ಚಿಕ್ಕಬಳ್ಳಾಪುರ: ದೇಶದಾದ್ಯಂತ ಅಡುಗೆ ಅನಿಲಕ್ಕೆ ಅಹಾಕಾರ ಹೆಚ್ಚಿರುವ ಸಂದರ್ಭ ದಲ್ಲಿಯೇ ಜಿಲ್ಲೆಯಲ್ಲಿ ಅಕ್ರಮ ಸಿಲಿಂಡರ್ ದಾಸ್ತಾನು(Illegal cylinder stockpiling) ವಿರುದ್ಧ ಜಿಲ್ಲಾಡಳಿತ ಸಮರ ಸಾರಿರುವುದು ಕಂಡು ಬಂದಿದೆ
ಚಿಕ್ಕಬಳ್ಳಾಪುರ ನಗರದಲ್ಲಿ ತಹಶೀಲ್ದಾರ್ ರಶ್ಮಿ(Tahsildar Rashmi) ನೇತೃತ್ವದ ತಂಡ ನಗರದ ಭಗವತಿ ಗ್ರಾಂಡ್ ಹೋಟೆಲ್ ಸೇರಿದಂತೆ ನಾನಾ ಕಡೆ ಶೋಧ ಕಾರ್ಯ ನಡೆಸಿ 22 ವಾಣಿಜ್ಯ ಸಿಲಿಂಡರ್(Commercial cylinder) 13 ಗೃಹಬಳಕೆ ಸಿಲಿಂಡರ್(Domestic cylinder) ಗಳನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ: Hotel Raid: ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; 2 ಗೃಹ ಬಳಕೆ ಸಿಲಿಂಡರ್‌ಗಳ ಜಪ್ತಿ
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ತಹಸಿಲ್ದಾರ್ ರಶ್ಮಿ, ಇರಾನ್ ಮತ್ತು ಇಸ್ರೇಲ್ ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ವಿಶ್ವವನ್ನು ಕಾಡಿರುವಂತೆ ಭಾರತವನ್ನು ತೀವ್ರವಾಗಿ ಬಾಧಿಸಿದೆ. ಪರಿಣಾಮ ಪೆಟ್ರೋಲಿಯಂ ಉತ್ಪನ್ನಗಳ ಆಮದಿನಲ್ಲಿ ಭಾರೀ ಏರುಪೇರಾಗಿದೆ. ಇದನ್ನು ಸರಿ ದೂಗಿಸಲು ಭಾರತ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಇಂತಹ ಸಂದಿಗ್ಧ ಸಂದರ್ಭವನ್ನು ಬಳಸಿಕೊಂಡಿರುವ ಕೆಲವರು ಹಣ ಮಾಡುವ ಉದ್ದೇಶದಿಂದ ಅಡುಗೆ ಅನಿಲ ಸಿಲಿಂಡರ್ ಅಕ್ರಮ ದಾಸ್ತಾನಿಗೆ ಮುಂದಾಗಿರು ವುದು ಕಂಡು ಬಂದಿದೆ.
ಇದರ ವಿರುದ್ಧ ಆರಂಭದಿಂದಲೂ ಜಿಲ್ಲಾಡಳಿತ ಸಮರ ಸಾರಿದೆ. ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಚೇಳೂರು ಗೌರಿಬಿದನೂರು ತಾಲೂಕುಗಳಲ್ಲಿ ಅಕ್ರಮ ಸಿಲಿಂಡರ್ ವಶಪಡಿಸಿಕೊಂಡಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿಯೂ ಶನಿವಾರ ತಾಲೂಕು ಆಡಳಿತ 35 ಸಿಲಿಂಡರ್'ಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಅಕ್ರಮ ಸಿಲಿಂಡರ್ ದಾಸ್ತಾನು ಮಾಡುವವರು ವಿರುದ್ಧ ಕಾನೂನಿನ ರೀತಿ ಕ್ರಮಕ್ಕೆ ಮುಂದಾಗಿದೆ.
ಆ ಮೂಲಕ ಯಾರೂ ಕೂಡ ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಗಳ ದಾಸ್ತಾನು ಮಾಡಬಾರದು. ಮಾಡಿದರೆ ಶಿಕ್ಷೆಗೆ ಗುರಿಯಾಗುತ್ತಿರಿ ಎಂಬ ಎಚ್ಚರಿಕೆ ರವಾನೆ ಮಾಡಿದೆ.