ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತಿಯನ್ನು ಹೊರಗೆ ಕೂರಿಸಿ, ಮಾದಕ ದ್ರವ್ಯ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ; ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಮತ್ತೊಂದು ಕಾಮಕಾಂಡ ಬಯಲು

Crime News: ಮಹಾರಾಷ್ಟ್ರದ ನಾಸಿಕ್‌ನ ಪೊಲೀಸರು 67 ವರ್ಷದ ಸ್ವಯಂ ಘೋಷಿತ ಜ್ಯೋತಿಷಿ-ದೇವಮಾನವ ಅಶೋಕ್ ಖರತ್ ವಿರುದ್ಧ ಅತ್ಯಾಚಾರ ಸೇರಿ ಹಲವು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. 10 ಪ್ರಕರಣಗಳ ಪೈಕಿ 8 ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಗೆ ಸಂಬಂಧಿಸಿವೆ. 2 ವಂಚನೆಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶೋಕ್ ಖರತ್ (ಸಂಗ್ರಹ ಚಿತ್ರ)

ಮುಂಬೈ, ಮಾ. 30: ಮಹಾರಾಷ್ಟ್ರದ ನಾಸಿಕ್ ಪೊಲೀಸರು (Nasik Police) 67 ವರ್ಷದ ಸ್ವಯಂ ಘೋಷಿತ ಜ್ಯೋತಿಷಿ-ದೇವಮಾನವ ಅಶೋಕ್ ಖರತ್ ವಿರುದ್ಧ ಅತ್ಯಾಚಾರ ದೂರು ಸೇರಿದಂತೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯ, ವಂಚನೆ ಮತ್ತು ಸುಲಿಗೆ ಸೇರಿ 10 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).

10 ಪ್ರಕರಣಗಳಲ್ಲಿ ಎಂಟು ಪ್ರಕರಣಗಳು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಗೆ ಸಂಬಂಧಿಸಿವೆ. ಎರಡು ವಂಚನೆಗೆ ಸಂಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. 2024ರ ಆಗಸ್ಟ್ ಮತ್ತು ಡಿಸೆಂಬರ್ ನಡುವಿನ ಐದು ತಿಂಗಳ ಅವಧಿಯಲ್ಲಿ ಖಾರತ್ ನಾಲ್ಕು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ವಿವಾಹಿತ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಸಿಕ್‌ನ ಸರ್ಕಾರವಾಡಾ ಪೊಲೀಸರು ಮತ್ತೆ ಹೊಸ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಮಹಿಳೆ ತನ್ನ ಪತಿಯೊಂದಿಗೆ ಕೆನಡಾ ಕಾರ್ನರ್‌ನಲ್ಲಿರುವ ಖರತ್‌ನ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಖರತ್ ಪತಿಯನ್ನು ತನ್ನ ಕೊಠಡಿಯ ಹೊರಗೆ ಕಾಯುವಂತೆ ಹೇಳಿದ್ದ ಎನ್ನಲಾಗಿದೆ. ನಂತರ ಆತ ಮಹಿಳೆಗೆ ಮಾದಕ ದ್ರವ್ಯ ನೀಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಾರ್ಚ್ 18ರಂದು ಖರತ್ ಬಂಧನದ ನಂತರ ದೂರುದಾರರು ಪೊಲೀಸರನ್ನು ಸಂಪರ್ಕಿಸಿ, ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ಟ್ರೇಡಿಂಗ್‌ ಗೀಳು; ಸೈಬರ್‌ ವಂಚನೆಗೀಡಾಗಿ 1.28 ಕೋಟಿ ರೂಪಾಯಿ ಕಳೆದುಕೊಂಡ ಭೂಪ!

ಪ್ರತ್ಯೇಕ ಪ್ರಕರಣವೊಂದರಲ್ಲಿ ಅಹಲ್ಯಾನಗರ ಜಿಲ್ಲೆಯ ನೆವಾಸದ ಬಟ್ಟೆ ವ್ಯಾಪಾರಿ ರಾಜೇಂದ್ರ ನಾನಾಸಾಹೇಬ್ ಭಾಗವತ್ (39) ಕೂಡ ವಂಚನೆ ಆರೋಪ ಮಾಡಿದ್ದಾರೆ. ಖರತ್ ಮೂರು ವರ್ಷಗಳಲ್ಲಿ ತನ್ನ ವ್ಯವಹಾರವನ್ನು ಸುಧಾರಿಸುವ ನೆಪದಲ್ಲಿ 2.62 ಲಕ್ಷ ರುಪಾಯಿ ವಂಚಿಸಿದ್ದಾನೆ ಎಂದು ದೂರು ಸಲ್ಲಿಸಿದ್ದಾರೆ.

ಖರತ್ ತನಗೆ ಹಳದಿ ನೀಲಮಣಿ ಮತ್ತು ವಜ್ರವಿರುವ ಎರಡು ಉಂಗುರಗಳನ್ನು ನೀಡಿ ಧರಿಸಲು ಸಲಹೆ ನೀಡಿದ್ದ. ಈ ವೇಳೆ ಖರತ್‌ಗೆ ಒಟ್ಟು 20 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾಗಿಯೂ ಹೇಳಿದ್ದಾರೆ. ಆದರೆ ಖರತ್ ಬಂಧನದ ನಂತರ, ಭಾಗವತ್ ಪರೀಕ್ಷಿಸಿದಾಗ ರತ್ನದ ಕಲ್ಲುಗಳು ನಕಲಿ ಮತ್ತು ಉಂಗುರಗಳು ಚಿನ್ನದಿಂದಲ್ಲ, ತಾಮ್ರದಿಂದ ಮಾಡಲ್ಪಟ್ಟಿದೆ ಎಂಬುದು ಗೊತ್ತಾಗಿದೆ.ಫಡ್ನವೀಸ್ ನೇತತೃತ್ವದ ಮಹಾರಾಷ್ಟ್ರ ಸರ್ಕಾರ ಖರತ್ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಖರತ್‌ ಹಿನ್ನೆಲೆ

10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಗಣಿತದಲ್ಲಿ ಅನುತ್ತೀರ್ಣನಾದ ಖರತ್‌ ಮಹಾರಾಷ್ಟ್ರದ ಉನ್ನತ ರಾಜಕಾರಣಿಗಳು ಸೇರಿ ಸಾವಿರಾರು ಜನರಿಗೆ ತಮ್ಮ ವ್ಯವಹಾರ, ವೈಯಕ್ತಿಕ ಮತ್ತು ರಾಜಕೀಯ ವ್ಯವಹಾರಗಳನ್ನು ನಡೆಸಲು ಸಲಹೆ ನೀಡಿ ಸಂಖ್ಯಾಶಾಸ್ತ್ರಜ್ಞ ಎನಿಸಿಕೊಂಡರು.

ಸಾಧು ವೇಷ ಧರಿಸಿ ಅಶ್ಲೀಲ ವರ್ತನೆ; ಮಹಿಳೆಯರಿಗೆ ಕಿರುಕುಳ ನೀಡಿದ ವ್ಯಕ್ತಿಗೆ ತಕ್ಕ ಶಾಸ್ತಿ

ನಾಸಿಕ್ ಜಿಲ್ಲಾಡಳಿತವು ಖರತ್ ಅವರ ಬಂದೂಕು ಪರವಾನಗಿಯನ್ನು ಅಮಾನತುಗೊಳಿಸಿದೆ. ಅದನ್ನು ಏಕೆ ರದ್ದುಗೊಳಿಸಬಾರದು ಎಂದು ವಿವರಣೆ ಕೋರಿ ಶೋಕಾಸ್ ನೊಟೀಸ್ ನೀಡಿದೆ. ನೊಟೀಸ್ ಅನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಹೇಳಿದ್ದಾರೆ.

ಖರತ್ ಅವರ ತೋಟದ ಮನೆಯಲ್ಲಿ ಐದು ಬಳಸಿದ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡ ನಂತರ ಆಡಳಿತವು ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದೂಕನ್ನು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದಾಖಲೆಗಳ ಪ್ರಕಾರ ಖರತ್‌ಗೆ ಮೊದಲು 2014ರಲ್ಲಿ ಬಂದೂಕು ಪರವಾನಗಿಯನ್ನು ನೀಡಲಾಗಿತ್ತು. ಅದನ್ನು 2024ರಲ್ಲಿ ನವೀಕರಿಸಲಾಯಿತು.