ಜಮ್ಮು: ಉಗ್ರರು (terror) ಅಡಗಿಕೊಂಡಿದ್ದ ತಾಣವೊಂದನ್ನು ಸೋಮವಾರ ಬೆಳಗ್ಗೆ ಭದ್ರತಾ ಪಡೆಗಳು (Security forces) ಪತ್ತೆ ಹಚ್ಚಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ. ಜಮ್ಮು ಮತ್ತು ಕಾಶ್ಮೀರದ (jammu and kashmir) ರಾಜೌರಿಯ (Rajouri) ಕೋತ್ರಾಂಕಾ ತಹಸಿಲ್ನ ಪಂಚ್ ಗಬ್ಬಾರ್ ಪ್ರದೇಶದಲ್ಲಿರುವ ಚೋರ್ ಹಿಲ್ ಎಂಬಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಒಂಬತ್ತು ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ (under-barrel grenade launcher) ಗ್ರೆನೇಡ್ಗಳು, ಒಂದು ಎಕೆ-47 ಮ್ಯಾಗಜೀನ್ ಮತ್ತು 18 ಸುತ್ತು ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಈ ಗುಹೆಯಲ್ಲಿ ಉಗ್ರರು ಅಡಗಿಕೊಂಡಿರುತ್ತಿದ್ದರು. ಇದನ್ನು ಭದ್ರತಾ ಪಡೆಗಳು ಸೋಮವಾರ ಪತ್ತೆಹಚ್ಚಿ ಅಲ್ಲಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ.
ಖಚಿತ ಗುಪ್ತಚರ ಮಾಹಿತಿ ಮೇರೆಗೆ ಭಾರತೀಯ ಸೇನೆಯ 60 ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿಯಾಗಿ ಅರಣ್ಯ ಪ್ರದೇಶವನ್ನು ಸುತ್ತುವರಿದು ಸಂಜೆ ವೇಳೆ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು.
ಈ ವೇಳೆ ಅರಣ್ಯದೊಳಗಿನ ನೈಸರ್ಗಿಕ ಗುಹೆಯೊಂದರಲ್ಲಿ ಉಗ್ರರು ಅಡಗಿಕೊಂಡಿರುವುದು ಪತ್ತೆಯಾಗಿದೆ. ಅಲ್ಲಿದ್ದ ಒಂಬತ್ತು ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್ಗಳು, ಒಂದು ಎಕೆ-47 ಮ್ಯಾಗಜೀನ್ ಮತ್ತು 18 ಸುತ್ತು ಎಕೆ ರೈಫಲ್ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಫ್ಲೂ ಲಸಿಕೆ ಯಾರಿಗೆ ಅಗತ್ಯ? ಯಾವಾಗ ತೆಗೆದುಕೊಳ್ಳಬೇಕು?
ಈ ಪ್ರದೇಶದಲ್ಲಿ ಉಗ್ರರು ವಿಧ್ವಂಸಕ ಕೃತ್ಯವನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಎಂಬುದು ಇದರಿಂದ ಬೆಳಕಿಗೆ ಬಂದಿದೆ. ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದ ದುಷ್ಕೃತ್ಯವನ್ನು ತಡೆಯಲಾಗಿದೆ. ಇಲ್ಲಿ ಭದ್ರತಾ ಸಂಸ್ಥೆಗಳಿಗೆ ಸವಾಲೊಡ್ಡಲು ಉಗ್ರರು ಆಗಾಗ್ಗೆ ನೈಸರ್ಗಿಕ ಗುಹೆಗಳನ್ನು ಅಡಗು ತಾಣಗಳಾಗಿ ಬಳಸಿಕೊಳ್ಳುತ್ತಾರೆ. ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.