Assault Case: ಮಠದಿಂದ ಎಳೆದೊಯ್ದು ದಲಿತ ಸ್ವಾಮೀಜಿ ಮೇಲೆ ಮಾರಕ ಹಲ್ಲೆ; ಆರೋಪ ಏನು?
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ಸಮುದಾಯದವರಾದ ಬಾಲಕೃಷ್ಣ ಸ್ವಾಮೀಜಿಯ ಬಟ್ಟೆಯೇ ಹರಿದು ಹೋಗುವಂತೆ ದುರುಳರು ಹಲ್ಲೆ ನಡೆಸಿದ್ದಾರೆ. ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಎನ್ನುವವರ ಕಡೆಯವರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವಿದೆ.
ಬಾಲಕೃಷ್ಣ ಸ್ವಾಮೀಜಿ -
ಕಲಬುರಗಿ, ಏ.07: ದಲಿತ ಸ್ವಾಮೀಜಿ (dalit swamiji) ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault Case) ನಡೆಸಿರುವ ಘಟನೆ ಕಲಬುರಗಿಯ (Kalaburagi) ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ನಡೆದಿದೆ ಎಂದು ವರದಿ ಆಗಿದೆ. ದಲಿತ ಸಮುದಾಯದ ಶ್ರೀ ಬಾಲಕೃಷ್ಣ ಸ್ವಾಮೀಜಿ (Balakrishna Swamiji) ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮಠದಲ್ಲಿದ್ದ ದಲಿತ ಸಮುದಾಯದ ಬಾಲಕೃಷ್ಣ ಸ್ವಾಮೀಜಿಯನ್ನ ದರದರನೆ ಎಳೆದುಕೊಂಡು ಹೋದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮಠದ ಆವರಣದಲ್ಲಿಯೇ ಮನಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ದಲಿತ ಸಮುದಾಯದವರಾದ ಬಾಲಕೃಷ್ಣ ಸ್ವಾಮೀಜಿಯ ಬಟ್ಟೆಯೇ ಹರಿದು ಹೋಗುವಂತೆ ದುರುಳರು ಹಲ್ಲೆ ನಡೆಸಿದ್ದಾರೆ. ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಎನ್ನುವವರ ಕಡೆಯವರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸ್ವಾಮೀಜಿ ಮೇಲೆ ಕಳ್ಳತನ ಆರೋಪ
ಬಾಲಕೃಷ್ಣ ಸ್ವಾಮೀಜಿ ಕಳ್ಳತನ ಮಾಡಿದ್ದಾರೆಂದು ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ. ಹಿಗ್ಗಾಮುಗ್ಗಾ ಹೊಡೆದು, ಕಾಲಿನಿಂದ ಒದ್ದು ಥಳಿಸಿದ್ದು, ದಲಿತ ಸಮುದಾಯದ ಸ್ವಾಮೀಜಿ ಅನ್ನೋ ಕಾರಣಕ್ಕೂ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿದೆ. ಮಾತಾ ಮಾಣಿಕೇಶ್ವರಿ ಆಶ್ರಮದ ಆವರಣದಲ್ಲಿರುವ ದತ್ತಾತ್ರೇಯ ದೇವಸ್ಥಾನದ ಮಠದ ಪೂಜಾರಿ ಶ್ರೀ ಬಾಲಕೃಷ್ಣ ಸ್ವಾಮೀಜಿ ಅವರು ಕಳೆದ 2015 ರಿಂದ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಬಾಲಕೃಷ್ಣ ಸ್ವಾಮೀಜಿ ನೆಲೆಸಿದ್ದು, ಮಾತೆ ಮಾಣಿಕೇಶ್ವರಿಯ ಸೇವೆ ಮಾಡುತ್ತಿದ್ದರು.
ಹಲ್ಲೆ ಮಾಡಿ ಮಠದಿಂದ ಹೊರಹಾಕಿದ್ದಾರೆ ಹಾಗೂ ಜಾತಿ ನಿಂದನೇ ಮಾಡಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪವಿದೆ. ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ವಿರುದ್ದ ಹಲ್ಲೆ, ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಕಳೆದ ಜನವರಿಯಲ್ಲಿ ಹಲ್ಲೆ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮುಧೋಳ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಬಾಲಕೃಷ್ಣ ಸ್ವಾಮೀಜಿ ಆರೋಪ ಮಾಡಿದ್ದಾರೆ.