ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಮಾಸ್ಟರ್ ಮೈಂಡ್ ಬಿಹಾರದಲ್ಲಿ ಬಂಧನ

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಸ್ಟರ್ ಮೈಂಡ್ ಬಿಜೇಂದ್ರ ಗುಪ್ತಾನನ್ನು ಬಿಹಾರದಲ್ಲಿ ಬಂಧಿಸಲಾಗಿದೆ. ಬಿಜೇಂದ್ರ ಗುಪ್ತಾ ದೇಶಾದ್ಯಂತ ನಡೆಯುವ ಹಲವಾರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆತನ ಪತ್ತೆಗಾಗಿ ಬಿಹಾರದ ಹಲವಾರು ಕಡೆ ಮಹಾರಾಷ್ಟ್ರ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು.

ಸಂಗ್ರಹ ಚಿತ್ರ

ಮಹಾರಾಷ್ಟ್ರ: ದೇಶಾದ್ಯಂತ ನಡೆಯುವ ಹಲವಾರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ (question paper leak case) ಪ್ರಕರಣದ ಮಾಸ್ಟರ್ ಮೈಂಡ್ (TET question paper leak master mind) ಬಿಜೇಂದ್ರ ಗುಪ್ತಾನನ್ನು ಬಿಹಾರದಲ್ಲಿ (Bihar) ಬಂಧಿಸಲಾಗಿದೆ. ಆತನಿಗಾಗಿ ಬಿಹಾರದ ಹಲವಾರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಮಹಾರಾಷ್ಟ್ರ ಪೊಲೀಸರು ಅಂತಿಮವಾಗಿ ಆತನನ್ನು ಸಹಚರನೊಂದಿಗೆ ಬಂಧಿಸಿದರು. ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಆತನನ್ನು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರೂ ಆತ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದನು.

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಬಿಜೇಂದ್ರ ಗುಪ್ತಾ ಮತ್ತು ಆತನ ಪತ್ನಿ ಸೇರಿದಂತೆ ಹಲವಾರು ಆರೋಪಿಗಳನ್ನು ಬಂಧಿಸಿದೆ. ಪೋಲೀಸರ ನಿರಂತರ ಹುಡುಕಾಟದ ವೇಳೆ ಬಿಜೇಂದ್ರ ಗುಪ್ತಾ ಮಾತ್ರ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಹೀಗಾಗಿ ಆತನನ್ನು ಅಂತರರಾಜ್ಯದಲ್ಲಿ ಹುಡುಕಾಟ ನಡೆಸಲಾಯಿತು.

ಜಂತರ್ ಮಂತರ್ ಪ್ರತಿಭಟನೆ: ಭದ್ರತಾ ಸಿಬ್ಬಂದಿ ಮೇಲೆ ಹರಿತವಾದ ಆಯುಧಗಳಿಂದ ದಾಳಿ; 2,500ಕ್ಕೂ ಹೆಚ್ಚು ಅಪರಾಧಿಗಳ ಗುರುತು ಪತ್ತೆ

ದೇಶಾದ್ಯಂತ ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸುದ್ದಿ ಮಾಡುತ್ತಿದೆ. ಈ ನಡುವೆ ಈಗ ಬಿಜೇಂದ್ರ ಗುಪ್ತಾನ ಬಂಧನವಾಗಿದ್ದು, ಇದರಿಂದ ಹಲವಾರು ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ. 2024ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಿಜೇಂದ್ರ ಗುಪ್ತಾನ ಹೆಸರು ಕೇಳಿ ಬಂದಿತ್ತು. ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಇದು ಬಹಿರಂಗವಾಗಿತ್ತು. ಈ ಸಂದರ್ಭದಲ್ಲಿ ಬಿಜೇಂದ್ರ ಗುಪ್ತಾ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಹಲವಾರು ರಹಸ್ಯ ವಿಷಯಗಳನ್ನು ಹಂಚಿಕೊಂಡಿದ್ದನು. ಇದರಲ್ಲಿ ಸಿಂಡಿಕೇಟ್‌ನ ಕಾರ್ಯನಿರ್ವಹಣೆಯ ಬಗ್ಗೆಯೂ ಹೇಳಿದ್ದನು.

ದೇಶಾದ್ಯಂತ ನಡೆದ ಹಲವಾರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಬಿಜೇಂದ್ರ ಗುಪ್ತಾ ಪ್ರಮುಖ ಪಾತ್ರ ವಹಿಸಿದ್ದಾನೆ. ಹೀಗಾಗಿ ಈತನ ಬಂಧನದಿಂದ ಹೆಚ್ಚಿನ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ತನಿಖಾಧಿಕಾರಿಗಳು.

ಬಿಜೇಂದ್ರ ಗುಪ್ತಾನ ಪತ್ನಿ ಸುಮನ್ ಗುಪ್ತಾ ಕೂಡ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಆಕೆ ಬಿಜೇಂದ್ರ ಗುಪ್ತಾನ ಜಾಲದ ಬಗ್ಗೆ ತಿಳಿದಿದ್ದಳು. ಈ ಜಾಲಕ್ಕೆ ಸಂಬಂಧಿಸಿದ ಹಲವಾರು ಹಣಕಾಸಿನ ವಹಿವಾಟುಗಳನ್ನು ಆಕೆಯ ಸಮ್ಮುಖದಲ್ಲೇ ನಡೆಸಲಾಗಿದೆ. ದೆಹಲಿ ಮತ್ತು ಪಾಟ್ನಾದಲ್ಲಿನ ಬಿಜೇಂದ್ರ ಗುಪ್ತಾನ ಆಸ್ತಿಗಳು ಸೇರಿದಂತೆ ಹಲವಾರು ಆಸ್ತಿಗಳನ್ನು ಅಕ್ರಮವಾಗಿ ಬಂದ ಆದಾಯದಿಂದ ಖರೀದಿಸಲಾಗಿದೆ ಎನ್ನಲಾಗಿದೆ.

ಟಿಇಟಿ ಪ್ರಕರಣಕ್ಕೆ ಸಂಬಂಧಿಸಿ ಜುಲೈ 3 ರಂದು ಎಸ್‌ಐಟಿ ಕಪಿಲ್ ದಹಿಯಾ, ಮಿಥುನ್ ಸಿಂಗ್ ಮತ್ತು ಸೋನು ಸಿಂಗ್ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಹರಿಯಾಣದ ಸೋನಿಪತ್ ಜಿಲ್ಲೆಯ ನಿವಾಸಿ ಕಪಿಲ್ ದಹಿಯಾ ಪ್ರಶ್ನೆ ಪತ್ರಿಕೆ ಖರೀದಿದಾರರನ್ನು ಗುರುತಿಸಲು ಮತ್ತು ಸೋರಿಕೆಯಾದ ಟಿಇಟಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲು ಮುಂಬೈಗೆ ಬಂದಿದ್ದನು. ಬಿಹಾರದಲ್ಲಿ ಬಂಧಿಸಲ್ಪಟ್ಟ ಮಿಥುನ್ ಸಿಂಗ್ ಸೋರಿಕೆಯಾದ ಟಿಇಟಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು ಪುಣೆಗೆ ಬಂದಿದ್ದ ವೇಳೆ ಬಂಧನಕ್ಕೆ ಒಳಗಾಗಿದ್ದನು. ಬಿಜೇಂದ್ರ ಗುಪ್ತಾನಿಗಾಗಿ ಹಲವಾರು ನಕಲಿ ಗುರುತಿನ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಜೆಪಿ- ಕೇಂದ್ರ ಸರ್ಕಾರದ ನಡುವೆ ಇಂದು ಮೂರನೇ ಹಂತದ ಮಾತುಕತೆ; ರಾಜೀನಾಮೆ ನೀಡ್ತಾರಾ ಪ್ರಧಾನ್‌?

ಜೂನ್ 28ರಂದು ನಡೆಯಲಿದ್ದ ಟಿಇಟಿ ಪರೀಕ್ಷೆಗೂ ಮೊದಲು ಥಾಣೆಯ ಕೊಂಗಾವ್ ಪ್ರದೇಶದಲ್ಲಿ ಸೋರಿಕೆಯಾದ ಟಿಇಟಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆಕಾಶ್ ಕುಮಾರ್, ರಾಜೀವ್ ಕುಮಾರ್ ಮತ್ತು ಧೀರಜ್ ಸಿಂಗ್ ಬಂಧನದ ಬಳಿಕ ಪೊಲೀಸ್ ತನಿಖೆ ತೀವ್ರಗೊಂಡಿತ್ತು.

ವಿದ್ಯಾ ಇರ್ವತ್ತೂರು

View all posts by this author