Viral News: 20ಸಾವಿರದಲ್ಲಿ ಬೆಂಗಳೂರಿನಲ್ಲಿ ಆರಾಮವಾಗಿ ಜೀವನ ನಡೆಸಲು ಆಗುತ್ತಂತೆ ! ಹೇಗಿದೆ ನೋಡಿ ಯುವಕನ ಬಜೆಟ್ ಪ್ಲಾನ್
ಬೆಂಗಳೂರಿನಲ್ಲಿ ಜೀವನ ನಡೆಸುವ ಹೆಚ್ಚಿನವರು ದುಬಾರಿ ಬಾಡಿಗೆ, ದಿನಸಿ ಇತರೆ ಖರ್ಚು ವೆಚ್ಚ ಸೇರಿ ಜೀವನ ಸಾಗಿಸುವುದೇ ಕಷ್ಟ ಅದರಲ್ಲೂ ಉಳಿತಾಯಎನ್ನುವುದು ಅಸಾಧ್ಯ ಎಂದು ಹೇಳುತ್ತಾರೆ. ಆದ್ರೆ ಇಲ್ಲೊಬ್ಬ 22 ವರ್ಷ ವಯಸ್ಸಿನ ಯುವಕ ನಾನು 22 ಸಾವಿರ ರೂ. ಗಳಲ್ಲಿ ಆರಾಮದಾಯಕವಾಗಿ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಪೋಸ್ಟ್ ವೊಂದನ್ನು ಹಂಚಿ ಕೊಂಡಿದ್ದಾನೆ. ರೆಡ್ಡಿಟ್ ನಲ್ಲಿ ತನ್ನ ದೈನಂದಿನ ಖರ್ಚುಗಳು ಹೇಗಿವೆ, ಸುಲಭವಾಗಿ ಹೇಗೆ ಜೀವನ ನಡೆಸಬಹುದು ಎಂಬುದನ್ನು ಇಂಚಿಂಚೂ ಬರೆದುಕೊಂಡಿದ್ದಾನೆ.

Bengaluru Man Shares How He Lives Comfortably On Rs 20,000

ಬೆಂಗಳೂರು: ಇಂದಿನ ದುಬಾರಿ ಜೀವನಶೈಲಿಯಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ ಎನ್ನುವುದು ಸವಾಲಿನ ವಿಚಾರವೇ ಆಗಿದೆ. ಏರುತ್ತಿರುವ ಪ್ರಯಾಣ ದರ, ದುಬಾರಿ ಆಗುತ್ತಿರುವ ತರಕಾರಿ ಬೆಲೆ, ಮಕ್ಕಳ ವಿದ್ಯಾಭ್ಯಾಸ ಹೀಗೆ ಜನಸಾಮಾನ್ಯರಿಗೆ ಜೀವನ ನಡೆಸೋದೆ ಕಷ್ಟವಾಗಿ ಬಿಟ್ಟಿದೆ. ಅದರಲ್ಲೂ ಬೆಂಗಳೂರು ನಂತಹ ನಗರ ಪ್ರದೇಶಗಳಲ್ಲಿ ಜೀವನ ನಡೆಸಲು ಎಷ್ಟು ದುಡಿದರೂ ಕಮ್ಮಿಯೇ ಎಂದು ಹೇಳುವವರು ಇದ್ದಾರೆ. ಯಾಕಂದ್ರೆ ಇಲ್ಲಿ ಮನೆ ಬಾಡಿಗೆ ಒಂದು ದೊಡ್ಡ ಹೊರೆಯಾದರೆ, ಉಳಿದೆಲ್ಲಾ ಖರ್ಚುಗಳು ಇನ್ನಷ್ಟು ದುಬಾರಿ ಅನ್ನುವವರು ಇದ್ದಾರೆ. ಇಂತಹ ಖರ್ಚು ವೆಚ್ಚಗಳ ನಡುವೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಬಾಡಿಗೆ ಮನೆಗಳಲ್ಲಿ ಅನಿವಾರ್ಯವಾಗಿ ವಾಸಿಸುವರು ಹಲವರಿದ್ದಾರೆ. ಆದರೆ ಈ ಎಲ್ಲದರ ನಡುವೆಯು ಬೆಂಗಳೂರಿನ ಯುವಕನೊಬ್ಬ, 20 ಸಾವಿರ ಸಂಬಳದಲ್ಲಿ ಆರಾಮಾದಾಯಕ ಜೀವನ ನಡೆಸಬಹುದು ಎಂಬ ಬಗ್ಗೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು ಈ ಪೋಸ್ಟ್ ಇದೀಗ ಬಹಳಷ್ಟು ವೈರಲ್ (Viral Post) ಆಗುತ್ತಿದೆ.
ಬೆಂಗಳೂರಿನಲ್ಲಿ ಜೀವನ ನಡೆಸುವ ಹೆಚ್ಚಿನವರು ದುಬಾರಿ ಬಾಡಿಗೆ, ದಿನಸಿ ಇತರೆ ಖರ್ಚು ವೆಚ್ಚ ಸೇರಿ ಜೀವನ ಸಾಗಿಸುವುದೇ ಕಷ್ಟ ಅದರಲ್ಲೂ ಉಳಿತಾಯ ಎನ್ನುವುದು ಅಸಾಧ್ಯ ಎಂದು ಹೇಳುತ್ತಾರೆ. ಆದ್ರೆ ಇಲ್ಲೊಬ್ಬ 22 ವರ್ಷ ವಯಸ್ಸಿನ ಯುವಕ ನಾನು 22 ಸಾವಿರ ರೂ. ಗಳಲ್ಲಿ ಆರಾಮದಾಯಕವಾಗಿ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾನೆ. ರೆಡ್ಡಿಟ್ ನಲ್ಲಿ ತನ್ನ ದೈನಂದಿನ ಖರ್ಚುಗಳು ಹೇಗಿವೆ, ಸುಲಭವಾಗಿ ಹೇಗೆ ಜೀವನ ನಡೆಸ ಬಹುದು ಎಂಬುದನ್ನು ಇಂಚಿಂಚೂ ಬರೆದುಕೊಂಡಿದ್ದಾನೆ.
ಈ ಯುವಕ ಕಳೆದ ಆರು ತಿಂಗಳಿಂದ ಬೆಂಗಳೂರಿನಲ್ಲಿದ್ದು ತನ್ನ ತಿಂಗಳ ಖರ್ಚು ಹಂಚಿಕೊಂಡಿದ್ದಾನೆ.ಆಹಾರಕ್ಕೆ ತಿಂಗಳಿಗೆ 8,000, 9 ಸಾವಿರ ರೂ. ಮನೆ ಬಾಡಿಗೆ ಒಟ್ಟು ಮನೆ ಬಾಡಿಗೆ 23 ಸಾವಿರ, ಆದರೆ ನಾನು ಸ್ನೇಹಿತರೊಂದಿಗೆ ಮನೆ ಹಂಚಿ ಕೊಂಡಿರುವುದರಿಂದ ಒಬ್ಬರಿಗೆ 9 ಸಾವಿರ ರೂ. ಬಾಡಿಗೆ ಮೊತ್ತ, ತಿಂಗಳಿಗೆ 2000 ರೂ. ಪ್ರಯಾಣಕ್ಕೆ ತಾನು ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಮತ್ತು ರಾಪಿಡೋ ಮಾತ್ರ ಬಳಸುತ್ತೇನೆ, ಶುಚಿತ್ವದ ಸಾಮಗ್ರಿಗಳು, ಅಗತ್ಯ ವಸ್ತು ಇತ್ಯಾದಿಗಳಿಗೆಲ್ಲಾ ತಿಂಗಳಿಗೆ 2000 ರೂ. ಖರ್ಚಾಗುತ್ತದೆ. ಧೂಮಪಾನ, ಮದ್ಯಪಾನ, ಪಾರ್ಟಿಗಳಿಂದ ದೂರವಿರುವ ನಾನು 20 ಸಾವಿರ ರೂ. ಗಳಲ್ಲಿ ಆರಾಮವಾಗಿ ಜೀವನ ನಡೆಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಇದನ್ನು ಓದಿ: Viral Video: ಬರೋಬ್ಬರಿ 7 ವರ್ಷಗಳ ನಂತರ ಹಳೆಯ ದೋಸ್ತ್‌ಗಳ ಭೇಟಿ? ಹೃದಯಸ್ಪರ್ಶಿ ವಿಡಿಯೊ ಫುಲ್ ವೈರಲ್
ಈ ಪೋಸ್ಟ್ ಇದೀಗ ಬಹಳಷ್ಟು ವೈರಲ್ ಆಗಿದ್ದು ಯುವಕನ ಬಜೆಟ್ ಕೌಶಲ್ಯಕ್ಕೆ ನೆಟ್ಟಿಗರು ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ. ಬಳಕೆದಾರರೊಬ್ಬರು ಬಹಳ ಶ್ಲಾಘನೀಯ! ನಾನು ಕೂಡಾ ಇಂತಹ ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಬೆಂಗಳೂರಿನಲ್ಲಿ ಎಷ್ಟು ದುಡಿದರೂ ಸಾಕಾಗುವುದಿಲ್ಲ ಎಂದು ಅಳುವವರಿದ್ದಾರೆ. ಆದ್ರೆ ನೀವು ಬಹಳ ಸರಳ ಜೀವನವನ್ನು ಆನಂದಿಸುತ್ತಿದ್ದೀರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಇ ನ್ನೂ ಅನೇಕರು ಈ ಯುವಕನ ಸರಳ ಜೀವನ ಶೈಲಿ ಅನೇಕರಿಗೆ ಸ್ಫೂರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.