ಹೈದರಾಬಾದ್: ಜೂನ್ 2023 ರಲ್ಲಿ ಮಹತ್ವಾಕಾಂಕ್ಷಿ ದೂರದರ್ಶನ ನಟಿಯ ಕೊಲೆ ಪ್ರಕರಣದಲ್ಲಿ 36 ವರ್ಷದ ಅರ್ಚಕನಿಗೆ (Apsara Murder Case) ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯವು ಅರ್ಚಕನನ್ನು ದೋಷಿ ಎಂದು ಘೋಷಿಸಿದೆ. ಆರೋಪಿಯನ್ನು ದೇವಸ್ಥಾನದ ಅರ್ಚಕ ಸಾಯಿ ಕೃಷ್ಣ ಎಂದು ಹೇಳಲಾಗಿದೆ. 30 ವರ್ಷದ ಕಿರುತೆರೆ ನಟಿ, ಈಗಾಗಲೇ ಮದುವೆಯಾಗಿದ್ದ ಸಾಯಿ ಕೃಷ್ಣ ಮೇಲೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಹಾಗಾಗಿ ಆತ ಆಕೆಯನ್ನು ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ.
ರಂಗಾ ರೆಡ್ಡಿ ನ್ಯಾಯಾಲಯವು ತೀರ್ಪು ಪ್ರಕಟ ಮಾಡಿದ್ದು, ಸಾಕ್ಷ್ಯ ನಾಶಕ್ಕಾಗಿ 10 ಸಾವಿರ ರೂ ದಂಡವನ್ನು ವಿಧಿಸಿದೆ. ಮೃತ ಯುವತಿ ಅಪ್ಸರಾ ಕಿರುತೆರೆಯಲ್ಲಿ ನಟಿಸುತ್ತಿದ್ದಳು. ಅಪ್ಸರಾ ನಿತ್ಯ ಭೇಟಿ ನೀಡುತ್ತಿದ್ದ ದೇವಸ್ಥಾನದಲ್ಲಿ ಸಾಯಿ ಕೃಷ್ಣ ಅರ್ಚಕನಾಗಿದ್ದ. ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಈಗಾಗಲೇ ಮದುವೆಯಾಗಿದ್ದ ಸಾಯಿ ಕೃಷ್ಣ ಮೇಲೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಇದರಿಂದ ಆತ ಆಕೆಯನ್ನು ಕೊಲೆ ಮಾಡಿದ್ದ. 2023 ರ ಜೂನ್‌ನಲ್ಲಿ ಅಪ್ಸರಾಳನ್ನು ಯಾತ್ರಾ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ನಿರ್ಜನ ಪ್ರದೇಶದಲ್ಲಿ ಆಕೆಯ ಕೊಲೆ ಮಾಡಿದ್ದ. ಆಕೆಯ ಗುರುತು ಸಿಗದಂತೆ ಮಾಡಲು ಆಕೆಯ ತಲೆಯ ಮೇಲೆ ಕಲ್ಲೆತ್ತಿ ಹಾಕಿದ್ದ.
ಈ ಸುದ್ದಿಯನ್ನೂ ಓದಿ: UP Horror: ಮದುವೆಯಾದ ಎರಡೇ ವಾರಕ್ಕೆ ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆಗೆ ಸುಪಾರಿ; ಖತರ್ನಾಕ್ ಜೋಡಿ ಖಾಕಿ ಬಲೆಗೆ
ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ತನ್ನ ಮನೆಗೆ ತೆಗೆದು ಕೊಂಡು ಹೋಗಿ ಅಲ್ಲಿಯೇ ಹತ್ತಿರದಲ್ಲಿ ಬಿಸಾಕಿದ್ದ. ನಂತರ, ಸಾಯಿ ಕೃಷ್ಣ ಶವವನ್ನು ತನ್ನ ಮನೆಯ ಸಮೀಪದ ಸರ್ಕಾರಿ ಕಚೇರಿಯ ಬಳಿಯ ಮ್ಯಾನ್‌ಹೋಲ್‌ಗೆ ಎಸೆದಿದ್ದ. ಆ ಪ್ರದೇಶವನ್ನು ಮರಳಿನಿಂದ ತುಂಬಿಸಿ, ಸಿಮೆಂಟ್‌ನಿಂದ ಮುಚ್ಚಿದನು. ಆದಾಗ್ಯೂ, ಕೊಳೆಯುತ್ತಿದ್ದ ಮೃತ ದೇಹದಿಂದ ವಾಸನೆ ಇನ್ನೂ ಬರುತ್ತಿತ್ತು. ವಾಸನೆಯನ್ನು ಹೋಗಲಾಡಿಸಲು ಸಾಯಿ ಕೃಷ್ಣ ಕೆಲವು ಕಾರ್ಮಿಕರನ್ನು ಕರೆಸಿ ಮ್ಯಾನ್‌ಹೋಲ್ ಅನ್ನು ಕಾಂಕ್ರೀಟ್‌ನಿಂದ ಮುಚ್ಚಿ ಮುಚ್ಚಿಸಿದ್ದ. ಪೊಲೀಸರು ತನಿಖೆ ನಡೆಸಿದಾಗ ಈತನ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆಯಲ್ಲಿ ಅಪ್ಸರಾ ಮದುವೆಗೆ ಒತ್ತಡ ಹೇರುತ್ತಿದ್ದರಿಂದ ಸಾಯಿ ಕೃಷ್ಣ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.