Madhya Pradesh Horror: ಪ್ರೇಯಸಿಯ ಎದೆಯ ಮೇಲೆ ಕುಳಿತು ಕತ್ತು ಸೀಳಿದ ಪಾಗಲ್ ಪ್ರೇಮಿ...!
Madhya Pradesh Horror; ಮಧ್ಯಪ್ರದೇಶದ ನರಸಿಂಗ್‌ಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಪ್ರೇಮಿಯೇ ಪ್ರೇಯಸಿಯ ಕುತ್ತಿಗೆ ಸೀಳಿ ಹತ್ಯೆಗೈದಿದ್ದಾನೆ. ಈ ಕೃತ್ಯ ಸ್ಥಳೀಯರನ್ನು ಆಂತಕಕ್ಕೀಡುವಂತೆ ಮಾಡಿದ್ದು, ಸಾರ್ವಜನಿಕವಾಗಿ ಆಸ್ಪತ್ರೆಯಲ್ಲಿಯೇ ಈ ಭೀಕರ ಕೃತ್ಯವನ್ನು ಎಸಗಿದ ಕಾರಣ ಸದ್ಯ ಆಸ್ಪತ್ರೆಯಲ್ಲಿನ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.

ಮೃತಪಟ್ಟ ಸಂಧ್ಯಾ ಚೌಧರಿ ಹಾಗೂ ಆರೋಪಿ ಅಭಿಷೇಕ್

ನರಸಿಂಗ್‌ಪುರ: ಮಧ್ಯಪ್ರದೇಶದ (Madhya Pradesh) ನರಸಿಂಗ್‌ಪುರ (Narsinghpur) ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ (Hospital) ಭಯಾನಕ ಘಟನೆಯೊಂದು ನಡೆದಿದ್ದು, ಪ್ರೇಮಿಯೇ ಪ್ರೇಯಸಿಯ ಕುತ್ತಿಗೆ ಸೀಳಿ ಹತ್ಯೆಗೈದಿದ್ದಾನೆ. ಈ ಕೃತ್ಯ ಸ್ಥಳೀಯರನ್ನು ಆಂತಕಕ್ಕೀಡುವಂತೆ ಮಾಡಿದ್ದು, ಸಾರ್ವಜನಿಕವಾಗಿ ಆಸ್ಪತ್ರೆಯಲ್ಲಿಯೇ ಈ ಭೀಕರ ಕೃತ್ಯವನ್ನು ಎಸಗಿದ ಕಾರಣ ಸದ್ಯ ಆಸ್ಪತ್ರೆಯಲ್ಲಿನ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.
19 ವರ್ಷದ 12ನೇ ತರಗತಿ ವಿದ್ಯಾರ್ಥಿನಿ ಸಂಧ್ಯಾ ಚೌಧರಿಯನ್ನು ಪ್ರೀತಿಸುತ್ತಿದ್ದ ಯುವಕನಿಂದಲೇ ಹತ್ಯೆಯಾದ ದುರಾದೃಷ್ಟೆಯಾಗಿದ್ದು, ಅಭಿಷೇಕ್ ಕೋಷ್ಟಿ ಎಂಬುವನನ್ನು ಆರೋಪಿ ಎಂದು ಗುರುತಿಸಲಾಗಿದೆ. ಸಾರ್ವಜನಿಕವಾಗಿ ಅಭಿಶೇಕ್ ದುಷ್ಕೃತ್ಯ ಎಸಗಿದ್ದು, ಸಂಧ್ಯಾಳ ಎದೆಯ ಮೇಲೆ ಕುಳಿತು ಆಕೆಯ ಗಂಟಲು ಸೀಳಿ ಕೊಂದಿದ್ದಾನೆ ಎನ್ನಲಾಗಿದೆ. ಇನ್ನು ಘಟನೆ ವೇಳೆ ಸ್ಥಳದಲ್ಲಿ ನೂರಾರು ಜನವಿದ್ದರೂ ಸಂಧ್ಯಾಳ ಸಹಾಯಕ್ಕೆ ಯಾರು ಬಾರದೇ ಇರುವುದು ಮನುಕುಲಕ್ಕೆ ಕಳಂಕದಂತಿದೆ
ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಪ್ಪು ಶರ್ಟ್ ಧರಿಸಿದ್ದ ಅಭಿಷೇಕ್, ಸಂಧ್ಯಾಳ ಕಪಾಳಕ್ಕೆ ಹೊಡೆದು, ನೆಲಕ್ಕೆ ತಳ್ಳಿ, ಎದೆಯ ಮೇಲೆ ಕುಳಿತು ಚಾಕುವಿನಿಂದ ಗಂಟಲು ಕೊಯ್ಯುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಆಸ್ಪತ್ರೆಯ ವೈದ್ಯರು ಮತ್ತು ಭದ್ರತಾ ಸಿಬ್ಬಂದಿ ಎದುರೇ ಈ ದುರ್ಘಟನೆ ನಡೆದಿದ್ದು, ಸಂಧ್ಯಾಳ ರಕ್ಷಣೆಗೆ ಯಾರು ಮುಂದಾಗದೇ ಇರುವುದು ಆ ವಿಡೀಯೋದಲ್ಲಿ ದಾಖಲಾಗಿದೆ. ಎಷ್ಟರ ಮಟ್ಟಿಗೆ ಅಲ್ಲಿದ್ದ ಜನ ಅಮಾನವೀಯತೆ ಮೆರೆದಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದ್ದು, ಸಂಧ್ಯಾ ರಕ್ತದ ಮಡಿಲಲ್ಲಿ ಮಲಗಿ ನೆಲದ ಮೇಲೆ ಬಿದ್ದು ಓದಾಡುತ್ತಿದ್ದರು ಕೆಲವರು ಕಂಡರೂ ಕಾಣದಂತೆ ವರ್ತಿಸಿದ್ದಾರೆ.
ಈ ಸುದ್ದಿಯನ್ನು ಓದಿ: Crime News: ವಾಮಾಚಾರಕ್ಕಾಗಿ ಸಾಕಿದ ನಾಯಿ ಕತ್ತು ಕತ್ತರಿಸಿ ಅಪಾರ್ಟ್‌ಮೆಂಟ್‌ನಲ್ಲೇ ಬಚ್ಚಿಟ್ಟ ಮಹಿಳೆ!
ಇನ್ನು ಪ್ರೇಯಸಿಯನ್ನು ಕೊಂದ ಬಳಿಕ ಅಭಿಷೇಕ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ತನ್ನ ಗಂಟಲು ಕುಯ್ದುಕೊಳ್ಳಲಿ ಯತ್ನಿಸಿ ವಿಫಲನಾಗಿದ್ದಾನೆ. ಇದರಿಂದ ಗಾಬರಿಗೊಂಡ ಆರೋಪಿ ಆಸ್ಪತ್ರೆಯಿಂದ ಓಡಿಹೋಗಿ ಹೊರಗೆ ನಿಲ್ಲಿಸಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಸದ್ಯ ಆಸ್ಪತ್ರೆಯ ಭದ್ರತಾ ವೈಫಲ್ಯದಿಂದ ರೋಗಿಗಳು ಮತ್ತು ಕುಟುಂಬಗಳು ಭಯಭೀತರಾಗಿದ್ದಾರೆ. ಟ್ರಾಮಾ ವಾರ್ಡ್‌ನ 11 ರೋಗಿಗಳಲ್ಲಿ 8 ಜನರು ಅಂದೇ ಡಿಸ್ಚಾರ್ಜ್ ಆಗಿದ್ದಾರೆ, ಉಳಿದವರು ಮರುದಿನ ಬೆಳಿಗ್ಗೆ ಆಸ್ಪತ್ರೆ ತೊರೆದಿದ್ದಾರೆ. ಸಂಧ್ಯಾ ಸ್ನೇಹಿತೆಯ ತಾಯಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿದ್ದಳು. ಆರೋಪಿ ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದ. ರೂಂ ನಂ. 22ರ ಹೊರಗೆ ಇಬ್ಬರೂ ಮಾತನಾಡಿದ ಬಳಿಕ ದಾಳಿ ನಡೆದಿದೆ ಎನ್ನಲಾಗಿದೆ.
ಸಂಧ್ಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಧ್ಯಾಹ್ನ 3:30ಕ್ಕೆ ಕುಟುಂಬಕ್ಕೆ ಮಾಹಿತಿ ತಲುಪಿದೆ. ಘಟನೆಯಿಂದ ಕೋಪಗೊಂಡ ಸಂಧ್ಯಾ ಕುಟುಂಬ ಶವ ಘಟನಾಸ್ಥಳದಲ್ಲಿಟ್ಟು, ಆಸ್ಪತ್ರೆಯ ಹೊರಗೆ ರಸ್ತೆ ತಡೆ ಹಿಡಿಯುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.