ಭೋಪಾಲ್: ಸಚಿನ್ ಎಂಬ ಹಿಂದೂ ಹೆಸರಿಟ್ಟುಕೊಂಡು ಹಿಂದೂ (Hindu) ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಗರ್ಭಿಣಿಯರನ್ನಾಗಿ ಮಾಡುತ್ತಿದ್ದ ಶಾದ್ ಸಿದ್ದಿಖಿ (Love Jihad) ಎಂಬ ಮುಸ್ಲಿಂ ಯುವಕನ ಮೇಲೆ (Physical Assault) ಯುವತಿಯೊಬ್ಬಳು ದೂರು ನೀಡಿದ್ದಾಳೆ. ಈತ ಮಚಲಿ ಗ್ಯಾಂಗ್ನ ಸದಸ್ಯನಾಗಿದ್ದು, ಹಿಂದೂ ಹುಡುಗಿಯರನ್ನು ಗರ್ಭಿಣಿಯರನ್ನಾಗಿ ಮಾಡುವುದೇ ತನ್ನ ಪ್ಯಾಷನ್ ಎಂದು ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮುಸ್ಲಿಂ ಯುವಕ ಸಚಿನ್ ಎಂಬ ಹಿಂದೂ ಹೆಸರು ಇಟ್ಟುಕೊಂಡು 26 ವರ್ಷದ ಹಿಂದೂ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದು ದೂರು ನೀಡಲಾಗಿದೆ.
ಘಟನೆಯೇನು?
ಯುವತಿ ಎರಡು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಭೋಪಾಲ್‌ಗೆ ಬಂದಿದ್ದಳು. ಆಕೆಗೆ ಕೆಲಸ ಹುಡುಕುವ ನೆಪದಲ್ಲಿ ಶಾದ್ ಸಿದ್ದಿಖಿ ತನ್ನನ್ನು ಸಚಿನ್ ಎಂದು ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದ. ಆಕೆ ಇಂದೋರ್‌ಗೆ ಬಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಈ ಅವಧಿಯಲ್ಲಿ ಸಿದ್ದಿಖಿ ಯುವತಿ ಜೊತೆ ಪ್ರೀತಿ ನಾಟಕವಾಡಿದ್ದ. ಜನವರಿ 3ರಂದು ಆತ ಯುವತಿ ಇದ್ದ ಮನೆಗೆ ಹೋಗಿ ಮತ್ತು ಬರುವ ಔಷಧಿ ನೀಡಿದ್ದ. ನಂತರ ಆಕೆಯ ಮೇಲೆ ಸಿದ್ದಿಖಿ ಅತ್ಯಾಚಾರವೆಸಗಿ ವಿಡಿಯೋ ರೆಕಾರ್ಡ್ ಮಾಡಿದ್ದ. ಮಹಿಳೆ ಇದನ್ನು ವಿರೋಧಿಸಿದಾಗ ಶೀಘ್ರದಲ್ಲೇ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದ.
ಕೆಲವು ದಿನಗಳ ಬಳಿಕ ಆತ ಮುಸ್ಲಿಂ ಎನ್ನುವುದು ಆಕೆಯ ಗಮನಕ್ಕೆ ಬಂದಿತ್ತು. ಆಕೆ ಸಿದ್ದೀಕಿಯನ್ನು ಪ್ರಶ್ನಿಸಿದಾಗ ಅವನು ತನ್ನ ನಿಜವಾದ ಹೆಸರನ್ನು ಹೇಳಿದ್ದಾನೆ. ನಾವು ಒಟ್ಟಿಗೆ ವಾಸಿಸಬೇಕಾದರೆ, ನೀನು ಮತಾಂತರಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾನೆ. ಆಕೆಯನ್ನು ಸಿದ್ದಿಖಿ ಪದೇ ಪದೇ ಬೆದರಿಸುತ್ತಿದ್ದ. ಬುರ್ಖಾ ಹಾಕುವಂತೆಯೂ ಒತ್ತಡ ಹೇರುತ್ತಿದ್ದ. ಅಕ್ಟೋಬರ್ 1, 2025 ರಂದು ಸಿದ್ದಿಕಿ ಮತ್ತೆ ಇಂದೋರ್‌ಗೆ ಬಂದು ಸಂತ್ರಸ್ತೆಯನ್ನು ಭೇಟಿಯಾದರು. ಅವರು ಮತ್ತೊಮ್ಮೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಆಕೆ ಒಪ್ಪದಿದ್ದಾಗ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಈ ಸುದ್ದಿಯನ್ನೂ ಓದಿ: Crime News: ಅತ್ಯಾಚಾರದ ಆರೋಪ ಹೊರಿಸಿದ ಗೆಳತಿ- ಮನನೊಂದು ಯುವಕ ಆತ್ಮಹತ್ಯೆಗೆ ಶರಣು
ನಿರಂತರ ಹಿಂಸೆಯಿಂದ ಕಿರುಕುಳಕ್ಕೊಳಗಾದ ಸಂತ್ರಸ್ತೆ, ಕರ್ಣಿ ಸೇನಾ ಕಚೇರಿಗೆ ತಲುಪಿ, ರಾಜ್ಯ ಅಧ್ಯಕ್ಷ ಶೈಲೇಂದ್ರ ಸಿಂಗ್ ಅವರಿಗೆ ಇಡೀ ಘಟನೆಯನ್ನು ವಿವರಿಸಿದ್ದಾಳೆ. ನಂತರ ಆಕೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾಳೆ. ಹೆಚ್ಚಿನ ತನಿಖೆ ನಡೆಯುತ್ತಿದೆ.