ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್‌ ಸಿಂದೂರದ ಕುರಿತು ಹೇಳಿಕೆ ; ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಬಂಧನ

ಕೋಮುವಾದಿ ಭಾವನೆಗಳನ್ನು ಹೊಂದಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶರ್ಮಿಷ್ಠಾ ಪನೋಲಿ ಅವರನ್ನು ಶನಿವಾರ ಹರಿಯಾಣದ ಗುರುಗ್ರಾಮದಿಂದ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.ಆಪರೇಷನ್ ಸಿಂದೂರ್‌ ಬಗ್ಗೆ ಬಾಲಿವುಡ್ ನಟರು ಮೌನ ವಹಿಸಿದ್ದಾರೆ ಎಂದು ವೀಡಿಯೊದಲ್ಲಿಆರೋಪಿಸಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ.

ಕೊಲ್ಕತ್ತಾ: ಕೋಮುವಾದಿ ಭಾವನೆಗಳನ್ನು ಹೊಂದಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ (Operation Sindoor) ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶರ್ಮಿಷ್ಠಾ ಪನೋಲಿ ಅವರನ್ನು ಶನಿವಾರ ಹರಿಯಾಣದ ಗುರುಗ್ರಾಮದಿಂದ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಭಾರತ ಕೈಗೊಂಡ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರ್‌ ಬಗ್ಗೆ ಬಾಲಿವುಡ್ ನಟರು ಮೌನ ವಹಿಸಿದ್ದಾರೆ ಎಂದು ವೀಡಿಯೊದಲ್ಲಿಆರೋಪಿಸಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ.

ಪುಣೆಯ ಕಾನೂನು ವಿಶ್ವವಿದ್ಯಾಲಯದಲ್ಲಿ ದಾಖಲಾಗಿರುವ ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ವೀಡಿಯೊವೊಂದನ್ನು ಮಾಡಿದ್ದು, ಅದರಲ್ಲಿ ಹಲವಾರು ಹಿಂದಿ ಚಲನಚಿತ್ರ ನಟರು ಆಪರೇಷನ್ ಸಿಂದೂರ್‌ ಕುರಿತು ಮಾತನಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಆಕ್ರೋಶವನ್ನು ಹುಟ್ಟುಹಾಕಿತು. ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿ ಅನೇಕ ಬಳಕೆದಾರರು ಟೀಕಿಸಿದ್ದಾರೆ.

ತೀವ್ರ ಟೀಕೆಗೆ ಗುರಿಯಾದ ಶರ್ಮಿಷ್ಠಾ ಪನೋಲಿ ತಮ್ಮ ಖಾತೆಯಿಂದ ವೀಡಿಯೊವನ್ನು ಅಳಿಸಿಹಾಕಿ ಕ್ಷಮೆಯಾಚಿಸಿದರು. ಆದರೆ ಕೊಲ್ಕತ್ತಾದ ಪೊಲೀಸರು ಶರ್ಮಿಷ್ಠಾ ಪನೋಲಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ನಂತರ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಕಾನೂನು ನೋಟಿಸ್‌ಗಳನ್ನು ಜಾರಿಗೊಳಿಸಲಾಯಿತು. ಕಾನೂನು ನೋಟಿಸ್ ಅನ್ನು ತಲುಪಿಸಲು ಸಾಧ್ಯವಾಗದ ಕಾರಣ, ಕೋಲ್ಕತ್ತಾ ಪೊಲೀಸರು ಈ ವಿಷಯವನ್ನು ನ್ಯಾಯಾಲಯದ ಮುಂದೆ ಇಟ್ಟರು. ನಂತರ ಆಕೆಯ ವಿರುದ್ಧ ಬಂಧನದ ವಾರಂಟ್‌ ಹೊರಡಿಸಲಾಯಿತು.

ಈ ಸುದ್ದಿಯನ್ನೂ ಓದಿ: ಪಾಕಿಸ್ತಾನಕ್ಕೆ ಯುದ್ಧ, ಜಲಾಂತರ್ಗಾಮಿ ನೌಕೆಗಳ ಮಾಹಿತಿ ಸೋರಿಕೆ; ಬೇಹುಗಾರಿಕೆ ಆರೋಪದ ಮೇಲೆ ಥಾಣೆ ಎಂಜಿನಿಯರ್ ಬಂಧನ

ಇತ್ತೀಚೆಗೆ ಆಪರೇಷನ್‌ ಸಿಂದೂರ್‌ನ ಭಾಗವಾಗಿದ್ದ ಕರ್ನಲ್‌ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್‌ ವರ್ಮಾ ನಾಲಿಗೆ ಹರಿಬಿಟ್ಟಿದ್ದರು. ಸಚಿವನ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿತ್ತು. ತಪ್ಪಿನ ಅರಿವಾಗಿ ಸಚಿವ "ನಾನು ಇಡೀ ಭಾರತೀಯ ಸೇನೆ , ಸಹೋದರಿ ಕರ್ನಲ್ ಸೋಫಿಯಾ ಮತ್ತು ಎಲ್ಲಾ ದೇಶವಾಸಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ಶಾ ಹೇಳಿದ್ದಾರೆ. ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ನನಗಿಲ್ಲ ಎಂದು ಅವರು ಕ್ಷಮೆ ಕೇಳಿದ್ದರು.