ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರೇಮಿಗಳ ದಿನವೇ ಪತ್ನಿಯ ಕೊಲೆ; ದರೋಡೆಯ ಕಥೆ ಕಟ್ಟಿದ ಆರೋಪಿ ಪತಿ ಸಿಕ್ಕಿ ಬಿದ್ದಿದ್ದು ಹೇಗೆ?

Husband killed wife: ಪ್ರೇಮಿಗಳ ದಿನವೇ ನೆತ್ತರು ಹರಿದಿದೆ. ಪ್ರೇಮಿಗಳ ದಿನದಂದು ಭೋಜನ ಮುಗಿದ ಬಳಿಕ ಪತಿಯೇ ತನ್ನ ಪತ್ನಿಯನ್ನು ಹತ್ಯೆಗೈದು, ದರೋಡೆಯ ಕಥೆ ಕಟ್ಟಿದ್ದಾನೆ. ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ದುರ್ದೈವಿಯನ್ನು ಬ್ಯಾಂಕ್ ಉದ್ಯೋಗಿ ಮಹಾಕ್ ಎಂದು ಗುರುತಿಸಲಾಗಿದೆ.

ಅನ್ಶುಲ್ ಮತ್ತು ಮಹಾಕ್ ದಂಪತಿ

ಚಂಢೀಗಡ, ಫೆ. 17: ಪ್ರೇಮಿಗಳ ದಿನವನ್ನು ಅದ್ಧೂರಿಯಿಂದ ಆಚರಿಸಲಾಗಿದೆ. ಪರಸ್ಪರ ಉಡುಗೊರೆಗಳನ್ನು ನೀಡುತ್ತ ಸಂಭ್ರಮಿಸಿದ್ದಾರೆ. ಆದರೆ ಇಲ್ಲೊಂದೆಡೆ ಪ್ರೇಮಿಗಳ ದಿನವೇ ನೆತ್ತರು ಹರಿದಿದೆ. ಪ್ರೇಮಿಗಳ ದಿನದಂದು ಖುಷಿ-ಖುಷಿಯಾಗಿ ಭೋಜನ ಸೇವಿಸಿದ ಬಳಿಕ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಈ ಆಘಾತಕಾರಿ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ. ತನ್ನ ಪತ್ನಿಯೊಂದಿಗೆ ಪ್ರೇಮಿಗಳ ದಿನದ ಸಂಜೆಯನ್ನು ಕೊಂಡಾಡಿದ ಪಾಪಿ ಪತಿ ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ (Husband killed wife). ನಂತರ ದರೋಡೆಯ ಬಗ್ಗೆ ಸುಳ್ಳು ಕಥೆ ಹೇಳಿ ಪೊಲೀಸರ ದಿಕ್ಕು ತಪ್ಪಿಸಲು ಪ್ರಯತ್ನಿಸಿ, ಸಿಕ್ಕಿ ಬಿದ್ದಿದ್ದಾನೆ.

ಕೊಲೆಯಾದ ದುರ್ದೈವಿಯನ್ನು ಬ್ಯಾಂಕ್ ಉದ್ಯೋಗಿ ಮಹಾಕ್ ಎಂದು ಗುರುತಿಸಲಾಗಿದೆ. ಹರಿಯಾಣದ ಬಹದ್ದೂರ್‌ಗಢದಲ್ಲಿ ಈ ಘಟನೆ ನಡೆದಿದೆ. ಮಹಾಕ್ ಹತ್ಯೆಯ ಹಿಂದಿನ ನಿಗೂಢತೆಯನ್ನು ಝಜ್ಜರ್ ಪೊಲೀಸರು ಕೇವಲ 18 ಗಂಟೆಗಳಲ್ಲಿ ಭೇದಿಸಿದರು. ಮೊದಲು ದರೋಡೆ ಪ್ರಕರಣ ಎನಿಸಿಕೊಂಡಿದ್ದ ಪ್ರಕರಣವು ಕೊನೆಗೆ ಪತಿಯೇ ಕೊಂದಿದ್ದಾನೆ ಎಂಬುದು ಬಯಲಾಗಿದೆ.

ಪತ್ನಿ, ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಯೋಧ

ಭಾನುವಾರ (ಫೆಬ್ರವರಿ15) ರಾತ್ರಿ 11 ಗಂಟೆ ಸುಮಾರಿಗೆ ಗುರುಗ್ರಾಮದಲ್ಲಿ ಚಾರ್ಟೆಡ್ ಅಕೌಂಟೆಟ್ ಆಗಿರುವ ಅನ್ಶುಲ್ ಪೊಲೀಸರಿಗೆ ಕರೆ ಮಾಡಿದ್ದಾನೆ. ಅಪರಿಚಿತ ದಾಳಿಕೋರರು ತಮ್ಮ ಮನೆಯನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ತಮ್ಮ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದರು. ಆತನ ಹೇಳಿಕೆಯಲ್ಲಿನ ವ್ಯತ್ಯಾಸಗಳನ್ನು ಪೊಲೀಸರು ಗಮನಿಸಿದ್ದಾರೆ. ಅನ್ಶುಲ್ ತನ್ನ ಕಥೆಯನ್ನು ಬದಲಾಯಿಸುತ್ತಲೇ ಇದ್ದ. ದಾಳಿಕೋರರ ಬಗ್ಗೆ ಅವನಿಗೆ ವಿವರಿಸಲು ಸಾಧ್ಯವಾಗಲಿಲ್ಲ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.

ಪೊಲೀಸರು ತಮ್ಮ ಶೈಲಿಯಲ್ಲಿ ಪ್ರಶ್ನಿಸಿದಾಗ, ಅನ್ಶುಲ್ ಕೊನೆಗೆ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಗುರುಗ್ರಾಮದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಮಹಾಕ್‌ಳ ಬಗ್ಗೆ ಅವನು ಸಾಕಷ್ಟು ಅನುಮಾನಗೊಂಡಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಅನುಮಾನವೆಂಬ ಪೆಂಡಭೂತ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ತಮ್ಮ ಪುತ್ರಿಯನ್ನು ಅಳಿಯನೇ ಕೊಂದಿದ್ದಾನೆ ಎಂಬುದಾಗಿ ಮಹಾಕ್ ತಂದೆ ಕೃಷ್ಣ ಕಥುರಿಯಾ ಕೂಡ ಮೊದಲೇ ಅನುಮಾನ ವ್ಯಕ್ತಪಡಿಸಿದ್ದರು.

ಪತ್ನಿಯನ್ನು ಕೊಲ್ಲುವ ವೇಳೆ, ಯಾವುದೇ ಬೆರಳಚ್ಚುಗಳ ಗುರುತು ಇರಬಾರದೆಂದು ಪತಿ ಅನ್ಶುಲ್ ಗ್ಲೌಸ್‌ ಧರಿಸಿದ್ದ. ಮೊದಲು ಪತ್ನಿ ಮಹಾಕ್‌ಳನ್ನು ಕತ್ತು ಹಿಸುಕಿ ಕೊಂದು ನಂತರ ಕತ್ತರಿ ಬಳಸಿ ಆಕೆಯ ಗಂಟಲು ಸೀಳಿದ್ದ. ಹಿಸಾರ್ ನಿವಾಸಿಯಾಗಿರುವ ಚಾರ್ಟೆಡ್ ಅಕೌಂಟೆಟ್ ಅನ್ಶುಲ್ ಮತ್ತು ಮಹಾಕ್ ಇಬ್ಬರೂ ಕಳೆದ ವರ್ಷ ಸೆಪ್ಟೆಂಬರ್ 25ರಂದು ವಿವಾಹವಾಗಿದ್ದರು.