ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದಲ್ಲಿ ನಕಲಿ ಆರ್ಡರ್ ಪಡೆದ ಪಿಜ್ಜಾ ವಿತರಣೆಗೆ ಹೋದ ಭಾರತೀಯ ಯುವಕನ ಕೊಲೆ

ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಯುವಕನೊಬ್ಬ ಹೆಚ್ಚುವರಿ ಆದಾಯಕ್ಕಾಗಿ ವಾರಾಂತ್ಯದಲ್ಲಿ ಪಿಜ್ಜಾ ವಿತರಣೆ ಕೆಲಸ ಮಾಡುತ್ತಿದ್ದನು. ಆತನಿಗೆ ಶನಿವಾರ ನಕಲಿ ಆರ್ಡರ್ ಬಂದಿದ್ದು, ವಿತರಿಸಲೆಂದು ಹೋದಾಗ ಕೊಲೆಯಾಗಿದ್ದಾನೆ. ಈ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಆತನ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ಫಿಲಡೆಲ್ಫಿಯಾ: ಪಿಜ್ಜಾ ವಿತರಣೆ (Pizza delivery) ಮಾಡಲು ಹೋದ ಭಾರತೀಯ ಮೂಲದ (Indian Man) ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದ (america) ಫಿಲಡೆಲ್ಫಿಯಾದಲ್ಲಿ ನಡೆದಿದೆ. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತೆಲಂಗಾಣದ (telangana) 28 ವರ್ಷದ ಅನ್ಶುಲ್ ಕುಂಚಾ ಎಂಬಾತನನ್ನು ಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅನ್ಶುಲ್ ಹೆಚ್ಚುವರಿ ಆದಾಯಕ್ಕಾಗಿ ಆತ ವಾರಾಂತ್ಯದಲ್ಲಿ ಪಿಜ್ಜಾ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದನು.

ಅನ್ಶುಲ್ ಕುಂಚಾ ಅವರು ಶನಿವಾರ ರಾತ್ರಿ, ಪಿಜ್ಜಾ ವಿತರಿಸಲೆಂದು ಫಿಲಡೆಲ್ಫಿಯಾ ನಿರ್ಜನ ಸ್ಥಳಕ್ಕೆ ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹರಿಸಿದ್ದಾನೆ. ಅನ್ಶುಲ್ ತಲೆಗೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

5ನೇ ತಲೆಮಾರಿನ ಸು-57 ಫೈಟರ್ ಜೆಟ್ ಭಾರತಕ್ಕಾಗಿ ತಯಾರಿಸಲು ರಷ್ಯಾ ಸಿದ್ದ: ವ್ಲಾಡಿಮಿರ್ ಪುಟಿನ್

ಈ ಕುರಿತು ಮಾಹಿತಿ ನೀಡಿರುವ ಅನ್ಶುಲ್‌ನ ಸಹೋದರಿ ತನ್ವಿ, ಆತನ ಹತ್ಯೆ ಮಾಡಿದ ಬಳಿಕ ಆತನಿಂದ ಏನನ್ನೂ ಕದಿಯಲಾಗಿಲ್ಲ. ಹೀಗಾಗಿ ಹತ್ಯೆಗೆ ಬೇರೇನಾದರೂ ಕಾರಣವಿರಬಹುದು. ದಾಳಿಯ ಸಮಯದಲ್ಲಿ ಇಬ್ಬರು ಮುಸುಕುಧಾರಿ ಬಂದೂಕುಧಾರಿಗಳು ಆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅನ್ಶುಲ್ ಕುಂಚಾನನ್ನು ಈ ಹಿಂದೆ ಅಮೆರಿಕದಲ್ಲಿ ದರೋಡೆ ಮಾಡಲಾಗಿತ್ತು. ಆಗ ಆತನಿಂದ ಫೋನ್, ಹಣವನ್ನು ಕದಿಯಲಾಗಿತ್ತು. ಇದಕ್ಕಿಂತ ಮೊದಲು ಆತನ ಮೇಲೆ ಯಾವುದೇ ಮಾರಣಾಂತಿಕ ದಾಳಿ ಆಗಿರಲಿಲ್ಲ. ಪಿಜ್ಜಾ ವಿತರಣೆ ನೆಪದಲ್ಲಿ ಆತನ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಆತನಿಗೆ ಒಂದು ನಿರ್ಜನ ಪ್ರದೇಶದಲ್ಲಿ ಪಿಜ್ಜಾ ತಲುಪಿಸಲು ಹೇಳಲಾಗಿತ್ತು. ಅದು ವಂಚನೆ ಎಂಬುದು ಸ್ಥಳಕ್ಕೆ ಹೋದ ಮೇಲೆಯೇ ತಿಳಿದಿದೆ. ಅಲ್ಲಿ ಯಾರೂ ಇರಲಿಲ್ಲ; ಕೊಲೆಗಾರರ ಉದ್ದೇಶ ಏನಾಗಿತ್ತು ಎಂಬುದು ತಿಳಿದಿಲ್ಲ.ಸಹೋದರನ ಮೃತ ದೇಹವನ್ನು ಭಾರತಕ್ಕೆ ಮರಳಿ ತರಲು ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಅವರು ಹೇಳಿದರು.

ನನ್ನ ಸಹೋದರ ಎಲ್ಲರಿಗೂ ಪ್ರೀತಿ ಮತ್ತು ಸಂತೋಷ ಕೊಡುವ ವ್ಯಕ್ತಿಯಾಗಿದ್ದನು. ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿದ್ದ. ಪಿಜ್ಜಾ ಡೆಲಿವರಿ ಮಾಡಲು ಹೋದಾಗ ಆತನ ಕೊಲೆಯಾಗಿದೆ. ಸಾಧ್ಯವಾದಷ್ಟು ಬೇಗ ಆತನ ದೇಹವನ್ನು ಭಾರತಕ್ಕೆ ತರಬೇಕು ಎಂಬುದು ನಮ್ಮ ಏಕೈಕ ವಿನಂತಿಯಾಗಿದೆ ಎಂದು ಹೇಳಿದ್ದಾರೆ.

ಶವ ಹಸ್ತಾಂತರ ಪ್ರಕ್ರಿಯೆ ಸೋಮವಾರ ನಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಳಂಬವಿಲ್ಲದೆ ಅಂತಿಮ ವಿಧಿಗಳನ್ನು ನೆರವೇರಿಸಲು ಸಾಧ್ಯವಾಗುವಂತೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕುಟುಂಬಕ್ಕೆ ಯಾರ ಬಗ್ಗೆಯೂ ಅನುಮಾನಗಳಿಲ್ಲ. ಆದರೆ ಈ ಕೊಲೆಗೆ ಕಾರಣವಾದವರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು. ತಮ್ಮ ಸಹೋದರನಿಗೆ ನ್ಯಾಯ ಕೊಡಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಅವರು, ಯಾರೂ ಕೂಡ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ. ನನ್ನ ಸಹೋದರ ಅಮೆರಿಕಕ್ಕೆ ಹೋಗಲು ಬಯಸಿರಲಿಲ್ಲ. ಆದರೆ ನಾವು ಕಳುಹಿಸಿದೆವು. ಇದರಿಂದ ಏನಾಯಿತು ನೋಡಿ ಎಂದು ಹೇಳಿದರು.

ʼʼಐಪಿಎಲ್‌ಗೆ ಅಡ್ಡಿಪಡಿಸಿತ್ತು ಕಾಂಗ್ರೆಸ್‌ʼʼ: ದಾವೂದ್ ಇಬ್ರಾಹಿಂ, ಕ್ರಿಕೆಟ್‌, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಲಲಿತ್ ಮೋದಿ

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿಯವರು ಸ್ಥಳೀಯ ಅಧಿಕಾರಿಗಳು ಮತ್ತು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದಿರುವ ರಾಯಭಾರ ಕಚೇರಿ, ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾದಲ್ಲಿರುವ ಭಾರತೀಯ ಪ್ರಜೆ ಅನ್ಶುಲ್ ಕುಂಚಾ ಅವರ ಅಕಾಲಿಕ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಅವರ ಕುಟುಂಬದೊಂದಿಗೆ ಕಾನ್ಸುಲೇಟ್ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author