ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಲೆ, ಸುಲಿಗೆಯಲ್ಲಿ ಭಾಗಿ: ಮಾಲ್ಡಾದ ಬೀದಿ ಬೀದಿಯಲ್ಲಿ ಟಿಎಂಸಿ ಮಾಜಿ ನಾಯಕನ ಮೆರವಣಿಗೆ

ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತೃಣ ಮೂಲ ಕಾಂಗ್ರೆಸ್ ನ ಮಾಜಿ ನಾಯಕನನ್ನು ಪಶ್ಚಿಮ ಬಂಗಾಳ ಪೊಲೀಸರು ಮೆರವಣಿಗೆ ನಡೆಸಿರುವ ಘಟನೆ ನಡೆದಿದೆ. ಮಾಲ್ಡಾದ ಕಾಲಿಯಾಚಕ್‌ನಲ್ಲಿಬಂಧನಕ್ಕೆ ಒಳಗಾದ ಟಿಎಂಸಿ ಅಂಚಲ್‌ನ ಮಾಜಿ ಅಧ್ಯಕ್ಷ ಬಕುಲ್ ಶೇಖ್ ಕಂಡರೆ ಭಯ ಪಡುತ್ತಿದ್ದ ಜನರನ್ನು ಭಯ ಮುಕ್ತಗೊಳಿಸಲು ಪೊಲೀಸರು ಈ ರೀತಿ ಮೆರವಣಿಗೆ ನಡೆಸಿದರು.

ಸಂಗ್ರಹ ಚಿತ್ರ

ಪಶ್ಚಿಮ ಬಂಗಾಳ: ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂಬುದನ್ನು ಸಾಬೀತು ಪಡಿಸಲು ಪಶ್ಚಿಮ ಬಂಗಾಳ ಪೊಲೀಸರು (west bengal police) ಪೊಲೀಸರು ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತೃಣ ಮೂಲ ಕಾಂಗ್ರೆಸ್ (Trinamool Congress) ನ ಮಾಜಿ ನಾಯಕನನ್ನು ಮೆರವಣಿಗೆ ನಡೆಸಿರುವ ಘಟನೆ ನಡೆದಿದೆ. ಮಾಲ್ಡಾದ (malda) ಕಾಲಿಯಾಚಕ್‌ನಲ್ಲಿ ಟಿಎಂಸಿ ಅಂಚಲ್‌ನ ಮಾಜಿ ಅಧ್ಯಕ್ಷ ಬಕುಲ್ ಶೇಖ್ (Bakul Sheikh) ಅವನನ್ನು ಬಂಧಿಸಿದ ಮರುದಿನ ಪೊಲೀಸರು ಮಾಲ್ಡಾದಲ್ಲಿ ಆತನೊಂದಿಗೆ ಮೆರವಣಿಗೆ ನಡೆಸಿದರು.

ಮಾಲ್ಡಾ ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಕುಖ್ಯಾತನಾಗಿರುವ ತೃಣಮೂಲ ಕಾಂಗ್ರೆಸ್ ನ ಅಂಚಲ್‌ನ ಮಾಜಿ ಅಧ್ಯಕ್ಷ ಬಕುಲ್ ಶೇಖ್ ನನ್ನು ಪೊಲೀಸರು ಬಂಧಿಸಿ ಮೆರವಣಿಗೆ ನಡೆಸಿದರು.

ಕಾರ್ತಿಕೇಯ ಸಿಂಗ್ ಮಾನನಷ್ಟ ಮೊಕದ್ದಮೆ: ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿಷಾದ

ಬಕುಲ್ ಶೇಖ್ ಮತ್ತು ಆತನ ಪ್ರಭಾವದಿಂದ ಜನರು ಅನೇಕ ವರ್ಷಗಳಿಂದ ಭಯಭೀತರಾಗಿದ್ದರು. ಆತನ ವಿರುದ್ಧ ಅನೇಕ ಆರೋಪಗಳಿದ್ದರೂ ಯಾರೂ ಕೂಡ ಮುಂದೆ ಬಂದು ಮಾತನಾಡುತ್ತಿರಲಿಲ್ಲ. ಜನರಲ್ಲಿದ್ದ ಭಯವನ್ನು ಹೋಗಲಾಡಿಸಲು ಬಂಧನದ ಬಳಿಕ ಆತನನ್ನು ಪೊಲೀಸರು ಸಾರ್ವಜನಿಕ ಮೆರವಣಿಗೆ ನಡೆಸಿ ಭಾರಿ ಭದ್ರತೆಯಲ್ಲಿ ಠಾಣೆಗೆ ಕರೆದುಕೊಂಡು ಹೋದರು. ಮೆರವಣಿಗೆ ವೇಳೆ ಸೊಂಟಕ್ಕೆ ಹಗ್ಗ ಕಟ್ಟಿದ್ದು, ಎರಡು ಕೈಗಳನ್ನು ಮಡಚಿ ಸಾಗುತ್ತಿದ್ದ ಆತನನ್ನು ನೋಡಲು ಅಪಾರ ಜನರು ನೆರೆದಿದ್ದರು.

ಹಲವಾರು ಅಪರಾಧ ಪ್ರಕರಣಗಳಲ್ಲಿ ಬಕುಲ್ ಶೇಖ್ ಹೆಸರು ಕೇಳಿ ಬಂದಿದ್ದು, ಆತನ ಭಯದಿಂದ ಕೆಲವರು ಕುಟುಂಬ ಸಮೇತರಾಗಿ ಊರು ಬಿಟ್ಟಿದ್ದಾರೆ. ಇದೀಗ ಆತನ ಬಂಧನವು ಜನರಲ್ಲಿ ನಿರಾಳ ಭಾವನೆಯನ್ನು ಮೂಡಿಸಿದೆ ಎನ್ನುತ್ತಾರೆ ಸ್ಥಳೀಯರು.

ಪಶ್ಚಿಮ ಬಂಗಾಳದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ ಮೇಲೆ ಅಪರಾಧಿಗಳನ್ನು ಬೆದರಿಸಲು ಮತ್ತು ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ನಂಬಿಕೆಯನ್ನು ಬೆಳೆಸಲು ಸರ್ಕಾರ ಹೊಸ ಕ್ರಮವನ್ನು ಅನುಸರಿಸುತ್ತಿದೆ.

ಇತ್ತೀಚೆಗೆ ಬಂಗಾಳ ಪೊಲೀಸರು ಉತ್ತರ, ದಕ್ಷಿಣ ಮತ್ತು ಮಧ್ಯ ಹೌರಾದ ಬೀದಿಗಳಲ್ಲಿ ಅರೆನಗ್ನ ಸ್ಥಿತಿಯಲ್ಲಿ ಕೆಲವು ಅಪರಾಧಿಗಳ ಮೆರವಣಿಗೆ ನಡೆಸಿದ್ದರು. ಉತ್ತರ ಹೌರಾದ ಕುಖ್ಯಾತ 'ಡಾನ್' ಎಂದು ಕರೆಯಲ್ಪಡುತ್ತಿದ್ದ ಆಕಾಶ್ ಸಿಂಗ್ ಎಂಬಾತನ ತಲೆ ಬೋಳಿಸಿ ತೋಳಿಲ್ಲದ ಜಾಕೆಟ್ ಮತ್ತು ಒಳ ಉಡುಪುಗಳನ್ನು ಹಾಕಿಸಿ ಪೊಲೀಸರು ಇತ್ತೀಚೆಗೆ ಮೆರವಣಿಗೆ ನಡೆಸಿದ್ದರು. ಆತನನ್ನು ಮೇ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು.

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್‌ ಆತ್ಮಹತ್ಯೆ!

ಇನ್ನು ದಕ್ಷಿಣ ಹೌರಾದ ಸಂಕ್ರೈಲ್ ಪ್ರದೇಶದಲ್ಲಿ ಶಾಹೀನ್ ಮೊಲ್ಲಾ ಎಂಬಾತನ ಮೆರವಣಿಗೆ ನಡೆಸಲಾಗಿದೆ. ಆತ ಸಂಚಾರ ಗೃಹರಕ್ಷಕನಾಗಿ ನೇಮಕವಾದ ಮೇಲೆ ಸ್ಥಳೀಯ ಶಾಸಕ ಪ್ರಿಯಾ ಪಾಲ್ ಅವರ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮಧ್ಯ ಹೌರಾದ ಚೌರಾ ಬಸ್ತಿ ಪ್ರದೇಶದ ತೃಣಮೂಲ ಕಾಂಗ್ರೆಸ್ ನಾಯಕಿ, ವಾರ್ಡ್‌ನ ಮಾಜಿ ಕೌನ್ಸಿಲರ್‌ನ ಪತಿ ಶಮೀಮ್ ಅಹ್ಮದ್ 'ಬಡೆ' ಎಂಬಾತನನ್ನು ಪೊಲೀಸರು ಮೆರವಣಿಗೆ ನಡೆಸಿದರು.

ವಿದ್ಯಾ ಇರ್ವತ್ತೂರು

View all posts by this author