಲ್ಲ. ಆಕೆ ಹಾಗೂ ಕೇತನ್‌ ಪರಸ್ಪರ ವೀಡಿಯೊ ಕರೆ ಮಾಡುತ್ತಿದ್ದರು, ನಿಯಮಿತವಾಗಿ ಭೇಟಿಯಾಗುತ್ತಿದ್ದರು ಮತ್ತು ಒಟ್ಟಿಗೆ ಸಂತೋಷವಾಗಿ ಕಾಣುತ್ತಿದ್ದರು. ಕೇತನ್ ಮನೆಗೆ ಊಟಕ್ಕೂ ಬಂದಿದ್ದರು. ಏನೋ ತಪ್ಪಾಗಿದೆ ಎಂಬ ಸೂಚನೆ ನಮಗೆ ಸಿಗಲಿಲ್ಲ ಎಂದು ತಾಯಿ ಪೂಜಾ ಗೋಯಲ್‌ ಹೇಳಿದ್ದಾರೆ. ಕೇತನ್ ನನಗೆ ಮಗನಿದ್ದಂತೆ, ಆತನ ಸಾವಿನಿಂದಾಗಿ ನಾವೂ ಆಘಾತಕ್ಕೊಳಗಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಹುಡುಗಿಯ ಕುಟುಂಬವು ಕೆಲವು ಸಂಗತಿಗಳನ್ನು ತಮ್ಮಿಂದ ಮರೆಮಾಚಿದೆ ಎಂದು ಅಗರ್ವಾಲ್ ಅವರ ತಂದೆ ಮಾಡಿರುವ ಆರೋಪವನ್ನು ಸಿಯಾ ಕುಟುಂಬ ತಳ್ಳಿ ಹಾಕಿದೆ.

Vishakha Bhat Heggar

View all posts by this author