ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹನಿ ಟ್ರ್ಯಾಪ್‌: ಮಹಿಳೆಯ ಆಮಿಷಕ್ಕೆ ಒಳಗಾಗಿ ಪಾಕಿಸ್ತಾನಕ್ಕೆ ರಕ್ಷಣಾ ರಹಸ್ಯ ಸೋರಿಕೆ ಮಾಡಿದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಬಂಧನ

ಪಾಕಿಸ್ತಾನಕ್ಕೆ ಭಾರತದ ವಾಯುಪಡೆಯ ರಕ್ಷಣಾ ರಹಸ್ಯಗಳನ್ನು ನೀಡಿರುವ ಆರೋಪದಲ್ಲಿ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅನ್ನು ಬಂಧಿಸಲಾಗಿದೆ. ಹನಿ ಟ್ರ್ಯಾಪ್‌ಗೆ ಬಲಿಯಾದ ಸೇವೆಯಲ್ಲಿದ್ದ ಅಧಿಕಾರಿ ಆರೋಪಿಯನ್ನು ಕಳೆದ ಮೇ 30ರಂದು ಬಂಧಿಸಲಾಗಿದ್ದು, ಇದೀಗ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಭಾರತದ ರಕ್ಷಣಾ ರಹಸ್ಯಗಳನ್ನು (defence secrets) ಪಾಕಿಸ್ತಾನದ (Pakistan) ನಿರ್ವಾಹಕರೊಂದಿಗೆ ಹಂಚಿಕೊಳ್ಳಲು ಮಹಿಳೆಯಿಂದ ಆಮಿಷಕ್ಕೆ (Honey Trap) ಒಳಗಾಗಿದ್ದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ (Indian Air Force Wing Commander) ಅನ್ನು ಬಂಧಿಸಲಾಗಿದೆ. ಸೇವೆಯಲ್ಲಿದ್ದ ಅಧಿಕಾರಿ ಹನಿ ಟ್ರ್ಯಾಪ್‌ಗೆ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದ ಮೇಲೆ ಕಳೆದ ಮೇ 30ರಂದು ಬಂಧಿಸಲಾಗಿತ್ತು. ಬಂಧನದ ಬಳಿಕ ಆರೋಪಿ ಜಾಮೀನಿಗೆ ಪ್ರಯತ್ನಿಸಿಲ್ಲವಾದ್ದರಿಂದ ಈ ಪ್ರಕರಣ ಈಗ ದೇಶದ ಗಮನ ಸೆಳೆದಿದೆ. ಆರೋಪಿ ವಾಯುಪಡೆ ವಿಂಗ್ ಕಮಾಂಡರ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ನಿರ್ವಾಹಕರಿಗೆ ಸೂಕ್ಷ್ಮ ರಕ್ಷಣಾ ಸಂಬಂಧಿತ ರಹಸ್ಯಗಳನ್ನು ಹಂಚಿಕೊಂಡ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ವಾಯುಪಡೆಯ ಪೈಲಟ್‌ ಶಂಕಿತ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ಆತ ಹನಿ ಟ್ರ್ಯಾಪ್‌ಗೆ ಬಲಿಯಾಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ಮೇ 30ರಂದು ಬಂಧಿಸಲಾಗಿತ್ತು.

ರಷ್ಯಾ ತೈಲ ಖರೀದಿಸುವ ಭಾರತದ ವಿರುದ್ಧ ಅಮೆರಿಕ ಕೆಂಡ; ಶೇಕಡಾ 100 ಸುಂಕ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಮಸೂದೆಗೆ ಅಂಗೀಕಾರ

ಬಂಧಿತನಾಗಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ದೊಡ್ಡ ಬೇಹುಗಾರಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದು, ಬಂಧನದ ಬಳಿಕ ಜಾಮೀನು ಕೋರಿಲ್ಲ. ಭಾರತೀಯ ವಾಯುಪಡೆಯ ಅಧಿಕಾರಿಗಳು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಂಕಿತ ಪಾಕಿಸ್ತಾನಿ ಗುಪ್ತಚರ ಅಧಿಕಾರಿಯೊಬ್ಬರು ಹನಿ ಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪದ ಬಳಿಕ ಸೇವೆಯಲ್ಲಿರುವ ಅಧಿಕಾರಿಯನ್ನು ಕಳೆದ ಮೇ 30ರಂದು ಬಂಧಿಸಿ ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳ ಪಡಿಸಲಾಗಿದೆ. ಬಳಿಕ ದೆಹಲಿ ನ್ಯಾಯಾಲಯವು ತಿಹಾರ್ ಜೈಲಿನಲ್ಲಿ ಬಂಧನದಲ್ಲಿ ಇರಿಸಿದೆ.

ಇದು ದೊಡ್ಡ ಬೇಹುಗಾರಿಕೆಯ ಜಾಲದ ಭಾಗವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಇದರ ಹಿಂದಿರುವ ಕಾರ್ಯತಂತ್ರದ ಮಿಲಿಟರಿ ಮಾಹಿತಿಯನ್ನು ಹುಡುಕಲಾಗುತ್ತಿದೆ. ಈ ಮಾಹಿತಿ ಸೋರಿಕೆಯ ಹಿಂದಿರುವ ವಿದೇಶಿ ನಿರ್ವಾಹಕರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ವಾಯುಪಡೆ ವಿಂಗ್ ಕಮಾಂಡರ್ ಅಧಿಕಾರಿಯನ್ನು ಸಂಪರ್ಕಿಸಿದ್ದರು. ಅಧಿಕಾರಿಯು ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದುದರಿಂದ ಅವರ ನಡುವೆ ಆನ್‌ಲೈನ್ ಚಾಟ್‌ಗಳು ಮತ್ತು ವಿಡಿಯೊ ಕರೆಗಳು ಆರಂಭವಾಗಿದ್ದು, ಬಳಿಕ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಯು ರಕ್ಷಣಾ ಸಂಬಂಧಿತ ಸೂಕ್ಷ್ಮ ದಾಖಲೆಗಳು ಮತ್ತು ಇತರ ಡೇಟಾವನ್ನು ಮಹಿಳೆಯೊಂದಿಗೆ ಡಿಜಿಟಲ್ ರೂಪದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ದೆಹಲಿಯಲ್ಲಿ ಭಾರಿ ಮಳೆ: ತತ್ತರಿಸಿದ ರಾಜಧಾನಿ, ಹಲವೆಡೆ ಜಲಾವೃತ; ಸಂಚಾರ ಅಸ್ತವ್ಯಸ್ತ

ಅಧಿಕಾರಿಯೊಂದಿಗೆ ಇನ್ನೋರ್ವ ಸಹೋದ್ಯೋಗಿಯು ಭಾಗಿಯಾಗಿರುವ ಶಂಕೆ ಇದೆ. ಇದನ್ನು ಪತ್ತೆ ಹಚ್ಚುವ ಸಲುವಾಗಿ ಅವರ ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಜುಲೈ 30ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲು ನ್ಯಾಯಾಲಯ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author