ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kidnap attempt: ಕಿಡ್ನಾಪರ್ಸ್‌ಗೆ ಚಳ್ಳೆಹಣ್ಣು ತಿನ್ನಿಸಿ ಬಾಲಕಿ ಗ್ರೇಟ್‌ ಎಸ್ಕೇಪ್‌!

Kidnap attempt near police station: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಧೈರ್ಯಶಾಲಿ ಹದಿಹರೆಯದ ಬಾಲಕಿಯೊಬ್ಬಳು ತನ್ನ ಅಪಹರಣ ಯತ್ನವನ್ನು ವಿಫಲಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯ ಹತ್ತಿರವೇ ಈ ಘಟನೆ ನಡೆದಿದ್ದು, ಆಘಾತ ತಂದಿದೆ. ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿಯನ್ನು ಬಲವಂತವಾಗಿ ಎಳೆದು ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ಬಾಲಕಿ ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾಳೆ.

ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಬಾಲಕಿ ಅಪಹರಣಕ್ಕೆ ಯತ್ನ(ಸಾಂದರ್ಭಿಕ ಚಿತ್ರ)

ಇಂದೋರ್: ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಲು ಯತ್ನಿಸಿರುವ ಘಟನೆಯು ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ. ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋಗುತ್ತಿದ್ದಾಗ ಮೂವರು ಅಪರಿಚಿತ ದುಷ್ಕರ್ಮಿಗಳು ಆಕೆಯನ್ನು ಕಿಡ್ನಾಪ್ ಮಾಡಲು (Kidnap attempt) ಮುಂದಾಗಿದ್ದಾರೆ. ಆದರೆ, ಆಕೆ ತೋರಿದ ಧೈರ್ಯವೇ ಅವಳನ್ನು ರಕ್ಷಿಸಿದೆ. ಆಘಾತಕಾರಿ ವಿಷಯವೆಂದರೆ, ಪದವ್‌ನಲ್ಲಿರುವ ಮಹಿಳಾ ಪೊಲೀಸ್ ಠಾಣೆಯಿಂದ ಕೆಲವೇ ಅಂತರಗಳ ದೂರದಲ್ಲಿ ಈ ಅಪಹರಣ ಪ್ರಯತ್ನ ನಡೆದಿದೆ. ಈ ಆತಂಕಕಾರಿ ಘಟನೆಯು ಮತ್ತೊಮ್ಮೆ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ.

ಹಾಡಹಗಲೇ ನಡೆದ ಈ ಅಪಹರಣ ಯತ್ನ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಪ್ರಾಪ್ತ ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಹತ್ತಿರದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಇದ್ದಕ್ಕಿದ್ದಂತೆ ಆಕೆಯ ಕಡೆಗೆ ಧಾವಿಸಿ ಬಂದಿತು. ಒಳಗಿದ್ದ ಒಬ್ಬ ವ್ಯಕ್ತಿ ಆಕೆಯ ಕೈಯನ್ನು ಹಿಡಿದರೆ, ಮತ್ತೊಬ್ಬ ವ್ಯಕ್ತಿ ಹೊರಗೆ ಹಾರಿ ಆಕೆಯ ಕಾಲನ್ನು ಎತ್ತಲು ಪ್ರಯತ್ನಿಸಿದನು. ಆಟೋ ಚಾಲಕ ತನ್ನ ಸಹಚರರನ್ನು ಆಕೆಯನ್ನು ವಾಹನದೊಳಗೆ ತಳ್ಳಲು ಪ್ರಯತ್ನಿಸಿದ್ದಾನೆ.

ಇದನ್ನೂ ಓದಿ: Doctor Murder Case: ನಿನಗಾಗಿ ನನ್ನ ಹೆಂಡ್ತಿಯನ್ನು ಕೊಂದೆ; ಪತ್ನಿ ಕೊಲೆ ಬಳಿಕ ನಾಲ್ಕೈದು ಮಹಿಳೆಯರಿಗೆ ಮೆಸೇಜ್‌ ಕಳುಹಿಸಿದ್ದ ವೈದ್ಯ!

ತನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದರೂ, ಹೆದರದ ಅಪ್ರಾಪ್ತ ವಿದ್ಯಾರ್ಥಿನಿ ಧೈರ್ಯ ತೋರಿದ್ದಾಳೆ. ತನ್ನ ಅಪಹರಣಕ್ಕೆ ತೀವ್ರವಾಗಿ ವಿರೋಧಿಸಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಅಪಹರಣಕಾರರ ಹಿಡಿತದಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅವಳು ಕೂಡಲೇ ಸಹಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆಯ ಕಡೆಗೆ ಓಡಿದಳು. ಆದರೆ, ಈ ವೇಳೆ ದಾಳಿಕೋರರು ಆಟೋರಿಕ್ಷಾವನ್ನು ತ್ಯಜಿಸಿ ಕಾಲ್ನಡಿಗೆಯಲ್ಲಿ ಓಡಿಹೋದರು.

ಘಟನೆಯಿಂದ ಆಘಾತಕ್ಕೊಳಗಾದ ಆ ಹದಿಹರೆಯದ ಬಾಲಕಿ ಮನೆಗೆ ತೆರಳಿ ನಂತರ ಪೊಲೀಸರಿಗೆ ಔಪಚಾರಿಕ ದೂರು ನೀಡಲಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಶಂಕಿತರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಮತ್ತು ಮಹಿಳಾ ಪೊಲೀಸ್ ಠಾಣೆಯ ನಡುವೆ ಈ ದುಷ್ಕೃತ್ಯ ನಡೆದಿದ್ದು, ಸಾರ್ವಜನಿಕರು ಕೆಂಡಕಾರಿದ್ದಾರೆ. ನಗರದ ಅತ್ಯಂತ ಜನನಿಬಿಡ ಮತ್ತು ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಇಲ್ಲಿ ಇಂತಹ ಘಟನೆ ಹೇಗೆ ಸಂಭವಿಸಬಹುದು ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.

ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಅವರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪದವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶೈಲೇಂದ್ರ ಭಾರ್ಗವ ತಿಳಿಸಿದ್ದಾರೆ. ಸದ್ಯ, ಈ ಕೃತ್ಯವು ನಾಗರಿಕರನ್ನು ಆಕ್ರೋಶ ಮತ್ತು ಭಯಭೀತರನ್ನಾಗಿಸಿದೆ. ಗ್ವಾಲಿಯರ್‌ನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ.

ಬಾಲಕಿ ಮೇಲೆ ಫೈರಿಂಗ್

ಇತ್ತೀಚೆಗಷ್ಟೇ 17 ವರ್ಷದ ಬಾಲಕಿಯೊಬ್ಬಳನ್ನು ಅವಳ ಟ್ಯೂಷನ್‌ಮೇಟ್ ಗುಂಡಿಕ್ಕಿರುವ ಆಘಾತಕಾರಿ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿತ್ತು. ಬಾಲಕಿ ಬಾಲ್ಲಭಗಢದ ಶ್ಯಾಮ್ ಕಾಲೋನಿಯಲ್ಲಿನ ತನ್ನ ಮನೆಯ ಸಮೀಪವಿದ್ದಾಗಲೇ ಆಕೆಯ ಮೇಲೆ ಫೈರಿಂಗ್ ಮಾಡಲಾಗಿದೆ. ಸಂಜೆ ಸುಮಾರು 5 ಗಂಟೆಯ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಆರೋಪಿಯು ಅವಳ ಮೇಲೆ ಗುಂಡು ಹಾರಿಸಿದ್ದ. ಸದ್ಯ, ಬಾಲಕಿ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.