ಬೆಂಗಳೂರು, ಏ.07 : ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ (harassment) ನೀಡಿದ ಆರೋಪದ ಹಿನ್ನೆಲೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರಾಗಿದ್ದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji ) ವಿರುದ್ಧ ಸಂತ್ರಸ್ತ ಮಹಿಳೆಯು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಬೆಂಗಳೂರಿನ ತ್ಯಾಗರಾಜನಗರ ನಿವಾಸಿಯಾಗಿರುವ ಮಹಿಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸ್ವಾಮೀಜಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಬೆಂಗಳೂರಿಗೆ ಬಂದಾಗ ಹಲವು ಬಾರಿ ಭೇಟಿಯಾಗಿದ್ದರು. ಸ್ವಾಮೀಜಿಯವರ ಹೋರಾಟಗಳಿಗೆ ನಾನು ಕೂಡ ಬೆಂಬಲ ನೀಡಿದ್ದೆ. ಆಗ ನನಗೆ ಸ್ವಾಮೀಜಿಯವರ ಪರಿಚಯವಾಗಿತ್ತು. ನಂತರ ಪ್ರಸಾದ ಕೊಡುತ್ತೇನೆ ಎಂದು ಹೇಳಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ. ಮೈ ಕೈ ಮುಟ್ಟುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಖಾಸಗಿ ವಿಡಿಯೋ ಮಾಡಿಕೊಂಡಿದ್ದು, ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಯತ್ನಾಳ್ ಉಚ್ಚಾಟನೆ ಹಿಂಪಡೆಯದಿದ್ದರೆ ಉಗ್ರ ಹೋರಾಟ; ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಹಲ್ಲೆ ಕುರಿತು ಸ್ವಾಮೀಜಿ ದೂರು
ಮಹಿಳೆಗೆ ಬಸವ ಜಯ ಮೃತ್ಯುಂಜಯ ಶ್ರೀ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಪ್ರಿಲ್ ನಾಲ್ಕರಂದೇ ಮಹಿಳೆ ಸೇರಿ ನಾಲ್ವರ ವಿರುದ್ಧ ಸ್ವಾಮೀಜಿ ದೂರು ನೀಡಿದ್ದರು. ವಿಜಯಪುರ ತಾಲೂಕಿನ ಕಗ್ಗೊಡ ಬಳಿ ಫೆಬ್ರವರಿ 11ರಂದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿಜಯಪುರ ಗ್ರಾಮಾಂತರ ಠಾಣೆಗೆ ಮೃತ್ಯುಂಜಯ ಶ್ರೀಗಳು ದೂರು ನೀಡಿದ್ದಾರೆ.
ಬೆಂಗಳೂರು ಮೂಲದ ತ್ರಿವೇಣಿ, ಪೃಥ್ವಿ ಗೌಡ, ಯಶವಂತ ಹಾಗೂ ಸ್ಪೀಡ್ ನ್ಯೂಸ್ ಎಂಡಿ ವೀರೇಶ್ ವಿರುದ್ಧ ಜಯ ಮೃತ್ಯುಂಜಯ ಶ್ರೀಗಳು ದೂರು ನೀಡಿದ್ದಾರೆ. ಎರಡು ಮೂರು ವರ್ಷಗಳ ಹಿಂದೆ ಬೆಂಗಳೂರಿನ ತ್ರಿವೇಣಿ ನನ್ನನ್ನು ಭೇಟಿಯಾಗಿದ್ದಳು. ನಾನು ಲಿಂಗಾಯತ ಸಮಾಜದವಳು. ಆಶ್ರೀತ ಫೌಂಡೇಶನ್ ಮುಖ್ಯಸ್ಥೆ ಎಂದು ಹೇಳಿದ್ದಳು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆ ಎಂದು ನನ್ನನ್ನು ಭೇಟಿಯಾಗಿದ್ದಳು. ಪಂಚಮಸಾಲಿ ಹೋರಾಟಕ್ಕೂ ಸಾತ್ ನೀಡುತ್ತೇನೆ ಎಂದು ಹೇಳಿದಳು.
Jaya Mruthyunjaya Swamiji: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟಣೆ
ನಂತರ ಫೌಂಡೇಶನ್‌ಗಾಗಿ ಹಣ ನೀಡಬೇಕು ಎಂದು ಆಕೆ ಬೇಡಿಕೆ ಇಟ್ಟಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ನಾನು ಆಕೆ ಹೇಳಿದೆ. ನಂತರ ಹಣಕ್ಕಾಗಿ ಪೀಡಿಸುತ್ತಿದ್ದಳು. ಹಣ ನೀಡದ ಕಾರಣ ಇಲ್ಲದ ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ವಾಹನ ಅಡ್ಡಗಟ್ಟಿ ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್‌ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಬೆಂಗಾಗಲು ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನನ್ನ ಶಿಷ್ಯ ರಾಜಕುಮಾರಗೆ ಕರೆ ಮಾಡಿ ಮೂರು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ಕೆಟ್ಟದಾಗಿ ಪ್ರಸಾರ ಮಾಡುತ್ತೇನೆ ಎಂದು ಹೇಳಿದ್ದಾಳೆ. ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ತ್ರಿವೇಣಿ ಬೆದರಿಕೆ ಹಾಕಿದ್ದಾಳೆ. ಪಂಚಮಸಾಲಿ ಹೋರಾಟ ತಿಕ್ಕಲು ಎಂದು ತೇಜೋವಧೆ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಬೆಂಗಳೂರು ಮೂಲದ ತ್ರಿವೇಣಿ ಪೃಥ್ವಿ ಗೌಡ ಯಶವಂತ್ ಹಾಗೂ ಸ್ಪೀಡ್ ನ್ಯೂಸ್ ವಿರುದ್ಧ ದೂರು ನೀಡಿದ್ದೇನೆ ಎಂದು ಶ್ರೀಗಳು ತಿಳಿಸಿದರು.