Physical abuse: ಆರ್ಮಿ ಸ್ಕೂಲ್‌ನಲ್ಲಿ ಮಗಳಿಗೆ ಸೀಟ್ ಕೊಡಿಸುವ ನೆಪದಲ್ಲಿ ಆಟೋ ಚಾಲಕಿ ಮೇಲೆ ಗ್ಯಾಂಗ್ ರೇಪ್
Physical abuse: ಉತ್ತರ ಪ್ರದೇಶದ ಆಗ್ರಾದಲ್ಲಿ ಆಟೋ ಚಾಲನೆ ಮಾಡುತ್ತಿದ್ದ 36 ವರ್ಷದ ಮಹಿಳೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಆರೋಪಿಗಳು ತಾವು "ಸೇನಾ ಯೋಧರು" ಎಂದು ಬಿಂಬಿಸಿ, ಮಹಿಳೆಯ ಮಗಳಿಗೆ ಮಿಲಿಟರಿ ಶಾಲೆಯಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಆಗ್ರಾ: ಉತ್ತರ ಪ್ರದೇಶ(Uttar Pradesh)ದ ಆಗ್ರಾ (Agra)ದಲ್ಲಿ ಆಟೋ ಚಾಲನೆ ಮಾಡುತ್ತಿದ್ದ 36 ವರ್ಷದ ಮಹಿಳೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ(physical abused) ವೆಸಗಿದ ಆರೋಪದಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ತಾವು " ಯೋಧರು"(Army jawans)ಎಂದು ಬಿಂಬಿಸಿ, ಮಹಿಳೆಯ ಮಗಳಿಗೆ ಮಿಲಿಟರಿ ಶಾಲೆಯಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೂರಿನ ಪ್ರಕಾರ, ಆರೋಪಿಗಳು ಆಕೆಯ ಆಟೋರಿಕ್ಷಾದಲ್ಲಿ ಪ್ರಯಾಣಿಸುವಾಗ "ಸೇನಾ ಯೋಧರು" ಎಂದು ಪರಿಚಯಿಸಿಕೊಂಡಿದ್ದರು. ಮಗಳ ಅಡ್ಮಿಷನ್‌ಗೆ ಸಹಾಯ ಮಾಡುವುದಾಗಿ ಹೇಳಿ, ಆಕೆಯ ಫೋನ್ ನಂಬರ್ ಪಡೆದುಕೊಂಡಿದ್ದರು. ನಂತರ ಒಂದು ಹೋಟೆಲ್‌ಗೆ ಬರಲು ಆರೋಪಿಗಳು ಆಕೆಗೆ ಸೂಚಿಸಿದ್ದರು. ಅಲ್ಲಿಗೆ ತೆರಳಿದಾಗ, ಆಕೆಯನ್ನು ಗನ್‌ಪಾಯಿಂಟ್‌ನಲ್ಲಿ ಹೋಟೆಲ್ ಕೊಠಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ ಪೊಲೀಸರಿಗೆ ತಿಳಿಸಿದರೆ ಮಗಳಿಗೆ ಹಾನಿಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆಗ್ರಾದ ಎಸಿಪಿ ಹೇಮಂತ್ ಕುಮಾರ್ ಮಾಹಿತಿ ನೀಡಿದ್ದು, "ಮಹಿಳೆಯ ದೂರಿನ ಆಧಾರದ ಮೇಲೆ ರಕಾಬ್‌ಗಂಜ್ ಠಾಣೆಯಲ್ಲಿ ಶುಕ್ರವಾರ ಬಿಎನ್‌ಎಸ್ ಸೆಕ್ಷನ್ 70 (1) (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ವೈದ್ಯಕೀಯ ವರದಿಯಿಂದ ಕೆಲವು ಸುಳಿವುಗಳು ಸಿಕ್ಕಿವೆ. ಆರೋಪಿಗಳನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ" ಎಂದಿದ್ದಾರೆ. ಆರೋಪಿಗಳು ಬುಲಂದ್‌ಶಹರ್‌ನವರು ಎಂದು ಶಂಕಿಸಲಾಗಿದ್ದು, ಒಂದು ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ.
ಪಿಕ್‌ನಿಕ್‌ಗೆ ತೆರಳಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಮತ್ತೊಂದು ಘಟನೆಯಲ್ಲಿ ಈ ತಿಂಗಳ ಆರಂಭದಲ್ಲಿ ಕಾಸಗಂಜ್ ಜಿಲ್ಲೆಯ ಪಿಕ್‌ನಿಕ್ ಸ್ಥಳವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಡಿ ಐವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: 20ಸಾವಿರದಲ್ಲಿ ಬೆಂಗಳೂರಿನಲ್ಲಿ ಆರಾಮವಾಗಿ ಜೀವನ ನಡೆಸಲು ಆಗುತ್ತಂತೆ ! ಹೇಗಿದೆ ನೋಡಿ ಯುವಕನ ಬಜೆಟ್ ಪ್ಲಾನ್
ಏಪ್ರಿಲ್ 10 ರಂದು ಹಜಾರಾ ಕಾಲುವೆಯ ಬಳಿಯ ನದರಾಯ್ ಆಕ್ವಿಡಕ್ಟ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ತನ್ನ ಭಾವಿ ಪತಿ ಜೊತೆ ಪಿಕ್‌ನಿಕ್‌ಗೆ ತೆರಳಿದ್ದಾಗ, ಆರೋಪಿಗಳು ಆಕೆಯನ್ನು ಕಾಲುವೆಯ ಬಳಿಯ ಕೊಠಡಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಈ ವೇಳೆ, ಆಕೆಯ ಭಾವಿ ಪತಿಯನ್ನು ಹೊರಗಡೆ ತಡೆದು ಹೊಡೆದಿದ್ದಾರೆ. ಆರೋಪಿಗಳು ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಮಹಿಳೆಯ ಆರೋಗ್ಯ ಹದಗೆಟ್ಟಿದ್ದರಿಂದ ಆಕೆ ಕುಟುಂಬದವರ ಬಳಿಗೆ ತೆರಳಿದ್ದರು. ನಂತರ, ಪೊಲೀಸ್ ಹೆಲ್ಪ್‌ಲೈನ್ ಮೂಲಕ ಘಟನೆಯನ್ನು ವರದಿಮಾಡಲಾಗಿದೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.
"ಆರೋಪಿಗಳು ಮಹಿಳೆಯನ್ನು ಕಾಲುವೆಯ ಬಳಿಯ ಕೊಠಡಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಭಾವಿ ಪತಿಗೆ ಥಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡೂ ಘಟನೆಗಳು ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.