ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dating App: ಡೇಟಿಂಗ್‌ ಆ್ಯಪ್‌ ಬಗ್ಗೆ ಇರಲಿ ಎಚ್ಚರ... ಎಚ್ಚರ...!ಬೆಂಗಳೂರು ಟೆಕ್ಕಿಗೆ ಲಕ್ಷ ಲಕ್ಷ ಪಂಗನಾಮ

ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಅಂತಹ ಒಂದು ಘಟನೆಗೆ ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು ಬಲಿಯಾಗಿದ್ದಾರೆ. ಬಹಳ ನಿರೀಕ್ಷೆ ಇಟ್ಟು ಡೇಟಿಂಗ್‌ ಆ್ಯಪ್‌ನಲ್ಲಿ ಭೇಟಿಯಾದ ಮಹಿಳೆಯೊಂದಿಗೆ ಡೇಟಿಂಗ್ ಗೆ ಹೋದ ಟೆಕ್ಕಿ ಬಳಿಕ ನಕಲಿ ಮಾದಕ ದ್ರವ್ಯ ಕಳ್ಳಸಾಗಣೆಯ ಬೆದರಿಕೆಯಿಂದ 2 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಬೆಂಗಳೂರು: ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಮೊದಲ ಡೇಟಿಂಗ್ (First Date)ಆ್ಯಪ್‌ಗೆ ಹೋದ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ (Bengaluru techie) ಅತ್ಯಂತ ಕರಾಳ ಅನುಭವವಾಗಿದೆ. ನಕಲಿ ಮಾದಕ ದ್ರವ್ಯ ಕಳ್ಳಸಾಗಣೆ (Fake Drug Bust) ಬೆದರಿಕೆಗೆ (Blackmail) ಗುರಿಯಾದ ಬೆಂಗಳೂರಿನ ಟೆಕ್ಕಿ ಇದರಿಂದ ಸುಮಾರು 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅವರು ಡೇಟಿಂಗ್ ಅಪ್ಲಿಕೇಶನ್‌ ಬಂಬಲ್‌ನಲ್ಲಿ (Bumble app) ಭೇಟಿಯಾದ ಮಹಿಳೆಯೊಂದಿಗೆ ಡೇಟಿಂಗ್ ಗೆ ಹೋಗಿದ್ದು, ಬಳಿಕ ನಕಲಿ ಮಾದಕ ದ್ರವ್ಯ ಕಳ್ಳಸಾಗಣೆಯ ಬೆದರಿಕೆಗೆ ಗುರಿಯಾಗಿದ್ದರು. ಇದರಿಂದ ಸುಮಾರು 2 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್‌ ಅನ್ನು ಸಾಕಷ್ಟು ಮಂದಿ ಬಳಸುತ್ತಿದ್ದಾರೆ. ಇದು ಇತ್ತೀಚಿನ ಕೆಲವು ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇದ್ದಾರೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಡೇಟಿಂಗ್ ಆಪ್ ನಿಂದಾಗಿ ಭಯಾನಕ ಅನುಭವವಾಗಿದೆ. ಬೆಂಗಳೂರಿನ ಟೆಕ್ಕಿ ಬಂಬಲ್‌ನಲ್ಲಿ ಭೇಟಿಯಾದ ಮಹಿಳೆಯೊಂದಿಗೆ ಡೇಟಿಂಗ್ ಗೆ ಹೋಗಿದ್ದು, ತಮ್ಮ ಮೊದಲ ಡೇಟ್‌ನಲ್ಲೇ ಅವರು 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹಲವು ವಾರಗಳ ಕಾಲ ಮಹಿಳೆಯೊಂದಿಗೆ ಚಾಟ್ ಮಾಡುತ್ತಿದ್ದ ಬೆಂಗಳೂರಿನ ಟೆಕ್ಕಿ ಬಳಿಕ ವಿಡಿಯೊ ಕರೆಗಳನ್ನೂ ಮಾಡುತ್ತಿದ್ದರು. ಕೊನೆಗೆ ಅವರಿಬ್ಬರೂ ಮೊದಲ ಭೇಟಿಯಲ್ಲಿ ಕಾಫಿ ಕುಡಿಯಲು ನಿರ್ಧರಿಸಿದರು.

ಕಾಫಿ ಕುಡಿದ ಮೇಲೆ ಮಹಿಳೆ ಅವರನ್ನು ಖಾಸಗಿ ಕೋಣೆಯಲ್ಲಿ ಮಾತನಾಡೋಣ ಎಂದು ಕರೆದು ಕೊಂಡು ಹೋದರು. ಬಳಿಕ ಇವರಿದ್ದ ಕೋಣೆಗೆ ನುಗ್ಗಿದ ನಾಲ್ವರು ಟೆಕ್ಕಿ ಮಾದಕ ದ್ರವ್ಯ ತುಂಬಿದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಟೆಕ್ಕಿ ಜೊತೆ ಇದ್ದ ಮಹಿಳೆಯ ಬ್ಯಾಗ್ ನಿಂದ ಬಿಳಿ ಪುಡಿಯ ಸ್ಯಾಚೆಟ್‌ಗಳನ್ನು ಹೊರತೆಗೆದು ಅವು ಮಾದಕ ವಸ್ತುಗಳು ಎಂದು ಹೇಳಿದರು. ಗ್ಯಾಂಗ್ ನ ಭಾಗವಾಗಿದ್ದ ಆಗ ಮಹಿಳೆ ಇನ್ನೊಂದು ಕೋಣೆಯಲ್ಲಿ ತಾನು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಏನು ಮಾಡಬೇಕು ಎಂದು ತೋಚದ ಟೆಕ್ಕಿ ತಮ್ಮನ್ನು ಹೋಗಲು ಬಿಡುವಂತೆ ಅವರ ಬಳಿ ಮನವಿ ಮಾಡಿದರು. ಆಗ ಅವರು 15 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 2 ಲಕ್ಷ ರೂ. ಗೆ ಒಪ್ಪಿಕೊಂಡರು.

ಇದರಿಂದ ಆಘಾತಕ್ಕೊಳಗಾಗಿದ್ದ ಟೆಕ್ಕಿ ಈ ಕುರಿತು ಅಲ್ಲಿಂದ ಹೊರ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗ ಅವರಿಗೆ ತಾನು ಪೂರ್ವ ಯೋಜಿತ ಹನಿಟ್ರ್ಯಾಪ್ ಗೆ ಬಿದ್ದಿರುವುದು ತಿಳಿದಿದೆ. ಆರೋಪಿಗಳು ಮಾದಕ ವಸ್ತು ಎಂದು ಹೇಳಿರುವ ವಸ್ತು ಅಡುಗೆ ಸೋಡಾ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಂಗೀತಾ, ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್ ಮತ್ತು ಬೀರ್ಬಲ್ ಎಂಬವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Viral Video: ಮರಿಯಾನೆಗಳು ಪರಸ್ಪರ ಚುಂಬಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊ ವೈರಲ್

ಈ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ (ಈಶಾನ್ಯ ವಿಭಾಗ) ಸಜೀತ್ ವಿ.ಜೆ., ಮಹಿಳೆ ಉತ್ತರ ಪ್ರದೇಶದವರಾಗಿದ್ದು, ಇದಕ್ಕೂ ಮೊದಲು ಡ್ಯಾನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಗ್ಯಾಂಗ್ ಇದೇ ವಿಧಾನವನ್ನು ಬಳಸಿಕೊಂಡು ಹಲವಾರು ಮಂದಿಯನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author