Ranya Rao: ಅಕ್ರಮ ಚಿನ್ನ ಸಾಗಣೆ, ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ನಟಿ ರನ್ಯಾ ರಾವ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಕಳೆದ ರಾತ್ರಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿದೇಶದಿಂದ ಬಂದ ನಟಿ ರನ್ಯಾ ರಾವ್ ವಶಕ್ಕೆ ಪಡೆದ ಏರ್ಪೋರ್ಟ್ ಕಸ್ಟಮ್ಸ್ ಡಿಆರ್‌ಐ ತಂಡ ರನ್ಯಾ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ನಟಿ ರನ್ಯಾ ರಾವ್

ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ (Gold smuggling) ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್ (Kannada actress Ranya Rao) ಅವರನ್ನು ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda Airport) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಕಳೆದ ರಾತ್ರಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿದೇಶದಿಂದ ಬಂದ ನಟಿ ರನ್ಯಾ ರಾವ್ ವಶಕ್ಕೆ ಪಡೆದ ಏರ್ಪೋರ್ಟ್ ಕಸ್ಟಮ್ಸ್ ಡಿಆರ್‌ಐ ತಂಡ ರನ್ಯಾ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ಸಂಬಂಧಿಯಾಗಿರುವ ನಟಿ ರನ್ಯಾ ರಾವ್ ಕುರಿತು ಖಚಿತ ಮಾಹಿತಿಯ ಮೇರೆಗೆ ಡಿ ಆರ್ ಐ ತಂಡ ಏರ್ಪೋರ್ಟ್‌ಗೆ ಬಂದಿತ್ತು. ನಟಿ ರನ್ಯಾ ಏರ್ಪೋರ್ಟಿಗೆ ಬರುತ್ತಿದ್ದಂತೆ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ರಾತ್ರಿ ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಟಿ ರನ್ಯಾ ಆಗಮಿಸಿದ್ದರು. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪದಲ್ಲಿ ರನ್ಯ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ರನ್ಯಾ ರಾವ್ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ ಮತ್ತು ರೂಪದರ್ಶಿ. ಅವರು 2014ರ ಕನ್ನಡ ಚಲನಚಿತ್ರ ಮಾಣಿಕ್ಯ ಮೂಲಕ ತಮ್ಮ ಚೊಚ್ಚಲ ಸಿನಿಮಾ ಪ್ರವೇಶ ಮಾಡಿದರು. ಮೂಲತಃ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯವರು. ಬೆಂಗಳೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನಟನೆಗೆ ಇಳಿದಿದ್ದಾರೆ. ತಮಿಳಿನಲ್ಲಿ ವಿಕ್ರಮ ಪ್ರಭು ಜೊತೆಗೆ ವಾಘಾ ಹಾಗೂ ಕನ್ನಡದಲ್ಲಿ ಗಣೇಶ್ ಜೊತೆಗೆ ಪಟಾಕಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Rishab Shetty: ಛತ್ರಪತಿ ಶಿವಾಜಿ ಅವತಾರದಲ್ಲಿ ರಿಷಬ್ ಶೆಟ್ಟಿ; ಗಮನ ಸೆಳೆಯುವ ಪೋಸ್ಟರ್ ಔಟ್