ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Love Jihad: ಹುಬ್ಬಳ್ಳಿ ಲವ್ ಜಿಹಾದ್ ಕೇಸ್ : ಆರೋಪಿ ಸಮೀರ್, ಸಹೋದರಿ ಸೇರಿ 6 ಜನರ ವಿರುದ್ಧ ದೂರು

ಯುವತಿಯ ದೂರಿನ ಆಧಾರದ ಮೇಲೆ ಜಿಮ್‌ ಟ್ರೈನರ್‌, ಪ್ರಮುಖ ಆರೋಪಿ ಸಮೀರ್ ವಿರುದ್ಧ ಬಿಎನ್‌ಎಸ್ 64(1), 351, 123 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಐವರನ್ನೂ ಹೆಸರಿಸಲಾಗಿದೆ. ಯುವತಿ ದೂರಿನ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಸಮೀರ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಂತ್ರಸ್ತೆ ಮತ್ತು ಸಮೀರ್‌ ಮುಲ್ಲಾ

ಹುಬ್ಬಳ್ಳಿ, ಏ. 04 : ಲವ್ ಜಿಹಾದ್ (Love Jihad) ಪ್ರಕರಣದಲ್ಲಿ ಹುಬ್ಬಳ್ಳಿಯ (Hubballai news) ಜಿಮ್ ಟ್ರೈನರ್‌ ಸಮೀರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಮೀರ್ ವಿರುದ್ಧ ಸಂತ್ರಸ್ತೆ ಇದೀಗ ಲೈಂಗಿಕ ದೌರ್ಜನ್ಯ (Harassment) ಕೇಸ್ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿಯ ತಾಯಿ ಶುಕ್ರವಾರ ರಾತ್ರಿ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಸಮೀರ್ ಸಹೋದರಿ ತೈಸಿನ್ ಸೇರಿದಂತೆ 6 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ನಾನು ಜಿಮ್‌ಗೆ ಹೋಗುವಾಗ ಸಮೀರ್ ಪರಿಚಯವಾಗಿದ್ದ. 2025ರ ಆ.16ರಂದು ನನ್ನ ಮನೆಗೆ ಕರೆಸಿಕೊಂಡಿದ್ದ. ಆ ವೇಳೆ ಜ್ಯೂಸ್‌ನಲ್ಲಿ ಮತ್ತು ಬರುವ ಪದಾರ್ಥ ಹಾಕಿ ನನಗೆ ಕುಡಿಸಿದ್ದ. ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕಿದ್ದ. ಇದಾದ ಬಳಿಕ ಬೆದರಿಕೆ ಹಾಕಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಸದ್ಯ ಯುವತಿಯ ದೂರಿನ ಆಧಾರದ ಮೇಲೆ ಸಮೀರ್ ವಿರುದ್ಧ ಬಿಎನ್‌ಎಸ್ 64(1), 351, 123 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ದೂರಿನ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಸಮೀರ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Hubballi news: ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಆರೋಪ, ಸಮೀರ್ ಪೊಲೀಸ್​ ವಶಕ್ಕೆ‌, ಯುವತಿ ಮನೆಗೆ ನುಗ್ಗಿ ಯುವಕನ ಕುಟುಂಬಸ್ಥರಿಂದ ಗಲಾಟೆ

ಲವ್ ಜಿಹಾದ್ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಮೀರ್ ಬಂಡವಾಳ ಮತ್ತಷ್ಟು ಬಯಲಾಗಿದೆ. ಬೇರೆ ಬೇರೆ ಯುವತಿಯರ ಜೊತೆಗೆ ಸಮೀರ್ ಇರುವ ಪೋಟೋಗಳು ವೈರಲ್ ಆಗಿದೆ. ಜೀಮ್‌ಗೆ ಬರುವ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಪೊಲೀಸರು ಸಮೀರ್ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ವಿಚಾರಗಳು ಬಯಲಾಗಿವೆ. ಬ್ರೌಸಿಂಗ್ ಹಿಸ್ಟರಿಯಲ್ಲಿ ಅಸಭ್ಯ ಮತ್ತು ನಿಷೇಧಿತ ವೆಬ್ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ

ಹರೀಶ್‌ ಕೇರ

View all posts by this author