Hubballi news: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪ, ಸಮೀರ್ ಪೊಲೀಸ್ ವಶಕ್ಕೆ, ಯುವತಿ ಮನೆಗೆ ನುಗ್ಗಿ ಯುವಕನ ಕುಟುಂಬಸ್ಥರಿಂದ ಗಲಾಟೆ
ಯುವತಿ ಮತ್ತು ಸಮೀರ್ ನಡುವೆ ಜಿಮ್‌ನಲ್ಲಿ ಪರಿಚಯವಾಗಿತ್ತು. ಹಿಂದೂ ಕಾರ್ಯಕರ್ತರು ಯುವಕನನ್ನು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದು, ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಗಲಾಟೆ -
ಹುಬ್ಬಳ್ಳಿ, ಏ.03: ನಗರದಲ್ಲಿ (hubballi) ಲವ್ ಜಿಹಾದ್ (love jihad) ಆರೋಪದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಮ್‌ನಲ್ಲಿ ಪರಿಚಯವಾಗಿದ್ದ ಯುವಕ– ಯುವತಿಯ ನಡುವಿನ ಸ್ನೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಯುವಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸಮೀರ್ ಕುಟುಂಬದವರು ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ.
ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಎಂಬ ಯುವಕನನ್ನು ಕಾರ್ಯಕರ್ತರು ಹಿಡಿದು, ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಮತ್ತು ಸಮೀರ್ ನಡುವೆ ಜಿಮ್‌ನಲ್ಲಿ ಪರಿಚಯವಾಗಿತ್ತು. ಹಿಂದೂ ಕಾರ್ಯಕರ್ತರು ಯುವಕನನ್ನು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದು, ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ. ಸಮೀರ್ ಅನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರೆಂಬ ಮಾಹಿತಿ ಲಭ್ಯವಾಗಿದೆ. ಯುವತಿಯ ಮನೆಯವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ದೂರೂ ಕೇಳಿಬಂದಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗುತ್ತಿವೆ ಎಂಬ ಆರೋಪವನ್ನು ಕೆಲ ಸಂಘಟನೆಗಳು ವ್ಯಕ್ತಪಡಿಸಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವಾಸ್ತವಾಂಶ ತಿಳಿದುಬರುವವರೆಗೆ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Love Jihad: ಮೂಡಿಗೆರೆ ಲವ್ ಜಿಹಾದ್, ಹಿಂದೂ ಹುಡುಗಿಯಿಂದ ಮನೆಯಲ್ಲೇ ನಮಾಜ್!
ಪೊಲೀಸ್ ಠಾಣೆಗೆ ಮುತ್ತಿಗೆ
ಅನ್ಯಧರ್ಮದ ಯುವಕ ಸಮೀರ್‌ಗೆ ತಕ್ಕ ಶಿಕ್ಷೆ ಆಗಬೇಕು, ಅವನ ಜಿಮ್ ಬಂದ್ ಮಾಡಬೇಕೆಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಒತ್ತಾಯ ಮಾಡಿದ್ದು, ಈತ ಜಿಮ್‌ನಲ್ಲಿ ಹಿಂದೂ ಹುಡುಗಿಯನ್ನು ಪರಿಚಯ ಮಾಡಿಕೊಂಡು ಲವ್ ಜಿಹಾದ್ ಮಾಡ್ತಿದ್ದ ಎಂದು ಆರೋಪಿಸಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಬೇಟಿ ನೀಡಿದ್ದಾರೆ. ನಂತರ ಯುವಕ ಮತ್ತು ಯುವತಿ ಮನೆಯವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯುವತಿ ಮನೆಯವರು ಯುವಕನ ಮನೆಗೆ ಹೋಗಿದ್ದಾರೆ. ಯುವಕನನ್ನು ಕರೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ತಮ್ಮ ಮನೆ ಯುವತಿ ಜೊತೆ ಒಡಾಡ್ತಿದ್ದಿಯಾ ಅಂತ ಗಲಾಟೆ ಮಾಡಿದ್ದಾರೆ. ಮತ್ತೊಂದಡೆ ಯುವಕನ ಮನೆಯವರು ಯುವತಿ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಗಲಾಟೆ ತೀವ್ರ ಸ್ವರೂಪಕ್ಕೆ ಹೋಗಿದ್ದು ಹಲ್ಲೆಗಳಾದ ಹಿನ್ನೆಲೆ ಎರಡು ಕಡೆಯವರು ಕಿಮ್ಸ್ ಗೆ ದಾಖಲಾಗಿದ್ದಾರೆ. ಎರಡೂ ಕಡೆಯವರು ಕೇಸ್ ನೀಡಿಲ್ಲ. ಏನೇ ಇದ್ದರೂ ಪೊಲಿಸರಿಗೆ ದೂರು ನೀಡಬೇಕು ಎಂದಿದ್ದಾರೆ.
Love Jihad: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ಡ್ ವಿವಾಹ, ಲವ್ ಜಿಹಾದ್ ಆರೋಪ, ಹೆತ್ತವರ ದೂರು